More

    ಅಬ್ಬಬ್ಬಾ! ಇದು ರೆಡ್​ಝೋನ್​ ಕುದುರೆ: ಹತ್ತಿರ ಹೋದರೆ ಭಾರಿ ಡೇಂಜರ್​!

    ಜಮ್ಮು: ನಿನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ನಾಯಿಯೊಂದಕ್ಕೆ ಅದರ ಮಾಲೀಕರು ಕ್ವಾರಂಟೈನ್​ ಮಾಡಿರುವ ಘಟನೆ ವರದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಕುದುರೆ ಸರದಿ. ಕರೊನಾ ವೈರಸ್​ ಮಹಾಮಾರಿ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿಗಳಿಗೂ ಹರಡುತ್ತದೆ ಎಂಬ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿರುವ ಬೆನ್ನಲ್ಲೇ ಮುಂಜಾಗರೂಕತಾ ಕ್ರಮವಾಗಿ ಪ್ರಾಣಿಗಳನ್ನೂ ಕ್ವಾರಂಟೈನ್​ನಲ್ಲಿ ಇಡುವ ಪ್ರಕ್ರಿಯೆ ಇದೀಗ ಶುರುವಾಗಿದೆ.

    ಪ್ರಾಣಿಗಳಿಂದ ಮನುಷ್ಯರಿಗೆ ಈ ವೈರಸ್​ ಹರಡಿರುವ ಬಗ್ಗೆ ಇನ್ನೂ ಪುರಾವೆಗಳು ಸಿಕ್ಕಿಲ್ಲ. ಆದರೆ ಮನುಷ್ಯರಿಂದ ಬೆಕ್ಕು, ನಾಯಿಗಳಿಗೆ ಸೋಂಕು ಹರಡಿರುವ ಘಟನೆ ನಡೆದಿದೆ. ಆದರೆ ಯಾರಿಂದ ಯಾವಾಗ, ಹೇಗೆ ಈ ವೈರಸ್​ ಹರಡುತ್ತದೆ ಎಂಬ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಲೇ ಇರುವ ಕಾರಣ, ಪ್ರಾಣಿಗಳನ್ನೂ ಕ್ವಾರಂಟೈನ್​ನಲ್ಲಿ ಇರಿಸುವ ಅನಿವಾರ್ಯತೆ ಉಂಟಾಗಿದೆ.

    ಅಂಥದ್ದೇ ಒಂದು ಪ್ರಕರಣ ಜಮ್ಮುವಿನಲ್ಲಿ ನಡೆದಿದೆ. ಇಲ್ಲಿಯ ರಾಜೌರಿ ಜಿಲ್ಲೆಯ ಕುದುರೆಯೊಂದನ್ನು 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಕುದುರೆಯ ಜತೆಗೆ ಅದನ್ನು ನೋಡಿಕೊಳ್ಳುವ ಮಾಲೀಕನನ್ನೂ ಕ್ವಾರಂಟೈನ್​ ಮಾಡಲಾಗಿದೆ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದೆ. ಇಂಥ ಪ್ರಕರಣ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ.

    ಇದನ್ನೂ ಓದಿ: ಕೋಳಿ ಫಾರ್ಮ್​ನಲ್ಲಿ ನಾಯಿಗಾಯ್ತು ಕ್ವಾರಂಟೈನ್​- ಎ.ಸಿ ಬದಲು ತಣ್ಣೀರು!

    ಅಷ್ಟಕ್ಕೂ ಈ ಕುದುರೆಗೆ ಕ್ವಾರಂಟೈನ್​ ಮಾಡಿರುವ ಹಿಂದಿರುವ ಕಾರಣ, ಸ್ವಲ್ಪ ಭಯಾನಕವೇ ಆಗಿದೆ. ಏಕೆಂದರೆ ಈ ಕುದುರೆ ಜಮ್ಮು ಮತ್ತು ಕಾಶ್ಮೀರದ ಅನೇಕ ರೆಡ್​ ಝೋನ್​ ಪ್ರದೇಶಗಳಲ್ಲಿ ನಿರಾತಂಕವಾಗಿ ಸಾಕಷ್ಟು ದಿನ ಓಡಾಡಿ ಬಂದಿದೆ. ಆದ್ದರಿಂದ ಕುದುರೆಗೂ ಸೋಂಕು ತಗುಲಿರುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

    ಸದ್ಯ ಕುದುರೆಯಲ್ಲಿ ಯಾವುದೇ ಲಕ್ಷಣಗಳು ಪತ್ತೆಯಾಗಿಲ್ಲ. ಆದ್ದರಿಂದ 14 ದಿನ ಕ್ವಾರಂಟೈನ್​ ಬಳಿಕವಷ್ಟೇ ಸತ್ಯಾಂಶ ತಿಳಿಯಲಿದೆ. ಆದ್ದರಿಂದ ಕ್ವಾರಂಟೈನ್​ ಅನಿವಾರ್ಯ ಎಂದಿದ್ದಾರೆ ವೈದ್ಯರು. ಮುಂದಿನ 14 ದಿನಗಳ ಕಾಲ ಕುದುರೆ ಸವಾರಿ ಮಾಡುವುದಾಗಲಿ ಅಥವಾ ಅದರ ಸಮೀಪ ಹೋಗಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಇದನ್ನೂ ಓದಿ: ಜಯಲಲಿತಾ ಸಂಪೂರ್ಣ ಆಸ್ತಿ ಯಾರಿಗೆ ಸೇರಿದ್ದು? ಹೈಕೋರ್ಟ್​ ನೀಡಿತು ಮಹತ್ವದ ತೀರ್ಪು

    ಕಳೆದ ಮಂಗಳವಾರ ಕುದುರೆ ಜತೆ ಜಮ್ಮು ಕಾಶ್ಮೀಕ ಸುತ್ತಾಡಿದ್ದ ಅದರ ಮಾಲೀಕ ರಾಜೌರಿಗೆ ವಾಪಸ್ ಆಗಿದ್ದ. ಮೊಘಲ್ ರಸ್ತೆಯಲ್ಲಿ ಆತನನ್ನು ತಡೆದು ನಿಲ್ಲಿಸಿ ಸ್ಕ್ರೀನಿಂಗ್ ಮಾಡಲಾಗಿತ್ತು. ಆಗ ರೆಡ್​ ಝೋನ್​ ಸುತ್ತಾಡಿರುವ ಬಗ್ಗೆ ತಿಳಿದಿದೆ. ವ್ಯಕ್ತಿಯನ್ನು ಪರೀಕ್ಷೆಗೊಳಪಡಿಸಿದ್ದು ವರದಿಗಾಗಿ ಕಾಯಲಾಗುತ್ತಿದೆ. ಆದರೆ ಕುದುರೆಗೂ ಸೋಂಕು ಇರಬಹುದು ಎಂಬ ಕಾರಣದಿಂದ ಅದಕ್ಕೂ ಕ್ವಾರಂಟೈನ್​ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

    ಈಗ ಕುದುರೆ ಕೂಡ ಅಪಾಯದ ಸ್ಥಿತಿಯಲ್ಲಿ ಇರುವ ಕಾರಣ, ಅದರ ಹತ್ತಿರ ಯಾರೂ ಹೋಗಕೂಡದು ಎಂದು ಆದೇಶ ಹೊರಡಿಸಲಾಗಿದೆ. ಅದಕ್ಕೆ ಆಹಾರ ಇತ್ಯಾದಿ ನೀಡುವಾಗ ಹತ್ತಿರ ಹೋಗಲೇಬೇಕಾದ ಅನಿವಾರ್ಯತೆ ಇರುವವರು ಎಲ್ಲಾ ರೀತಿಯ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಸದ್ಯ ಕುದುರೆಯನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. (ಏಜೆನ್ಸೀಸ್​)

    5 ಸಾವಿರಕ್ಕೆ ಕಂದನ ಮಾರಿದ ತಾಯಿ! ಕೊಂಡರು ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts