More

    ನಿಮ್ಮಿಂದ ಲೈಂಗಿಕ ಕಿರುಕುಳ ಅನುಭವಿಸಿದ ಎಲ್ಲರೂ… ಸಲ್ಮಾನ್​ಗೆ ಮಾಜಿ ಪ್ರೇಯಸಿ ವಾರ್ನಿಂಗ್?

    ಮುಂಬೈ: ನಟ ಸಲ್ಮಾನ್ ಖಾನ್ ಮದುವೆಯಾಗದೆ ಜೀವನದಲ್ಲಿ ಸಿಂಗಲ್ಲಾಗಿ ಇದ್ದರೂ, ಹಲವು ನಟಿಯರ ಜತೆ ಡೇಟಿಂಗ್, ಸುತ್ತಾಟ, ಲಿವ್ ಇನ್ ರಿಲೇಶನ್​ಶಿಪ್ ನಲ್ಲಿದ್ದರು. ಹಾಗೆ, ಸಲ್ಮಾನ್ ಖಾನ್ ಸಂಬಂಧ ಹೊಂದಿರುವ ಹಲವು ನಟಿಯರ ಪೈಕಿ ನಟಿ ಸೋಮಿ ಅಲಿ ಕೂಡಾ ಒಬ್ಬರು. ಇನ್ನು, ತಮ್ಮ ಸಿನಿಮಾಗಳಿಗೆ ಅಲ್ಲದೇ ಬದಲಿಗೆ ಸಲ್ಮಾನ್ ಖಾನ್ ಜತೆ ಸುತ್ತಾಟ ನಡೆಸಿರುವ ಕಾರಣ ಈ ನಟಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಇನ್ನು, ಕೆಲ ವರ್ಷಗಳಿಂದ ನಟಿ ಸೋಮಿ ಅಲಿ ಅವರು ಬಾಲಿವುಡ್​ನಿಂದ ತುಂಬ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿತ್ತು. ಹೌದು, ಸಿನಿಮಾ ಮತ್ತು ಎಲ್ಲವನ್ನೂ ಬಿಟ್ಟ ನಟಿ ತಮ್ಮದೇ ಒಂದು ಎನ್​ಜಿಒ ಆರಂಭಿಸಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ. ಹೀಗಿದ್ದರೂ, ನಟಿ ಸೋಮಿ ಅಲಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ಇದಕ್ಕೆ ಕಾರಣ, ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ನಟಿ ಒಂದು ನಿಗೂಢ ಅರ್ಥದ ಪೋಸ್ಟ್ ಮಾಡಿದ್ದಾರೆ.
    ನಟಿ ಸೋಮಿ ಅಲಿ ಅವರು, ”ನೀವು ಬಾಲಿವುಡ್​ನ ಹಾರ್ವೆ ವೈನ್​ಸ್ಟೀನ್! ನಿಮ್ಮ ಹಲವು ವಿಚಾರಗಳು ಶೀಘ್ರದಲ್ಲೆ ಬಹಿರಂಗಗೊಳ್ಳುತ್ತವೆ. ನಿಮ್ಮಿಂದ ನಿಂದನೆಗೆ ಒಳಗಾದ ಹಲವು ಮಹಿಳೆಯರು ಮುಂದೊಂದು ದಿನ ಎಲ್ಲರ ಎದುರು ಬಂದು ಸತ್ಯವನ್ನು ಹಂಚಿಕೊಳ್ಳುತ್ತಾರೆ. ನಟಿ ಐಶ್ವರ್ಯಾ ರೈ ಅವರಂತೆ…” ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ, ನಟ ಹಾರ್ವೆ ವೈನ್​ಸ್ಟೀನ್ ಹಾಲಿವುಡ್​ನ ಮಾಜಿ ನಿರ್ಮಾಪಕರು. ಇನ್ನು, ಅವರ ವಿರುದ್ಧ ಕೇಳಿ ಬಂದ ಹಲವು ಲೈಂಗಿಕ ಕಿರುಕುಳ ಆರೋಪಗಳು ಸಾಬೀತಾಗಿದ್ದವು. ಇದಿಷ್ಟೇ ಅಲ್ಲದೇ, ನಟಿ ಸೋಮಿ ಅಲಿ ಖಾನ್ ಅವರ ಪೋಸ್ಟ್ ಜತೆಗೆ ನಟ ಸಲ್ಮಾನ್ ಖಾನ್ ಅವರ ಒಂದು ಹಿಂದಿ ಹಾಡಿನ ವಿಡಿಯೋದಿಂದ ಒಂದು ಫೋಟೋ ಹಂಚಿಕೊಂಡರು. ಆ ಚಿತ್ರ ನಟ ಸಲ್ಮಾನ್ ಖಾನ್ ಮತ್ತು ನಟಿ ಭಾಗ್ಯಶ್ರೀ ಅವರ ಮೈನೆ ಪ್ಯಾರ್ ಕಿಯಾಚಿತ್ರದ ಆತೆ ಜಾತೆ ಹಸ್ತೆ ಗಾತೆಹಿಟ್ ಹಾಡಿನಿಂದ ಎನ್ನಲಾಗಿದೆ. ನಂತರ ನಟಿಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅವರು ತಮ್ಮ ಪೋಸ್ಟ್ ಅನ್ನು ಡಿಲಿಟ್ ಮಾಡಿದ್ದಾರೆ ಎಂಬಂತೆ ಕಾಣುತ್ತಿದೆ.

    ನಿಮ್ಮಿಂದ ಲೈಂಗಿಕ ಕಿರುಕುಳ ಅನುಭವಿಸಿದ ಎಲ್ಲರೂ... ಸಲ್ಮಾನ್​ಗೆ ಮಾಜಿ ಪ್ರೇಯಸಿ ವಾರ್ನಿಂಗ್?

    ಹಾಗಾದರೆ, ನಟಿ ಸೋಮಿ ಅಲಿ ಅವರು ಪರೋಕ್ಷವಾಗಿ ಸಲ್ಮಾನ್ ಅವರನ್ನು ಬಾಲಿವುಡ್​ನ ಹಾರ್ವೆ ವೈನ್​ಸ್ಟೀನ್ ಎಂದು ಕರೆದರೆ? ಜತೆಗೆ, ಸಲ್ಮಾನ್ ಅವರಿಗೆ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟರೆ? ಸದ್ಯ, ನಟಿಯ ಈ ಪೋಸ್ಟ್​ನ ಅರ್ಥವೇನು? ಸೋಮಿ ಹೀಗೇ ಹೇಳೋಕೆ ಕಾರಣವೇನು? ಎಂಬಿತ್ಯಾದಿ ಪ್ರಶ್ನೆಗಳು ನೆಟ್ಟಿಗರಲ್ಲಿ ಸಖತ್ ಕುತೂಹಲ ಹೆಚ್ಚಿಸಿವೆ. ಅವರು ಹೇಳಿದ್ದು ಯಾರ ಬಗ್ಗೆ ಎನ್ನುವ ಕುತೂಹಲವೂ ಮೂಡಿದೆ. 1992-97 ರ ಅವಧಿಯಲ್ಲಿ ಸೋಮಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಈ ವೇಳೆ ಸಲ್ಮಾನ್ ಅವರ ಜತೆ ರಿಲೇಶನ್​ಶಿಪ್​ ನಲ್ಲಿದ್ದರು. ನಂತರ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು. ಬಳಿಕ, 2018 ರಲ್ಲಿ, #meetoo ಚಳುವಳಿಯ ಸಂದರ್ಭದಲ್ಲಿ ನಟಿ ಸೋಮಿ ಅಲಿ ಧೈರ್ಯಶಾಲಿ ಮಹಿಳೆಯರ ಬೆಂಬಲಕ್ಕೆ ನಿಂತರು. ಜತೆಗೆ, ಸ್ವತಃ ತಾವು ಅನುಭವಿಸಿದ ವೈಲಿ ಲೈಂಗಿಕ ಕಿರುಕುಳದ ಕಥೆಯನ್ನು ಸಹ ಹಂಚಿಕೊಂಡಿದ್ದರು

    ‘ಕೆಜಿಎಫ್​-2 & ಬೀಸ್ಟ್’ ಮಧ್ಯೆ ಪೈಪೋಟಿ ಇಲ್ಲ​; ಸಿನಿಮಾದ ನಟರು ಮಾತ್ರವಲ್ಲ, ನಿರ್ದೇಶಕರು ಒಳ್ಳೆಯ ಮಿತ್ರರು

    ಮತ್ತೆ ತೆರೆಹಂಚಿಕೊಳ್ಳಲಿರುವ ಬಾಹುಬಲಿ ಮತ್ತು ದೇವಸೇನಾ?

    Samantha Brand Value: ಜಾಹೀರಾತಿಗೆ, ಒಂದು ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ ಪಡೆಯೋದು ಎಷ್ಟು ಲಕ್ಷ?

    ದಳಪತಿ ವಿಜಯ್ ನಿಧನ? ಏಡ್ಸ್ ರೋಗಿ ಅಜಿತ್? ಏನಾಗಿದೆ ಈ ಸ್ಟಾರ್ ನಟರ ಅಭಿಮಾನಿಗಳಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts