More

  ತನ್ನನ್ನು ಹುಚ್ಚ ಎಂದಿದ್ದಕ್ಕೆ ಮಹಿಳೆಗೆ ನಡುರಸ್ತೆಯಲ್ಲಿ ಚಾಕುವಿನಿಂದ ಇರಿದ ವ್ಯಕ್ತಿ!

  ನವದೆಹಲಿ: ಮಹಿಳೆಯೊಬ್ಬಳನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದಿರುವ ಘಟನೆ ದೆಹಲಿಯ ಮುಖರ್ಜಿ ನಗರದಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.

  ಇದನ್ನೂ ಓದಿ: ರೈಲಿನೊಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ: ಸ್ಥಳದಲ್ಲೇ ನಾಮಕರಣ! ಹೆಸರು ಕೇಳಿದ್ರೆ ಶಾಕ್ ಆಗ್ತೀರಾ!

  ಅದೃಷ್ಟವಶಾತ್, ಅದೇ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ತಕ್ಷಣ ಮಧ್ಯಪ್ರವೇಶಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಆದರೂ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಅಮನ್ ಎಂದು ಗುರುತಿಸಲಾಗಿದ್ದು, ಘಟನೆ ಮಾರ್ಚ್ 22 ರಂದು ನಡೆದಿದೆ.

  ಮಾಹಿತಿಯ ಪ್ರಕಾರ, ಮುಖರ್ಜಿ ನಗರದ ವಿದ್ಯಾರ್ಥಿಗಳು ಅಮಾನ್​ನನ್ನು ಗೇಲಿ ಮಾಡಿದ್ದರು. ಆ ಪ್ರದೇಶದಲ್ಲಿ ಓಡಾಡುತ್ತಿದ್ದವರೆಲ್ಲಾ ಆತನನ್ನು ಹುಚ್ಚ ಎಂದು ಕರೆಯುತ್ತಿದ್ದರು. ಮುಖರ್ಜಿ ನಗರದ ಲೈಬ್ರರಿಯಲ್ಲಿ ಓದಲು ಬರುತ್ತಿದ್ದ ಮಹಿಳೆ ಕೂಡ ಗೇಲಿ ಮಾಡಿದಾಗ ಆರೋಪಿ ಅಲ್ಲಿಯೇ ತರಕಾರಿ ಅಂಗಡಿಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಬಂದು ಆಕೆಗೆ ತಿವಿದಿದ್ದಾನೆ ಎಂದು ವರದಿಯಾಗಿದೆ.

  ಸಿಸಿಟಿವಿ ದೃಶ್ಯಾವಳಿಯಲ್ಲಿ, ವ್ಯಕ್ತಿ ಹುಡುಗಿಯ ಕಡೆಗೆ ಓಡಿ, ನೆಲಕ್ಕೆ ತಳ್ಳಿ ನಂತರ ನಾಲ್ಕೈದು ಬಾರಿ ಇರಿದಿದ್ದಾನೆ. ನಂತರ ಆತ ಸ್ಥಳದಿಂದ ಓಡಿ ಹೋಗಿದ್ದಾನೆ. ಆತ ದಾಳಿ ಮಾಡಿದ ಮಹಿಳೆ ಮುಖರ್ಜಿ ನಗರಕ್ಕೆ ಗ್ರಂಥಾಲಯದಲ್ಲಿ ಓದಲು ಬರುತ್ತಿದ್ದಳು. ನಂತರ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿದ ನಂತರ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ವಿದ್ಯಾರ್ಥಿ ತನ್ನನ್ನು ಗೇಲಿ ಮಾಡಿದ್ದಾಳೆ ಎಂದು ಪೊಲೀಸರಿಗೆ ಆರೋಪಿ ತಿಳಿಸಿದ್ದಾನೆ.

  ತಂದೆಯ ಹತ್ಯೆಗೈದು ಮನೆಯೊಳಗೇ ಶವ ಹೂತಿಟ್ಟ ಮಗ: ತಾಯಿಯಿಂದ ಬಯಲಾಯ್ತು ಕುಕೃತ್ಯ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts