More

    ‘ಭವಿಷ್ಯದ ಅಮಿತಾಭ್​’ಗೆ ಬಿರುದುಗಳ ಮಹಾಪೂರ: ಆತ್ಮಕಥೆ ಬಿಚ್ಚಿಟ್ಟು ಕಣ್ಣೀರಾದ ನಟ ಸೋನು

    ನವದೆಹಲಿ: ಲಾಕ್​ಡೌನ್​ ಆರಂಭವಾದಾಗಿನಿಂದ ವಲಸೆ ಕಾರ್ಮಿಕರ ನೆರವಿಗೆ ಟೊಂಕ ಕಟ್ಟಿ ನಿಂತ ರಿಯಲ್​ ಹೀರೋ ಸೋನು ಸೂದ್​. ಆರಂಭದ ದಿನದಿಂದಲೂ ವಲಸೆ ಕಾರ್ಮಿಕರಿಗೆ ಇವರು ಮಾಡಿರುವ ಸಹಾಯ ಅಷ್ಟಿಷ್ಟಲ್ಲ. ತಮ್ಮದೇ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ಜನರಿಗೆ ಜಾಗ ನೀಡಿದ್ದಾರೆ. ಅದೆಷ್ಟೋ ಕಾರ್ಮಿಕರಿಗೆ ಅವರವರ ಊರು ತೆರಳಲು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಜಾರ್ಖಾಂಡ್‌ ಮುಂತಾದ ರಾಜ್ಯಗಳ ವಲಸೆ ಕಾರ್ಮಿಕರಿಗಾಗಿ ಸೋನು ಹಗಲಿರುಳೂ ಶ್ರಮ ವಹಿಸಿ ದುಡಿದಿದ್ದಾರೆ.

    ವಲಸೆ ಕಾರ್ಮಿಕರಿಗಾಗಿಯೇ ಸಹಾಯವಾಣಿ ಶುರು ಮಾಡಿರುವ ಈ ನಟನಿಗೆ ದಿನವೂ ಬರುತ್ತಿರುವ ಕರೆಗಳಿಗೆ ಲೆಕ್ಕವೇ ಇಲ್ಲ. ಇವರ ಈ ನೆರವಿಗೆ ಪತ್ನಿ ಕೂಡ ಸಾಥ್​ ನೀಡಿದ್ದು, ಕಾರ್ಮಿಕರ ವಿವರಗಳನ್ನು ಅವರು ಬರೆದುಕೊಳ್ಳುತ್ತಾರೆ. ಅಪ್ಪನ ಸೇವೆಗೆ ಸಹಕಾರ ನೀಡುತ್ತಿರುವ ಮಕ್ಕಳು. ಯಾವ ಕಾರ್ಮಿಕರು ಯಾವ ಬಸ್‌ನಲ್ಲಿ ತೆರಳಬೇಕು ಎಂಬುದನ್ನು ಪಟ್ಟಿ ಮಾಡುವ ಮೂಲಕ ಕಾರ್ಮಿಕರಿಗೆ ನೆರವಾಗುತ್ತಿದ್ದಾರೆ.

    ಇದನ್ನೂ ಓದಿ: ಕರೊನಾ ಸೋಂಕು: ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾ ಆಸ್ಪತ್ರೆಗೆ

    ಇವರ ನೆರವಿಗೆ ಇದಾಗಲೇ ಹಲವಾರು ಗಣ್ಯಾತಿಗಣ್ಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಚಿವೆ ಸ್ಮೃತಿ ಇರಾನಿ ಕೂಡ ಸೋನು ಅವರನ್ನು ಹಾಡಿ ಹೊಗಳಿದ್ದಾರೆ. ಟ್ವಿಟರ್​ ಮೂಲಕವೂ ಜನರಿಗೆ ನೆರವಾಗುತ್ತಿರುವ ಕಾರಣ ಇವರಿಗೆ ಟ್ವಟರ್​ ಹೀರೋ, ಇಂಡಿಯನ್​ ರಿಯಲ್​ ಹೀರೋ, ಹೋಮ್​ ಮಿನಿಸ್ಟರ್​ ಎಂದೆಲ್ಲಾ ಬಿರುದು ಬಾವಲಿಗಳು ಲಭಿಸಿವೆ.

    ಇದೀಗ ಟ್ವಿಟರೇ ಖುದ್ದಾಗಿ ಸೋನು ಅವರಿಗೆ ‘ಭವಿಷ್ಯದ ಅಮಿತಾಭ್​ ಬಚ್ಚನ್’ ಎಂದು ಬಿರುದು ನೀಡಿ ಶ್ಲಾಘನೆ ವ್ಯಕ್ತಪಡಿಸಿದೆ. ಕಷ್ಟದಲ್ಲಿರುವವರಿಗೆ ನೆರವಾಗುವಲ್ಲಿ ಅಮಿತಾಭ್​ ಸದಾ ಸಿದ್ಧ ಹಸ್ತರು. ಆದ್ದರಿಂದಲೇ ಅವರಿಗೆ ಅಪಾರ ಗೌರವವಿದೆ.  ​ಅಮಿತಾಭ್​ ಬಚ್ಚನ್​ ಅವರ ನೆರವನ್ನು ಸ್ಮರಿಸುವ ಸಲುವಾಗಿ ಅವರ ಜಸ್ಲಾ ಬಂಗ್ಲೋದಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬುವಂತೆ, ಸೂದ್​ ಅವರ ಮನೆಯ ಮುಂದೆಯೂ ಭಾನುವಾರವೂ ಬಿಡದೆ ಜನಜಂಗುಳಿ ಸೇರುವ ಕಾರಣ, ಇಂಥದ್ದೊಂದು ಬಿರುದು ಅವರಿಗೆ ಲಭಿಸಿದೆ.

    ಅಷ್ಟಕ್ಕೂ ವಲಸೆ ಕಾರ್ಮಿಕರ ಬಗ್ಗೆ ತಮಗೆ ಇಷ್ಟೊಂದು ಕಾಳಜಿ ಏಕಿದೆ ಎಂಬ ರಹಸ್ಯ ಬಿಚ್ಚಿಟ್ಟು ಭಾವುಕರಾದ ಸೋನು ಸೂದ್​, ‘ಇವರ ಕಷ್ಟ ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಏಕೆಂದರೆ, ಒಂದು ಕಾಲದಲ್ಲಿ ನಾನು ಕೂಡ ಹೀಗೆ ಕೆಲಸ ಹುಡುಕಿಕೊಂಡು ವಲಸೆ ಕಾರ್ಮಿಕನಾಗಿ ಬಂದವನೇ. ನನ್ನ ಬಳಿ ಕನಸು ಬಿಟ್ಟರೆ ಏನೂ ಇರಲಿಲ್ಲ.

    ಮುಂಗಡ ಟಿಕೆಟ್‌ ಇಲ್ಲದೆ ರೈಲಿನಲ್ಲಿ ನಾನು ಮುಂಬೈಗೆ ಬಂದಿದ್ದೆ. ರೈಲು ಬೋಗಿಯ ಬಾಗಿಲ ಬಳಿ ನಿಂತುಕೊಂಡು ಪ್ರಯಾಣ ಮಾಡಿದೆ. ವಾಶ್‌ರೂಮ್‌ ಪಕ್ಕದಲ್ಲೇ ಮಲಗಿಕೊಂಡಿದ್ದೆ. ಕಷ್ಟ ಎಂದರೆ ಏನೆಂದು ನನಗೆ ಗೊತ್ತು’ ಎಂದಿದ್ದಾರೆ ಸೋನು. ಈ ಕಾರ್ಮಿಕರನ್ನು ನೋಡಿದಾಗ ನನಗೆ ಆ ದಿನಗಳು ನೆನಪಾಗುತ್ತವೆ. ಅನ್ನ-ನೀರು ಇಲ್ಲದೆ ಬರಿಗಾಲಿನಲ್ಲಿ ನಡೆಯುತ್ತಿರುವ ಜೀವಗಳನ್ನು ನೋಡಿದರೆ ನನ್ನದೇ ನೆನಪು ಕಾಡುತ್ತದೆ. ಆದ್ದರಿಂದಲೇ ಇವರ ನೆರವಿಗೆ ನಿಂತಿದ್ದೇನೆ ಎಂದಿದ್ದಾರೆ.

    ಇದನ್ನೂ ಓದಿ: ಇದೇನಪ್ಪಾ ಲಾಕ್​ಡೌನು… ಎಂದು ಶಪಿಸ್ತಾ ಇರೋ ಮದುಮಕ್ಕಳೇ ಇದನ್ನೊಮ್ಮೆ ಓದಿಬಿಡಿ!

    ಲಾಕ್​ಡೌನ್​ ಮುಗಿದು ಎಲ್ಲವೂ ಸರಿಯಾದ ಮೇಲೆ ಪ್ರತಿ ಭಾನುವಾರ ನೀವು ರಜೆ ಪಡೆಯಲೇಬೇಕು. ಏಕೆಂದರೆ ವಲಸೆ ಕಾರ್ಮಿಕರೆಲ್ಲರೂ ನಿಮ್ಮನ್ನು ಭೇಟಿಯಾಗಲು ಬರುತ್ತಾರೆ. ಸೋನು ಸೂದ್​ ಮನೆ ಯಾವುದು ಎಂದು ಎಲ್ಲರೂ ಹುಡುಕುತ್ತಾರೆ. ಏಕೆಂದರೆ ನೀವು ಭವಿಷ್ಯದ ಅಮಿತಾಭ್​ ಬಚ್ಚನ್​ ಎಂದು ಟ್ವಿಟರ್​ ಕೊಂಡಾಡಿದೆ.

    ಅದಕ್ಕೆ ಸೋನು ಸೂದ್​, ‘ಅವರೇಕೆ ನನ್ನನ್ನು ಭೇಟಿಯಾಗಲು ಬರಬೇಕು, ನಾನೇ ಅವರನ್ನು ಭೇಟಿಯಾಗಲು ಹೋಗುವೆ. ನಾನು ಈ ಕಾರ್ಮಿಕರು ತಯಾರಿಸಿರುವ ಆಲೂ ಪರೋಟಾ ಸೇವಿಸಿದ್ದಾರೆ. ಪಾನ್​ ಮತ್ತು ಚಹ ಸ್ವೀಕರಿಸಿದ್ದೇನೆ. ಅದನ್ನೆಲ್ಲಾ ನಾನು ತೀರಿಸಬೇಕಿದೆ. ಆದ್ದರಿಂದ ನಾನೇ ಅವರ ಬಳಿ ಸಾಗಬೇಕಿದೆ ಎಂದು ಹೇಳುವ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. (ಏಜೆನ್ಸೀಸ್​)

    ಕರೊನಾದ ವರ್ಷ ಭವಿಷ್ಯ ತಿಳಿಸಿದ್ದಾರೆ ನಿಮ್ಹಾನ್ಸ್​ ತಜ್ಞ: ಇದರಲ್ಲೇನಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts