More

    ಗಂಡಸರಿಗೆ ಮಾತ್ರ ಅಫೇರ್​ ಇಟ್ಟುಕೊಳ್ಳುವ ಹಕ್ಕಿದೆ ಎಂದಿದ್ದರಂತೆ ಸಲ್ಮಾನ್​!

    ಮುಂಬೈ: ಅವಕಾಶ ಸಿಕ್ಕಾಗಲೆಲ್ಲಾ ಸಲ್ಮಾನ್​ ಖಾನ್​ ವಿರುದ್ಧ ಹರಿಹಾಯುತ್ತಲೇ ಇರುತ್ತಾರೆ, ಸಲ್ಮಾನ್​ನ ಮಾಜಿ ಗೆಳತಿ ಮತ್ತು ನಟಿ ಸೋಮಿ ಅಲಿ. ಕೆಲವು ದಿನಗಳ ಹಿಂದಷ್ಟೇ, ‘ನೀನು ಬೇಕಾದರೆ ಭಾರತದಲ್ಲಿ ನನ್ನ ಪ್ರದರ್ಶನಗಳನ್ನು ಬ್ಯಾನ್​ ಮಾಡಿಸು ಅಥವಾ ನನ್ನ ಮೇಲೆ ಕೇಸ್​ ಹಾಕಿಸು. ನಾನು ಕೇರ್​ ಮಾಡುವುದಿಲ್ಲ. ನನ್ನನ್ನು ಪಾರು ಮಾಡುವುದಕ್ಕೆ 50 ಲಾಯರ್​ಗಳಿದ್ದಾರೆ’ ಎಂದು ಹೇಳಿಕೊಂಡಿದ್ದರು.

    ಇದನ್ನೂ ಓದಿ: ಹಿಟ್ ಸಿನಿಮಾ ಮಾಡಿದ್ರೂ ಹಣ ಕಳೆದುಕೊಂಡೆ ಎಂದ ಖ್ಯಾತ ಹಿಂದಿ ಚಿತ್ರ ನಿರ್ಮಾಪಕ..!

    ಈಗ ಸಲ್ಮಾನ್​ ವಿರುದ್ಧ ಸೋಮಿ ಅಲಿ ಪುನಃ ಮಾತನಾಡಿದ್ದಾರೆ. ಆತನ ಜತೆಗಿದ್ದ ಎಂಟು ವರ್ಷಗಳು, ತಮ್ಮ ಪಾಲಿಗೆ ಕರಾಳವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಸಲ್ಮಾನ್​ ತನಗೆ ಕೊಟ್ಟ ಕಾಟದ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳಿಕೊಂಡಿದ್ದಾರೆ.

    ‘ಸಲ್ಮಾನ್​ ಜತೆಗೆ ಕಳೆದ ಎಂಟು ವರ್ಷಗಳು ನನ್ನ ಇಡೀ ಜೀವನದ ಕೆಟ್ಟ ದಿನಗಳು. ಆತನಿಗಿದ್ದ ಹಲವು ಅಫೇರ್​ಗಳ ಮಧ್ಯೆ, ಆತ ನನ್ನನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ. ಅಷ್ಟೇ ಅಲ್ಲ, ನಾನು ದಡ್ಡಿ, ಕುರೂಪಿ ಎಂದೆಲ್ಲ ಕರೆಯುತ್ತಿದ್ದ. ಪ್ರತಿ ದಿನ ನನ್ನನ್ನು ಹೀಯಾಳಿಸುತ್ತಿದ್ದ. ನನನ್ನು ಎಲ್ಲರೆದುರು ಅವಮಾನಿಸುತ್ತಿದ್ದ. ನಾನು ಅವನ ಗರ್ಲ್​ಫ್ರೆಂಡ್​ ಎಂದು ಎಲ್ಲೂ ಹೇಳುತ್ತಿರಲಿಲ್ಲ. ಅಥವಾ ಒಪ್ಪಿಕೊಳ್ಳುತ್ತಿರಲಿಲ್ಲ. ಕೊನೆಗೂ ಒಪ್ಪಿಕೊಂಡ ಮೇಲೆ ತನ್ನ ಸ್ನೇಹಿತರ ಎದುರು ಅವಮಾನಿಸುತ್ತಿದ್ದ. ಅವನ ಈ ನಡತೆಯಿಂದ ಬೇಸತ್ತು, ಬೇರೆಯವರ ಜತೆಗೆ ಬೆರೆಯುವುದಕ್ಕೆ ಪ್ರಾರಂಭಿಸಿದೆ. ನನ್ನನ್ನು ಇಷ್ಟಪಡುವ ಮತ್ತು ಪ್ರೀತಿಸುವ ಜನರಿಗಾಗಿ ಹುಡುಕಾಡಿದೆ. ಆದರೆ, ನನಗೆ ಅಂಥವರು ಸಿಗಲೇ ಇಲ್ಲ. ನನಗೆ ಸಿಕ್ಕವರೆಲ್ಲ ನನ್ನನ್ನು ಬಳಸಿಕೊಂಡರೆ ಹೊರತು, ಪ್ರೀತಿಯಿಂದ ನೋಡಿಕೊಳ್ಳಲೇ ಇಲ್ಲ. ಕೊನೆಗೆ ಒಂದು ದಿನ ನನ್ನ ಅಫೇರ್​ಗಳ ಬಗ್ಗೆ ಸಲ್ಮಾನ್​ಗೆ ಗೊತ್ತಾಯಿತು. ನನಗೆ ಚೆನ್ನಾಗಿ ಹೊಡೆದಿದ್ದಷ್ಟೇ ಅಲ್ಲ, ಗಂಡಸರಿಗೆ ಮಾತ್ರ ಅಫೇರ್​ ಇಟ್ಟುಕೊಳ್ಳುವ ಹಕ್ಕಿದೆಯೇ ಹೊರತು ಹೆಂಗಸರಿಗಿಲ್ಲ. ಆತನ ಮಾತು ಕೇಳಿ ನನಗೆ ಆಘಾತವಾಗಿತ್ತು’ ಎಂದು ಹೇಳಿದ್ದರು.

    ಇದನ್ನೂ ಓದಿ: ಯಕ್ಷಗಾನ ಥ್ರಿಲ್ಲರ್ ಯಾನ; ವಿಜಯವಾಣಿ ಸಿನಿಮಾ ವಿಮರ್ಶೆ

    ಒಂದು ಕಾಲಕ್ಕೆ ಸಲ್ಮಾನ್​ ಖಾನ್​ ಗೆಳತಿಯಾಗಬೇಕು ಎಂದು ಭಾರತಕ್ಕೆ ಬಂದಿದ್ದ ಸೋಮಿ, ಆ ನಂತರ ಸಲ್ಮಾನ್​ಗೆ ಹತ್ತಿರವಾಗಿ, ಅವರಿಂದ ಸಾಕಷ್ಟು ನೋವು ತಿಂದು ಸದ್ದಿಲ್ಲದೆ ಅದೆಲ್ಲಿಗೋ ಮಾಯವಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಪುನಃ ವಾಪಸ್ಸಾಗಿರುವ ಸೋಮಿ, ಅವಕಾಶ ಸಿಕ್ಕಾಗಲೆಲ್ಲ ಸಲ್ಮಾನ್​ ವಿರದ್ಧ ಹರಿಹಾಯುತ್ತಲೇ ಇದ್ದಾರೆ.

    ತಾಯಿಯಾಗ್ತಿದ್ದಾರಾ ಕತ್ರೀನಾ ಕೈಫ್​? ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts