More

    ಶಾಸಕ ಜನಾರ್ದನರೆಡ್ಡಿ ಮಹತ್ವದ ಸಭೆ ಇಂದು, ಬಿಜೆಪಿ ಸೇರ್ಪಡೆ ಸಾಧ್ಯತೆ

    ಬೆಂಗಳೂರು: ಕಲ್ಯಾಣರಾಜ್ಯ ಪ್ರಗತಿಪಕ್ಷದ ಸಂಸ್ಥಾಪಕ, ಶಾಸಕ ಗಾಲಿ ಜನಾರ್ದನರೆಡ್ಡಿ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ ಭಾನುವಾರ ಸಂಜೆ 4ಕ್ಕೆ ಕರೆದಿದ್ದು, ಬಿಜೆಪಿ ಸೇರ್ಪಡೆ ಬಗ್ಗೆ ತೀರ್ಮಾನಿಸುವ ಸಾಧ್ಯತೆಗಳಿವೆ.

    ಜನಾರ್ದನರೆಡ್ಡಿಯವರ ಬೆಂಗಳೂರಿನ ನಿವಾಸದಲ್ಲಿ ಈ ಸಭೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಆಹ್ವಾನದ ಮೇರೆಗೆ ಕೆಲವು ದಿನಗಳ ಹಿಂದೆ ದೆಹಲಿಗೆ ತೆರಳಿದ್ದರು. ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಬಿಜೆಪಿ ಸೇರುವಂತೆ ರೆಡ್ಡಿಗೆ ಆಹ್ವಾನಿಸಿದ್ದ ಅಮಿತ್ ಷಾ, ಕೆಆರ್ ಪಿಪಿ ಪಕ್ಷವನ್ನು ವಿಲೀನ ಸಲಹೆ ನೀಡಿದ್ದರು ಎನ್ನಲಾಗಿದೆ.

    ನಿಲುವು ಬದಲಾವಣೆ ?

    ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ‌ ಜನಾರ್ದನರೆಡ್ಡಿ ಬೆಂಬಲಿಸಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಖುದ್ದು ಆಹ್ವಾನಿಸಿ ಮಾತುಕತೆ ನಡೆಸಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಲು ಒಪ್ಪಿ, ಅವರ ಪರವಾಗಿ ಮತ ಚಲಾಯಿಸಿದ್ದರು.

    ಇದೀಗ ಲೋಕಸಭೆ ಚುನಾವಣೆ ಪೂರ್ವ ಅಮಿತ್ ಷಾ ಆಹ್ವಾನಿಸಿರುವ ಕಾರಣ ಜನಾರ್ದನರೆಡ್ಡಿ ತಮ್ಮ ನಿಲುವು ಬದಲಿಸಿ ಕಾಂಗ್ರೆಸ್ ನಿಂದ ಬಿಜೆಪಿಯತ್ತ ವಾಲುವ ಸಾಧ್ಯತೆಗಳಿವೆ. ಈ ನಡುವೆ ಒಂದು ಕಾಲದ ಆಪ್ತಮಿತ್ರ, ಬಳ್ಳಾರಿ ಲೋಕಸಭೆ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಜನಾರ್ದನರೆಡ್ಡಿ ಅವರನ್ನು ವಾಪಸ್ ಪಕ್ಷಕ್ಕೆ ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದನ್ನು ಉಲ್ಲೇಖಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts