More

    ಚಂಡಮಾರುತದಲ್ಲಿ ಬುಡಮೇಲಾಗಿದ್ದ ಮರದ ಮರುನಾಟಿ, ಸೌರವ್​ ಗಂಗೂಲಿ ದಿ ಹೀರೋ!

    ನವದೆಹಲಿ: ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಅಪ್ಪಳಿಸಿದ ಅಂಫಾನ್​ ಚಂಡಮಾರುತಕ್ಕೆ ಸಿಲುಕಿ ಬುಡಮೇಲಾಗಿ ಬಿದ್ದಿದ್ದ ಮಾವಿನಹಣ್ಣಿನ ಮರವನ್ನು ಮರುನಾಟಿ ಮಾಡಿಸುವ ಮೂಲಕ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಪರಿಸರ ಪ್ರೇಮ ಮೆರೆದಿದ್ದಾರೆ.

    ಸೌರವ್​ ಗಂಗೂಲಿ ಕೋಲ್ಕತಾದ ಬೆಹಲಾ ಬಡಾವಣೆಯಲ್ಲಿರುವ ಐಷಾರಾಮಿ ಮನೆಯಲ್ಲಿ ವಾಸವಾಗಿದ್ದಾರೆ. ಮನೆಯ ಸುತ್ತ ಹಲವು ಮರಗಿಡಗಳನ್ನು ಬೆಳೆಸಿದ್ದಾರೆ. ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದ ಅಂಫಾನ್​ ಚಂಡಮಾರುತಕ್ಕೆ ಸಿಲುಕಿ ಗಂಗೂಲಿ ಅವರ ಮನೆ ತೋಟದಲ್ಲಿದ್ದ ಹಳೆಯ ಮಾವಿನಮರ ಬುಡಮೇಲಾಗಿ ಬಿದ್ದಿತ್ತು.

    ತಕ್ಷಣವೇ ಅದರ ಮರುನಾಟಿಗೆ ಕ್ರಮ ಕೈಗೊಂಡ ಅವರು, ಮರುನಾಟಿ ಪ್ರಕ್ರಿಯೆಯ ತಾವೂ ಸಹಿತ ಪಾಲ್ಗೊಂಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ಮರವನ್ನು ಮೇಲಕ್ಕೆ ಎತ್ತಿ, ಲಂಬಾಕಾರವಾಗಿ ನಿಲ್ಲಿಸಿ, ಮರುನಾಟಿ ಮಾಡಬೇಕಾಯಿತು. ಅದು ತುಂಬಾ ದೊಡ್ಡದಾಗಿದ್ದರಿಂದ, ಅದನ್ನು ಮರುನಾಟಿ ಮಾಡಲು ತುಂಬಾ ಪ್ರಯಾಸಪಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

    ರೆಪೋ ದರವನ್ನು 40 ಮೂಲಾಂಶ ಕಡಿತಗೊಳಿಸಿದ ಆರ್​ಬಿಐ, ಗ್ರಾಹಕರಿಗೆ ಏನೆಲ್ಲ ಲಾಭ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts