More

    ಇದೇನಪ್ಪಾ ಲಾಕ್​ಡೌನು… ಎಂದು ಶಪಿಸ್ತಾ ಇರೋ ಮದುಮಕ್ಕಳೇ ಇದನ್ನೊಮ್ಮೆ ಓದಿಬಿಡಿ!

    ಭೋಪಾಲ್ (ಮಧ್ಯ ಪ್ರದೇಶ): ಕಳೆದೆರೆಡು ತಿಂಗಳುಗಳಿಂದ ಲಾಕ್​ಡೌನ್​ ಲಕ್ಷಾಂತರ ಮಂದಿಗೆ ಸಮಸ್ಯೆಯನ್ನು ತಂದೊಡ್ಡಿರುವುದು ನಿಜವೇ. ಆದರೆ ಅದರಲ್ಲಿಯೂ ಮದುವೆಯ ಕನಸು ಕಾಣುತ್ತಿದ್ದ ಸಹಸ್ರಾರು ಮದುಮಕ್ಕಳಿಗೆ ಇದು ಅಕ್ಷರಶಃ ನರಕಯಾತನೆಯ ದಿನಗಳು.

    ಲಾಕ್​ಡೌನ್​ನಿಂದಾಗಿ ಅನೇಕ ಮದುವೆಗಳು ಮುಂದೂಡಲ್ಪಟ್ಟಿವೆ. ಇದೀಗ ಲಾಕ್​ಡೌನ್​ ನಿಯಮ ಸಡಿಲಿಕೆ ಮಾಡಿ, ಕೆಲವೇ ಜನರನ್ನು ಆಮಂತ್ರಿಸಲು ಸರ್ಕಾರಗಳು ಅನುಮತಿ ನೀಡಿದ್ದರೂ, ಅದು ಅನೇಕ ಕುಟುಂಬಗಳಿಗೆ, ಮದುಮಕ್ಕಳಿಗೆ ಸಹ್ಯವಾಗುತ್ತಿಲ್ಲ. ಜೀವನದಲ್ಲಿ ಒಂದೇ ಸಲ ಮದುವೆಯಾಗುವುದು, ಸಿಂಪಲ್​ ಆಗೋಕೆ ಆಗತ್ತಾ ಎಂದೋ, ದೂರದೂರದ ಊರುಗಳಿಂದ ಕುಟುಂಬಸ್ಥರು, ಸ್ನೇಹಿತರು ಬರದ ಮದುವೆಯೂ ಒಂದು ಮದುವೆನಾ ಅಂತನೋ ಮೂಗುಮುರಿಯುವವರೇ ಹೆಚ್ಚು.

    ಇದನ್ನೂ ಓದಿ: ಒಂದು ಹುಟ್ಟುಹಬ್ಬದಿಂದ ಇಡೀ ಗ್ರಾಮವಾಯ್ತು ಸೀಲ್​ಡೌನ್​- ಆದದ್ದಾದರೂ ಏನು?

    ಇದೇ ಕಾರಣಕ್ಕೆ, ವಾಸ್ತವವನ್ನು ಅರಿಯದೇ ಲಾಕ್​ಡೌನ್​ ಮುಂದೂಡುತ್ತಿರುವ ಸರ್ಕಾರಗಳನ್ನೇ ಎಷ್ಟೋ ಮದುಮಕ್ಕಳು ಶಪಿಸುತ್ತಿದ್ದಾರೆ. ಅಂಥವರು ಈ ಘಟನೆಯನ್ನೊಮ್ಮೆ ಓದಲೇಬೇಕು.

    ಅದೇನೆಂದರೆ, ಲಾಕ್​ಡೌನ್​ ನಿಯಮ ಇದ್ದರೂ, ಅದಕ್ಕೆ ಕ್ಯಾರೇ ಮಾಡದೇ ಮದುವೆ ಮಾಡಿದ ಭೋಪಾಲ್​ನ ಕುಟುಂಬವೀಗ ಅಕ್ಷರಶಃ ಆತಂಕದಲ್ಲಿ ಮುಳುಗಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ನವ ದಂಪತಿ ಹಾಗೂ ಕುಟುಂಬಸ್ಥರು ಸೇರಿದಂತೆ ಮದುವೆಗೆ ಬಂದಿದ್ದ ಇತರೆ 100 ಮಂದಿ ಕ್ವಾರಂಟೈನ್ ಕೇಂದ್ರ ಸೇರುವ ಪರಿಸ್ಥಿತಿ ತಲೆದೋರಿದೆ. ಮದುವೆಯ ನಂತರ ಖುಷಿಖುಷಿಯಾಗಿ ಇರಬೇಕಿದ್ದ ನೂತನ ವಧು-ವರರೂ ಕುಟುಂಬದವರು ಮಾಡಿರುವ ತಪ್ಪಿಗಾಗಿ ನೋವಿನಲ್ಲಿಯೇ ದಿನದೂಡುವ ಪರಿಸ್ಥಿತಿ ಬಂದಿದೆ.

    ಅದೇಕೆ ಎಂದರೆ ಮದುವೆಗೆ ಆಗಮಿಸಿದ್ದ ವಧುವಿನ ಸಂಬಂಧಿಯೊಬ್ಬರಿಗೆ ಕರೊನಾ ವೈರಸ್ ಇರುವುದು ತಿಳಿದುಬಂದಿದೆ. ಇವರು ಎಲ್ಲೆಲ್ಲಿ ಭೇಟಿ ನೀಡಿದ್ದರು ಎಂಬ ಬಗ್ಗೆ ವೈದ್ಯರು ಪರಿಶೀಲಿಸಿದಾಗ, ಮದುವೆಗೆ ಹೋಗಿರುವ ವಿಷಯ ತಿಳಿಸಿದೆ. ಮದುವೆ ಮನೆಯಲ್ಲಿ ಇವರು ಸಾಕಷ್ಟು ಓಡಾಟ ನಡೆಸಿದ್ದರಿಂದ ಹಾಗೂ ಮದುಮಕ್ಕಳ ಸಂಪರ್ಕಕ್ಕೂ ಇವರು ನೇರವಾಗಿ ಬಂದುದ್ದರಿಂದ ಅವರನ್ನೂ ಪ್ರತ್ಯೇಕಿಸಿ ಕ್ವಾರಂಟೈನ್​ನಲ್ಲಿ ಇಡಲಾಗಿದೆ.

    ಇದನ್ನೂ ಓದಿ: ಅಬ್ಬಬ್ಬಾ! ಇದು ರೆಡ್​ಝೋನ್​ ಕುದುರೆ: ಹತ್ತಿರ ಹೋದರೆ ಭಾರಿ ಡೇಂಜರ್​!

    ಎಲ್ಲರ ಗಂಟಲು ದ್ರವದ ಸ್ಯಾಂಪಲ್​ ಪಡೆಯಲಾಗಿದೆ. ಅದರ ವರದಿ ಬರುವವರೆಗೂ ಮದುಮಕ್ಕಳು ಸೇರಿದಂತೆ ಕುಟುಂಬಸ್ಥರು, ಮದುವೆಯಲ್ಲಿ ಹಾಜರು ಇದ್ದವರೆಲ್ಲರೂ ಆತಂಕದಲ್ಲಿಯೇ ದಿನದೂಡಬೇಕಾಗಿ ಬಂದಿದೆ.

    ಅಷ್ಟಕ್ಕೂ ಇವರು ಮದುವೆಗೆ ದೆಹಲಿಯಲ್ಲಿ ಇವರು ಬಂದಾಗ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೆ ಮದುವೆ ಮುಗಿಸಿ ಹೋಗಿ ಒಂದೆರಡು ದಿನಗಳಲ್ಲಿಯೇ ಸೋಂಕಿನ ಲಕ್ಷಣ ಕಾಣಿಸಿಕೊಂಡು ಪರೀಕ್ಷೆ ಮಾಡಿಸಿಕೊಂಡಾಗಲೇ ವಿಷಯ ಬೆಳಕಿಗೆ ಬಂದಿದೆ.

    ಹಾಗೆಂದು ಈ ರೀತಿ ಸಭೆ ಸಮಾರಂಭ ಮಾಡಿ ತೊಂದರೆಗೆ ಒಳಗಾಗಿರುವುದು ಇದೇ ಮೊದಲ ಪ್ರಕರಣವೇನಲ್ಲ. ಈಗಾಗಲೇ ಸಾಕಷ್ಟು ಪ್ರಕರಣಗಳಲ್ಲಿ ಈ ರೀತಿ ತೊಂದರೆ ಅನುಭವಿಸಿ ಕ್ವಾರಂಟೈನ್​ನಲ್ಲಿ ಆತಂಕದಲ್ಲಿ ದಿನ ದೂಡುತ್ತ ಇದ್ದವರ ಸಂಖ್ಯೆಯೂ ಕಡಿಮೆ ಏನಲ್ಲ. (ಏಜೆನ್ಸೀಸ್​)

    ಚೀನಾಕ್ಕೆ ಸೆಡ್ಡು- ಭಾರತದಲ್ಲಿ ತಯಾರಾಯ್ತು ಕೋಟಿಗೂ ಅಧಿಕ ಸ್ವದೇಶಿ ಪಿಪಿಇ ಕಿಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts