More

    ಸೋನಿಯಾ ಗಾಂಧಿ ಸದನದಲ್ಲೇ ಸಂಸದನ ಕಾಲರ್​ ಹಿಡಿಯಲು ಯತ್ನಿಸಿದ್ದರು: ಬಿಜೆಪಿ ಸಂಸದ ನಿಶಿಕಾಂತ್​ ದುಬೆ

    ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ಕುರಿತು ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರು 2012ರಲ್ಲಿ ಸಮಾಜವಾದಿ ಪಕ್ಷದ ಸಂಸದನ ಶರ್ಟ್​ ಕಾಲರ್​ ಹಿಡಿಯಲು ಯತ್ನಿಸಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಆರೋಪಿಸಿದ್ದಾರೆ.

    ಜಾರ್ಖಂಡ್​ನ ಗೊಡ್ಡಾ ಲೋಕಸಭಾ ಕ್ಷೇತ್ರದ ಸಂಸದ ನಿಶಿಕಾಂತ್​ ದುಬೆ ಅವರ ಹೇಳಿಕೆಯನ್ನು ಖಂಡಿಸಿ ವಿಪಕ್ಷಗಳ ಸದಸ್ಯರ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ದುಬೆ ಅವರು ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಈ ವೇಳೆ ಮದ್ಯಪ್ರವೇಶಿಸಿದ ಗೃಹ ಸಚಿವ ಅಮಿತ್​ ಷಾ ಪುರುಷರು ಏಕೆ ಮಹಿಳೆಯರ ಕುರಿತಾದ ಸಮಸ್ಯೆಗಳನ್ನು ಪ್ರಶ್ನಿಸಬಾರದು ಎಂದಿದ್ದಾರೆ.

    2012ರಲ್ಲಿ ಲೋಕಸಭೆಯಲ್ಲಿ ಅಂದಿನ ದಿನ ಸಚಿವರಾಗಿದ್ದ ವಿ. ನಾರಾಯಣಸ್ವಾಮಿ ಅವರು ಮಸೂದೆ ಒಂದನ್ನು ಮಂಡಿಸುತ್ತಿದ್ದರು. ಈ ವೇಳೆ ಸಮಾಜವಾದಿ ಪಕ್ಷದ ಸಂಸದ ಯಶ್​ವೀರ್​ ಸಿಂಗ್​ ಅವರು ನಾರಾಯಣಸ್ವಾಮಿ ಅವರ ಕೈಯಲ್ಲಿದ್ದ ಹಾಳೆಗಳನ್ನು ಕಸಿದು ಎಸೆಯಲು ಯತ್ನಿಸಿದ್ದರು. ಈ ವೇಳೆ ಮದ್ಯಪ್ರವೇಶಿಸಿದ ಸೋನಿಯಾ ಗಾಂಧಿ ಅವರು ಸಂಸದನ ಶರ್ಟ್ ಕಾಲರ್​ ಹಿಡಿಯಲು ಯತ್ನಿಸಿದ್ದರು.

    ಇದನ್ನೂ ಓದಿ: ಸಂಕಷ್ಟ ಸೂತ್ರ ಇಲ್ಲವೆಂದ ಮೇಲೆ ತಮಿಳುನಾಡಿಗೆ ಯಾವ ಆಧಾರದ ಮೇಲೆ ನೀರು ಬಿಟ್ಟರು: ಮಾಜಿ ಸಿಎಂ ಎಚ್​ಡಿಕೆ

    ಕೂಡಲೇ ಮದ್ಯಪ್ರವೇಶಸಿದ ನಾವು (ಬಿಜೆಪಿ ಸಂಸದರು) ಯಶ್​ವೀರ್​ ಸಿಂಗ್​ ಅವರನ್ನು ರಕ್ಷಿಸಿದ್ದೆವು. ನಾನು ಸೋನಿಯಾ ಅವರಿಗೆ ನೀವು ಡಿಕ್ಟೆಟರ್ ಅಥವಾ ರಾಣಿ​ ಅಲ್ಲ ಈ ರೀತಿ ನಡೆದುಕೊಳ್ಳುವುದಕ್ಕೆ ಎಂದು ಹೇಳಿದ್ದೆ. ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್​ ಸಹ ಸೋನಿಯಾ ಗಾಂಧಿ ಅವರ ನಡೆಯನ್ನು ಖಂಡಿಸಿದ್ದರು. ಈಗ ನೋಡಿದರೆ ಇಂಡಿಯಾ ಎಂಬ ಮೈತ್ರಿಕೂಟದಲ್ಲಿ ಅವರ ಜೊತೆ ಕೈ ಜೋಡಿಸಿರುವುದು ಯಾವ ರೀತಿಯ ನಡೆ ಎಂದು ಸದನದಲ್ಲಿ ಪ್ರಶ್ನಿಸಿದ್ದಾರೆ.

    ಇತ್ತ ಸಂಸದ ನಿಶಿಕಾಂತ್​ ದುಬೆ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಕೂಡಲೇ ಬಿಜೆಪಿಯ ಮಹಿಳಾ ಸಂಸದರೊಬ್ಬರು ಇದರ ಉಸ್ತುವಾರಿಯನ್ನು ಹೊರಬೇಕು ಎಂದು ಆಗ್ರಹಿಸಿ ಆಡಳಿತ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts