More

    ಸೋನು ಸೂದ್​ಗೆ ಸಂದ ಜಾಗತಿಕ ಮಟ್ಟದ ಪುರಸ್ಕಾರ

    ಮುಂಬೈ: ಲಾಕ್​ಡೌನ್​ ಸಮಯದಲ್ಲಿ ಬಾಲಿವುಡ್​ ನಟ ಸೋನು ಸೂದ್​ ಕೋಟ್ಯಂತರ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದ್ದರು. ಸಾಕಷ್ಟು ಮಂದಿಯ ನೆರವಿಗೆ ಧಾವಿಸಿ, ಕೈಲಾದ ಸಹಾಯ ಮಾಡಿದ್ದರು. ಆ ಕಾರ್ಯವನ್ನು ಪರಿಗಣಿಸಿ ಅವರಿಗೆ ಜಾಗತಿಕ ಮಟ್ಟದ ಶ್ರೇಷ್ಠ ಪುರಸ್ಕಾರವೊಂದು ಲಭಿಸಿದೆ.

    ಇದನ್ನೂ ಓದಿ: ರಿಯಾ ಚಕ್ರವರ್ತಿ ಕುರಿತು ಬಯೋಪಿಕ್?

    ಸೋನು ಸೂದ್ ಅವರ ಮಾನವೀಯತೆ ಕಾರ್ಯವನ್ನು ಗುರುತಿಸಿರುವ ವಿಶ್ವಸಂಸ್ಥೆ ಪ್ರತಿಷ್ಠಿತ ‘ವಿಶೇಷ ಮಾನವೀಯತೆ ಆ್ಯಕ್ಷನ್​’ ಅವಾರ್ಡ್​​ ನೀಡಿ ಗೌರವಿಸಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಪ್ರತಿಷ್ಠಿತ ಎಸ್‌ಡಿಜಿ (ವಿಶೇಷ ಮಾನವೀಯ ಕ್ರಿಯಾ) ಪ್ರಶಸ್ತಿ ಇದಾಗಿದೆ.

    ಸೆ. 29ರಂದು ನಡೆದ ವರ್ಚುವಲ್​ ಕಾರ್ಯಕ್ರಮದಲ್ಲಿ ಅವಾರ್ಡ್​ ಪಡೆದು ಮಾತನಾಡಿದ ಸೋನು, ‘ಇದೊಂದು ವಿರಳಾತಿ ವಿರಳ ಪ್ರಶಸ್ತಿ. ವಿಶ್ವಸಂಸ್ಥೆ ಗುರುತಿಸಿದ್ದು ಖುಷಿಯ ಸಂಗತಿ. ನಾನು ಏನು ಮಾಡಿದ್ದೇನೋ ಅದೆಲ್ಲವನ್ನು ನನ್ನ ಮನಃಪೂರ್ವಕವಾಗಿ ಖುಷಿಯಿಂದ ಮಾಡಿದ್ದೇನೆ. ಆ ಕಾರ್ಯ ಗುರುತಿಸಿ ಪುರಸ್ಕರಿಸಿದ್ದಕ್ಕೆ ಧನ್ಯವಾದಗಳು ಎಂದು ಸೋನು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಇದ್ರಲ್ಲಿದೆ ಏನೋ ವಿಶೇಷ: ಮನರಂಜನಾ ಲೋಕಕ್ಕೆ ಸೇರ್ಪಡೆ ದಂಗಲ್ ಕನ್ನಡ

    ಅಂದಹಾಗೆ ಈ ಪ್ರಶಸ್ತಿಯನ್ನು ಈ ಮೊದಲು ಲಿಯೋನಾರ್ಡೋ ಡಿಕಾಪ್ರಿಯೋ, ಏಂಜಲಿನಾ ಜೂಲಿ, ಪ್ರಿಯಾಂಕಾ ಚೋಪ್ರಾ ಸಹ ಪಡೆದುಕೊಂಡಿದ್ದರು. (ಏಜೆನ್ಸೀಸ್​)

    ನಟಿಯರ ಬಳಿಕ ಇದೀಗ ಬಾಲಿವುಡ್​ನ ಹೀರೋಗಳಿಗೆ ಎನ್​ಸಿಬಿ ಸಮನ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts