More

    ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಡಿ.ಕೆ. ಶಿವಕುಮಾರ್​ಗೆ ಸೋನಿಯಾ ಗಾಂಧಿ ಕೊಟ್ಟ ಭರವಸೆಗಳೇನು?

    ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್​ ಅವರಿಗೆ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಅವರು ದೂರವಾಣಿ ಮೂಲಕ ಮಾತನಾಡಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

    ನಿಮ್ಮ ಬೇಡಿಕೆ ಸರಿಯಾಗಿದೆ. ಸದ್ಯಕ್ಕೆ ಪಕ್ಷದ ಹಿತದೃಷ್ಟಿಯಿಂದ ಎರಡು ವರ್ಷ ಸಿದ್ದರಾಯಮ್ಮ ಅವರಿಗೆ ಅವಕಾಶ ಬಿಟ್ಟುಕೊಡಿ. ಎರಡು ವರ್ಷ ಆದ ಬಳಿಕ ನಾವೇ ಅಧಿಕಾರ ಹಸ್ತಾಂತರ ಮಾಡಿಸುತ್ತೇವೆ. ಈಗ ಡಿಸಿಎಂ ಆಗಿ, ಬೇಕಿದ್ದರೆ ನೀವೊಬ್ಬರೇ ಡಿಸಿಎಂ ಆಗಿ ಎಂದು ಸೋನಿಯಾ ಗಾಂಧಿ ಮಾತು ನೀಡಿದ್ದಾರೆಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಸೋತರೂ ಜೆಡಿಎಸ್‌ಗೆ ಹೆಚ್ಚು ಮತ: ಜಿಲ್ಲೆಯಲ್ಲಿ ಸುಧಾರಿಸಿಕೊಂಡ ಕಾಂಗ್ರೆಸ್, ಬಿಜೆಪಿ ಪಕ್ಷದ ಕಡೆಗೂ ಜನರ ಒಲವು

    ನೀವು ಯಾವ ಖಾತೆಯನ್ನು ಕೇಳುತ್ತೀರೋ ಅದನ್ನೇ ಕೊಡುತ್ತೇವೆ. ಒಂದು ವೇಳೆ ಸಿದ್ದರಾಮಯ್ಯ ಅವರೊಂದಿಗೆ ಸಂಪುಟದಲ್ಲಿ ಒಟ್ಟಾಗಿ ಕೆಲಸ ಮಾಡಲು ಇಷ್ಟವಿಲ್ಲ ಎಂದಾದರೆ, ನೀವು ಪಕ್ಷದ ಜವಾಬ್ದಾರಿಯಲ್ಲಿ ಮುಂದುವರಿಯಿರಿ. ಪಕ್ಷಕ್ಕಾಗಿ ನಿಮ್ಮ ಪ್ರಯತ್ನದ ಬಗ್ಗೆ ನಮಗೆ ಸಂಪೂರ್ಣ ಅರಿವು ಇದೆ. ಈಗಲೇ ಸಿಎಂ ಬೇಕು ಅಂತ ಹಠ ಹಿಡಿಯಬೇಡಿ. ಬೇರೆ ರಾಜ್ಯದಲ್ಲಾದಂತೆ ಕರ್ನಾಟಕದಲ್ಲಿ ಆಗಲು ನಾವು ಬಿಡುವುದಿಲ್ಲ ಎಂದು ಭರವಸೆ ನೀಡುವ ಮೂಲಕ ಡಿಕೆಶಿಗೆ ಸೋನಿಯಾ ಗಾಂಧಿ ಅಭಯಹಸ್ತ ನೀಡಿರುವುದಾಗಿ ತಿಳಿದುಬಂದಿದೆ.

    ಮುಂದಿನ ಸಿಎಂ ಸಿದ್ದರಾಮಯ್ಯ

    ಮೇ 13 ರಂದು ಚುನಾವಣಾ ಫಲಿತಾಂಶ ಹೊರಬಿದ್ದಾಗಿನಿಂದ ಕಾಂಗ್ರೆಸ್​ ಪಾಳಯದಲ್ಲಿ ಸಿಎಂ ಸ್ಥಾನಕ್ಕಾಗಿ ಭಾರೀ ಪೈಪೋಟಿ ಆರಂಭವಾಗಿತ್ತು. ಅದರಲ್ಲೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಜಿ. ಪರಮೇಶ್ವರ್​ ಕೂಡ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಅಲ್ಲದೆ, ಲಿಂಗಾಯತ ಸಮುದಾಯದಿಂದಲೂ ಬೇಡಿಕೆ ಬಂದಿತ್ತು. ಸಿಎಂ ಸ್ಥಾನಕ್ಕಾಗಿ ನಾಲ್ಕೈದು ದಿನಗಳಿಂದ ನಡೆದ ಪೈಪೋಟಿಗೆ ಇಂದು ತೆರೆಬಿದ್ದಿದ್ದು, ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಕಾಂಗ್ರೆಸ್​ ಹೈಕಮಾಂಡ್​ ಇಂದು ಅಧಿಕೃತಗೊಳಿಸಿದೆ.

    ಕರ್ನಾಟಕ ಕಾಂಗ್ರೆಸ್​ ಅಧ್ಯಕ್ಷರಾಗಿ ಡಿಕೆಶಿ ಮುಂದುವರಿಯಲಿದ್ದಾರೆ. ಅಲ್ಲದೆ, ಎರಡು ಪ್ರಮುಖ ಖಾತೆಗಳನ್ನು ಸಹ ಡಿಕೆಶಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಡಿಕೆಶಿ ಅವರು ಇಂಧನ ಮತ್ತು ನೀರಾವರಿ ಖಾತೆಯ ಮೇಲೆ ಕಣ್ಣೀಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ: ಹೊರಬಿತ್ತು ಅಧಿಕೃತ ಘೋಷಣೆ, ನಾಳೆ ಪ್ರಮಾಣ ವಚನ

    ಅಮಿತ್ ಷಾ ಹೇಳಿದ ಮಾತೇ ಮುಳುವಾಯ್ತಾ..?; ಪರೋಕ್ಷವಾಗಿ ಕಿಡಿಕಾರಿದ ವಿ.ಸೋಮಣ್ಣ

    ನಾವು ಬಿಲ್ ಕಟ್ಟಲ್ಲ ಎಂದ ಗ್ರಾಮಸ್ಥರು; ಕೆಇಬಿ ಕಲೆಕ್ಟರ್​ ಊರಿಂದ ಹೊರಕ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts