More

    ನಟಿ ಸುಧಾರಾಣಿ ಇನ್ಮುಂದೆ ‘ಡಾಕ್ಟರ್‌’: ಕಲಾಕ್ಷೇತ್ರದ ಕೊಡುಗೆಗೆ ಸಿಕ್ಕಿತು ಗೌರವ

    ಬೆಂಗಳೂರು: 12ನೇ ವಯಸ್ಸಿನಲ್ಲಿಯೇ ‘ಆನಂದ್‌’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ನಟ ಸುಧಾರಾಣಿ ಇನ್ನುಮುಂದೆ ಡಾ.ಸುಧಾರಾಣಿಯಾಗಲಿದ್ದಾರೆ. 48 ವರ್ಷದ ಈ ನಟಿ ಕಲಾ ಕ್ಷೇತ್ರದಲ್ಲಿ ತೋರಿಸಿರುವ ಸಾಧನೆಗೆ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ.

    ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ಸಂತಸ ಹಂಚಿಕೊಂಡಿದ್ದಾರೆ. ‘ನಿಮ್ಮೆಲ್ಲರೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನಿಂದ ನನಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

    ಇದೀಗ ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 35 ವರ್ಷ ಕಳೆದಿವೆ. ಇದಾಗಲೇ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸುಧಾರಾಣಿ, ಧಾರಾವಾಹಿ ಹಾಗೂ ಜಾಹೀರಾತುಗಳಲ್ಲಿಯೂ ಬಿಜಿ ಇದ್ದಾರೆ. ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ, ರಮೇಶ್ ಅರವಿಂದ್‌ರವರ ಜೊತೆ ಪಂಚಮ ವೇದ, ಶ್ರೀಗ‍ಂಧ, ಅರಗಿಣಿ ಮತ್ತು ಅನುರಾಗ ಸಂಗಮ ಸೇರಿದಂತೆ ಹಲವಾರು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ.

    ಪಂಚಮ ವೇದ ಮತ್ತು ಮೈಸೂರು ಮಲ್ಲಿಗೆ ಚಿತ್ರಕ್ಕಾಗಿ ಸುಧಾರಾಣಿಯವರಿಗೆ ಎರಡು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಸಿಕ್ಕಿದೆ. 2000ನೇ ಸಾಲಿನಲ್ಲಿ ಸ್ಪರ್ಶ ಚಲನಚಿತ್ರಕ್ಕೆ ಅತ್ಯುತ್ತಮ ನಟಿಯಂದು ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2015ರಲ್ಲಿ ವಾಸ್ತು ಪ್ರಕಾರ ಚಲನ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿಯಾಗಿ ಫಿಲ್ಮ್‌ಫೇರ್‌ ಪ್ರಶಸ್ತಿ ಸಿಕ್ಕಿದೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Sudharani (@sudharanigovardhan)

    ಪ್ರತಿಭಟನೆ ವೇಳೆ ಮೃತಪಟ್ಟ ರೈತರಿಗೆ ಪರಿಹಾರ ಸಿಗುತ್ತಾ? ಸಚಿವರ ಉತ್ತರ ಕೇಳಿ ಪೇಚಿಗೆ ಸಿಲುಕಿದ ಪ್ರತಿಪಕ್ಷಗಳು, ಸಂಘಟನೆಗಳು!

    ಒಮಿಕ್ರಾನ್‌ ಭೀತಿ ನಡುವೆಯೇ ಕಾಗೆಗಳ ಸಾವು: ದೃಢಪಟ್ಟ ಹಕ್ಕಿಜ್ವರ- ಕೋಳಿಗಳ ಸ್ಯಾಂಪಲ್‌ ರವಾನೆ, ಕೆಲವೆಡೆ ಮಾಂಸದಂಗಡಿ ಕ್ಲೋಸ್‌

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts