More

    ಸೋಮೇಶ್ವರ, ತ್ರಾಸಿ-ಮರವಂತೆ ಬೀಚ್ ಅಭಿವೃದ್ಧಿಗೆ ಟೆಂಡರ್ ಶೀಘ್ರ: ಸಂಸದ ರಾಘವೇಂದ್ರ ಮಾಹಿತಿ

    ಗಂಗೊಳ್ಳಿ/ಬೈಂದೂರು: ತ್ರಾಸಿ-ಮರವಂತೆ ಹಾಗೂ ಸೋಮೇಶ್ವರ ಬೀಚ್ ಅಭಿವೃದ್ಧಿ ಬಗ್ಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮತ್ತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ತ್ರಾಸಿ ಕೊಂಕಣಿ ಖಾರ್ವಿ ಸಭಾಭವನದಲ್ಲಿ ಗುರುವಾರ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
    ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರವಾಸೋದ್ಯಮಕ್ಕಾಗಿ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಮೂಲಕ ಪ್ರವಾಸಿ ತಾಣ ಅಭಿವೃದ್ಧಿ ಜೊತೆಗೆ ಯುವಶಕ್ತಿಗೆ ಉದ್ಯೋಗವೂ ದೊರೆಯಲಿದೆ. ಸೋಮೇಶ್ವರ ಬೀಚ್ ಹಾಗೂ ತ್ರಾಸಿ-ಮರವಂತೆ ಬೀಚ್ ಅಭಿವೃದ್ಧಿಗೆ ನೀಲಿ ನಕ್ಷೆ ತಯಾರಾಗಿದ್ದು, ಶೀಘ್ರದಲ್ಲಿ ಡಿಪಿಆರ್ ತಯಾರಿಸಿ ಟೆಂಡರ್ ಕರೆಯಲಾಗುವುದು. ಯೋಜನೆಗೆ ತಲಾ 10 ಕೋಟಿ ರೂ. ನೀಡಲಾಗುವುದು. ಬೈಂದೂರು ಒತ್ತಿನೆಣೆಯಲ್ಲಿ ಉಡಾನ್ ಯೋಜನೆಯಡಿ ಏರ್‌ಸ್ಟ್ರಿಪ್ ಮಾಡುವ ಅಪೇಕ್ಷೆ ಇದೆ ಎಂದರು.

    ಪ್ರವಾಸೋದ್ಯಮ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಅನಿತಾ ಭಾಸ್ಕರ್, ಅಸಿಸ್ಟೆಂಟ್ ಡೈರೆಕ್ಟರ್ ಸೋಮಶೇಖರ ಬಿ.ಕೆ., ಮಂಗಳೂರು ಪ್ರವಾಸೋದ್ಯಮ ಇಲಾಖೆಯ ಎಇಇ ಎ.ಮಂಜಪ್ಪ, ಎನ್‌ಎಚ್‌ಆರ್ ಇಂಜಿನಿಯರ್ ರಮೇಶ್, ಕುಂದಾಪುರ ತಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಜಿಪಂ ಸದಸ್ಯರಾದ ಶಂಕರ ಪೂಜಾರಿ ಯಡ್ತರೆ, ರೋಹಿತ್ ಕುಮಾರ್ ಶೆಟ್ಟಿ, ತಾಪಂ ಸದಸ್ಯರಾದ ಸುರೇಂದ್ರ ಖಾರ್ವಿ, ಉಮೇಶ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಜೆಡ್ಡು, ಪ್ರಿಯದರ್ಶಿನಿ ಬೆಸ್ಕೂರು, ಬೈಂದೂರು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಸುರೇಶ್, ಉದ್ಯಮಿ ವೆಂಕಟೇಶ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

    ಮರವಂತೆ ತ್ರಾಸಿ ಬೀಚ್ ಹಾಗೂ ಒತ್ತಿನೆಣೆಗೆ ಬೀಚ್ ಅಭಿವೃದ್ಧಿಗೆ ಒಟ್ಟು 25 ಕೋಟಿ ರೂ. ಯೋಜನೆ ಸಿದ್ಧವಾಗುತ್ತಿದೆ. ಮರವಂತೆ ಬೀಚ್‌ಗೆ ಈ ಮೊದಲೇ 5 ಕೋಟಿ ರೂ.ಗಳ ಯೋಜನೆ ಸಿದ್ಧಗೊಂಡಿದ್ದು ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ 10 ಕೋಟಿ ಹಾಗೂ ಸೋಮೇಶ್ವರ ಬೀಚ್‌ಗೆ 10 ಕೋಟಿಗೆ ಅನುಮೋದನೆ ದೊರೆತಿದೆ. ಶೀಘ್ರವೇ ಎರಡೂ ಬೀಚ್‌ಗಳು ಮಾದರಿ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ.
    ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕ

    ಒತ್ತಿನೆಣೆ, ಸುಬ್ಬರಾಡಿಗೆ ಭೇಟಿ
    ಸಂಸದ ಹಾಗೂ ಶಾಸಕರು ಒತ್ತಿನೆಣೆ ಕ್ಷಿತಿಜಾ ನೇಸರಧಾಮಕ್ಕೆ ಭೇಟಿ ನೀಡಿ, ಸೋಮೇಶ್ವರ ಬೀಚ್‌ನಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
    ಉಪ್ಪುಂದ ಸುಬ್ಬರಾಡಿ ಅಣೆಕಟ್ಟಿನ ಕಾಮಗಾರಿ ವೀಕ್ಷಿಸಿದ ಸಂಸದರು, ಮಳೆಗಾಲದ ಒಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಹೇಳಿದರಲ್ಲದೆ ಈವರೆಗೆ ಆಗಿರುವ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಪಂ ಸದಸ್ಯರಾದ ಶಂಕರ ಪೂಜಾರಿ, ಸುರೇಶ ಬಟವಾಡಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ, ಕುಂದಾಪುರ ಡಿಎಫ್‌ಒ ಆಶೀಶ್ ರೆಡ್ಡಿ, ಎಸಿಎಫ್‌ಒ ಲೋಹಿತ್, ಬೆಂಗಳೂರು ಪ್ರವಾಸೋದ್ಯಮ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಅನಿತಾ ಭಾಸ್ಕರ್, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಸೋಮಶೇಖರ್ ಬಿ. ಕೆ., ಉದ್ಯಮಿ ಕುಂಜಾಲು ವೆಂಕಟೇಶ ಕಿಣಿ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts