More

    ಸೋನು ಪಂಜಾಬನ್ ಹೆಣ್ಣುಕುಲಕ್ಕೇ ಅವಮಾನವೆಂದಿತು ಕೋರ್ಟ್​​; ಯಾಕೆ ಗೊತ್ತಾ?

    ನವದೆಹಲಿ: ಸೋನು ಪಂಜಾಬನ್ ಅಪ್ರಾಪ್ತ ಬಾಲಕಿಯನ್ನು ಖರೀದಿಸಿದ್ದಲ್ಲದೆ, ವೇಶ್ಯಾವಾಟಿಕೆಗೆ ಶರಣಾಗುವಂತೆ ಮಾಡಲು ಅವಳಿಗೆ ಕ್ರೂರ ಹಿಂಸೆ ನೀಡಿದ್ದಾಳೆ ಎಂದು ದೆಹಲಿ ನ್ಯಾಯಾಲಯವು ವೇಶ್ಯಾವಾಟಿಕೆ ದಂಧೆ ಹಾಗೂ ಕಳ್ಳಸಾಗಣೆಗಾಗಿ ಸೋನು ಪಂಜಾಬನ್​​ಗೆ 24 ವರ್ಷ ಜೈಲು ಶಿಕ್ಷೆ ವಿಧಿಸಿದೆ.
    10 ಪುಟಗಳ ಶಿಕ್ಷೆಯ ಆದೇಶದಲ್ಲಿ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರೀತಮ್ ಸಿಂಗ್, ಈ ಅಪರಾಧಿಯು ಅಪ್ರಾಪ್ತ ಬಾಲಕಿಯ ಬಾಯಲ್ಲಿ ಮೆಣಸಿನ ಪುಡಿಯನ್ನು ಹಾಕಿದ್ದಾಳೆ ಮತ್ತು ಭಯ ಹುಟ್ಟಿಸುವ ಸಲುವಾಗಿ, ಆಕೆ ಹೇಳಿದಂತೆ ಕೇಳಲು ಬಾಲಕಿಯ ಗುಪ್ತಾಂಗದ ಮೇಲೆ ಖಾರ ಉಜ್ಜಿದ್ದಾಳೆ, ಬಾಲಕಿ ಗ್ರಾಹಕರಿಗೆ ವಿರೋಧ ವ್ಯಕ್ತಪಡಿಸದಂತೆ ಮಾಡಲು ಆಕೆಗೆ ಸೋನು ಡ್ರಗ್ಸ್ ನೀಡಿದ್ದಾಳೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ:  ದೆಹಲಿ ಮಾಂಸದಡ್ಡೆಯ ಕರಾಳತೆ; 12ರ ಬಾಲೆಗೆ ಡ್ರಗ್ಸ್​ ನೀಡಿ ವೇಶ್ಯಾವಾಟಿಕೆ; 6 ವರ್ಷಗಳ ನರಕದ ಬಳಿಕ ಸಿಕ್ತು ನ್ಯಾಯ

    ಒಟ್ಟಿನಲ್ಲಿ ಸೋನು, ಮಹಿಳೆ ಎಂದು ಕರೆಯಲು ಅರ್ಹವಾದ ಎಲ್ಲ ಮಿತಿಗಳನ್ನು ದಾಟಿದ್ದಾಳೆ” ಎಂದು ನ್ಯಾಯಾಲಯ ತಿಳಿಸಿದೆ. ಇಂತಹ ಭಯಾನಕ ಕೃತ್ಯಗಳನ್ನು ವೆಸಗುವ ವ್ಯಕ್ತಿಯನ್ನು ಸುಸಂಸ್ಕೃತ ಸಮಾಜದಲ್ಲಿ ಬದುಕುವ ಹಕ್ಕುಳ್ಳವರಿಂದ ಬೇರ್ಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.
    ನ್ಯಾಯಾಲಯದ ಪ್ರಕಾರ, ಪಂಜಾಬನ್ ಸಹಾಯಕ ಸಂದೀಪ್ ಬೇಡ್ವಾಲ್ 20 ವರ್ಷ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾನೆ. ವಿವಾಹವಾಗುವ ನೆಪವೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಆಕೆಯನ್ನು ನಾಲ್ಕು ಬಾರಿ ಮಾರಾಟ ಮಾಡಲಾಗಿತ್ತು. ವಿವಾಹವಾಗುವುದಾಗಿ ನೆಪದಲ್ಲಿ ಪ್ರತಿವರ್ಷ ಸಾವಿರಾರು ಮಕ್ಕಳನ್ನು ಅಪಹರಿಸಲಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಇದನ್ನೂ ಓದಿ: ದೇಶಿಯವಾಗಿ ತಯಾರಾಗಿರುವ ಮೊದಲ ಆ್ಯಂಟಿಜೆನ್​ ಕಿಟ್​ಗೆ ಐಸಿಎಂಆರ್​ ಅನುಮೋದನೆ

    “ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಹೆಸರಿನಲ್ಲಿ ಬಲೆ ಬೀಸಿ ಮಾಂಸ ವ್ಯಾಪಾರಕ್ಕಿಳಿಸಲು ಪೂರ್ವ ಯೋಜಿತವಾಗಿ ಅಪಹರಿಸಿದ ಪ್ರಕರಣಗಳಲ್ಲಿ ಇದೂ ಒಂದು” ಎಂದು ನ್ಯಾಯಾಲಯ ಹೇಳಿದೆ, ಪಂಜಾಬಾನ್‌ನ ಈ ಕಾರ್ಯ “ನಾಚಿಕೆಗೇಡಿನ ಕಾರ್ಯ”ವಾಗಿದೆ ಎಂದಿದೆ.
    ಜುಲೈ 16 ರಂದು ಪಂಜಾಬನ್ ಹಾಗೂ ಆಕೆಯ ಸಹಚರ ಬೆಡ್ವಾಲ್ ಗೆ ಜುಲೈ 22 ರಂದು ಕ್ರಮವಾಗಿ 24 ಮತ್ತು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು.

    ರಕ್ತನೂ ಕೊಟ್ಟು, ಚಿಕಿತ್ಸೆಯನ್ನೂ ಮಾಡಿ ಜೀವ ಉಳಿಸಿದ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts