More

    ಮಹಿಳಾ ಮೀಸಲಾತಿ ಮಸೂದೆ; ಚುನಾವಣಾ ಗಿಮಿಕ್​ ಎಂದ ಟಿಎಂಸಿ ಸಂಸದೆ

    ನವದೆಹಲಿ: ಮಹಿಳೆಯರಿಗೆ ನಿಜವಾಗಿಯೂ ಬಿಜೆಪಿ ಗೌರವ ನೀಡುತ್ತದೆ ಎಂದಾದರೆ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ತಮ್ಮದೇ ಪಕ್ಷದ ಸಂಸದ ಬ್ರಿಜ್​ ಭೂಷಣ್​ ವಿರುದ್ಧ ಕಠಿಣ ಕ್ರಮ ಜರುಗಿಸಿದರೆ ಅದು ಗೌರವ ನೀಡಿದಾಂತಾಗುತ್ತದೆ ಎಂದು ಟಿಎಂಸಿ ಸಂಸದೆ ಕಾಕೋಲಿ ಘೋಷ್​ ದಸ್ತಿದಾರ್​ ಹೇಳಿದ್ದಾರೆ.

    ಮಹಿಳಾ ಮೀಸಲಾತಿ ಮೇಲಿನ ಚರ್ಚೆ ವೇಳೆ ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು ಮಸೂದೆಯನ್ನು ಬೆಂಬಲಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ತಡವಾಗಿ ಮಂಡಿಸಿರುವ ಸರ್ಕಾರದ ಕ್ರಮ ಚುನಾವಣಾ ಗಿಮಿಕ್​ ಎಂದು ಟೀಕಿಸಿದ್ದಾರೆ.

    ಇದನ್ನೂ ಓದಿ: ಸಿರಿಂಜ್​ಗಳಲ್ಲಿ ಮಾಡಿದ ಗಣಪ, ಇದರ ಹಿಂದಿದೆ ಒಂದೊಳ್ಳೆ ಉದ್ದೇಶ

    ಮೊದಲಿಗೆ ಬಿಜೆಪಿಯ ನನ್ನ ಸಹೋದ್ಯೋಗಿಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ನಾನು ಸಲಹೆ ನೀಡುತ್ತೇನೆ. ಏಕೆಂದರೆ ಅವರು ತಮ್ಮ ಮಾತುಗಳಲ್ಲಿ ಮಹಿಳೆಯರಿಗೆ ಗೌರವವನ್ನು ತೋರಿಸುತ್ತಾರೆ. ಆದರೆ, ಅವರ ಕೆಲಸಗಳಲ್ಲಿ ಅಲ್ಲ. ಮಹಿಳೆಯರನ್ನು ಅಗೌರವಿಸುವ ಬಿಜೆಪಿ ಮೊದಲು ತಮ್ಮ ಪಕ್ಷದಲ್ಲಿರುವ ಕೆಲವರ ವಿರುದ್ಧ ಕ್ರಮಕೈಗೊಂಡರೆ ಒಳಿತು.

    ದೇಶಕ್ಕಾಗಿ ಕುಸ್ತಿಯಲ್ಲಿ ಚಿನ್ನದ ಪದಕಗಳನ್ನು ತಂದುಕೊಟ್ಟ ಕ್ರೀಡಾಪಟುಗಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಆದರೆ, ಪ್ರಕರಣದ ಅಪರಾಧ ಇಂದು ನಮ್ಮೊಂದಿಗೆ ಇಲ್ಲಿ ಕುಳಿತಿದ್ದಾನೆ. ಇದುವರೆಗೂ ಸಂಸದ ಬ್ರಿಜ್​ಭೂಷಣ್​ ಶರಣ್​ ಸಿಂಗ್​ನನ್ನು ಬಂಧಿಸಲಾಗಿಲ್ಲ. ಒಂದು ವೇಳೆ ನೀವು ನಿಜವಾಗಿಯೂ ಮಹಿಳೆಯರನ್ನು ಗೌರವಿಸುವುದಾದರೆ ಮೊದಲು ನೀವು ಇಂತಹವರ ವಿರುದ್ಧ ಕ್ರಮ ಜರುಗಿಸಿ ಎಂದು ಟಿಎಂಸಿ ಸಂಸದೆ ಕಾಕೋಲಿ ಘೊಷ್​ ದಸ್ತಿದಾರ್​ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts