More

    ಖಲಿಸ್ತಾನಿಗಳ ಬಗ್ಗೆ ಸಹಾನುಭೂತಿ; ವಿವಾದಿತ ಕೆನಡಾ ಗಾಯಕ ಶುಭನೀತ್​ ಭಾರತ ಕಾರ್ಯಕ್ರಮ ರದ್ದು

    ಮುಂಬೈ: ಖಲಿಸ್ತಾನಿ ಪ್ರತ್ಯೇಕವಾದಿಗಳ ಕುರಿತು ಸಹಾನುಭೂತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಕೆನಡಾ ಮೂಲದ ಪಂಜಾಬಿ ಗಾಯಕ ಶುಭನೀತ್​ ಸಿಂಗ್​ ಅವರ ಮುಂಬೈ ಕಾನ್​​ಸರ್ಟ್​ಅನ್ನು ಬುಕ್​ ಮೈ ಶೋ ರದ್ದು ಮಾಡಿದೆ.

    ಖಲಿಸ್ತಾನಿಗಳ ಪರ ಸಹಾನೂಭೂತಿ ಹೊಂದಿರುವ ಶುಭನೀತ್​ ಸಿಂಗ್​ ಕಾನ್​ಸರ್ಟ್​ ಆಯೋಜಿಸುತ್ತಿರುವ ಬುಕ್​ ಮೈ ಶೋವನ್ನು ಎಲ್ಲರೂ ಬಹಿಷ್ಕರಿಸಬೇಕು. #UninstallBookmyshow ಎನ್ನು ಹ್ಯಾಶ್​ಟ್ಯಾಗ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು.

    ಇದನ್ನೂ ಓದಿ: ನುಹ್​ ಹಿಂಸಾಚಾರ; ಕಾಂಗ್ರೆಸ್​ ಶಾಸಕ ಮಾಮ್ಮನ್​ ಖಾನ್​ ನ್ಯಾಯಾಂಗ ವಶಕ್ಕೆ

    ಇತ್ತ ಬಾಯ್ಕಾಟ್​ ಕೂಗು ಜೋರಾದ ಬೆನ್ನಲ್ಲೇ ಪ್ರಕಟಣೆಯನ್ನು ಹೊರಡಿಸಿರುವ ಬುಕ್​ ಮೈ ಶೋ ಶುಭನೀತ್​ ಸಿಂಗ್​ ಅವರ ಸ್ಟಿಲ್​ ರೋಲಿನ್​ ಟೂರ್​ ಫಾರ್​ ಇಂಡಿಯಾ ಕಾನ್​ಸರ್ಟ್​ಅನ್ನು ರದ್ದು ಮಾಡಲಾಗಿದೆ. ಆನ್​ಲೈನ್​ನಲ್ಲಿ ಟಿಕೆಟ್​ ಖರೀದಿಸಿದ ಗ್ರಾಹಕರಿಗೆ ಸಂಪೂರ್ಣ ಹಣವನ್ನು 7-10 ದಿನಗಳಲ್ಲಿ ಹಿಂತಿರುಗಿಸಲಾಗುವುದು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಖಲಿಸ್ತಾನ ಪ್ರತ್ಯೇಕವಾದಿ ನಾಯಕ ಹರ್ದೀಪ್​ ಸಿಂಗ್​ ನಿಜ್ಜಾರ್​ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್​ ಟ್ರುಡೊ ಆರೋಪಿಸಿದ್ದರು. ಬಳಿಕ ಉಭಯ ದೇಶಗಳ ಸರ್ಕಾರವು ರಾಜತಾಂತ್ರಿಕ ಅಧಿಕಾರಿಗಳನ್ನು ಸೇವೆಯಿಂದ ಉಚ್ಚಾಟಿಸಿ ಆದೇಶಿಸಿದ್ದವು. ಕೆನಡಾ ಪ್ರಧಾನಿ ಮಾಡಿರುವ ಆರ್ಓಪದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಹಳಸಿದ್ದು, ವ್ಯಾಪಾರ-ವಹಿವಾಟು ಸಂಬಂಧ ನಡೆಯಬೇಕಿದ್ದ ಮಾತುಕತೆ ರದ್ದುಗೊಂಡಿದೆ.

    Shubneeth singh

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts