More

    ಹೆದ್ದಾರಿ ಸಮಸ್ಯೆಗಳಿಗೆ ಮುಕ್ತಿ

    ಕೋಟ: ರಾಷ್ಟ್ರೀಯ ಹೆದ್ದಾರಿ ಅಗಲವಾದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ.ಸಮಸ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಜಾಗೃತಿ ಸಮಿತಿ ಸಾಕಷ್ಟು ಹೋರಾಟ ನಡೆಸಿದ್ದು, ಇದೀಗ ಹೆದ್ದಾರಿ ಪ್ರಾಧಿಕಾರ ಹಾಗೂ ನಿರ್ವಹಣೆಗೈಯುತ್ತಿರುವ ನವಯುಗ ಕಂಪನಿ ಕೆಲವೊಂದು ಸಮಸ್ಯೆಗಳನ್ನು ಮುಕ್ತಿಗಾಣಿಸಲು ಮುಂದಾಗುತ್ತಿದೆ. ಆದರೂ ದೊಡ್ಡ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ.

    ಅವೈಜ್ಞಾನಿಕ ಕಾಮಗಾರಿಯಿಂದಾಗುವ ಅವಘಡಗಳಿಗೆ ನವಯುವ ಕಂಪನಿ ನೇರ ಹೊಣೆಗಾರ ಆಗುತ್ತಿದೆ. ಕೋಟ, ಸಾಲಿಗ್ರಾಮ ತೆಕ್ಕಟ್ಟೆ ಇಲ್ಲಿನ ಸರ್ವಿಸ್ ರಸ್ತೆ ಅರೆಬರೆಯಾಗಿದ್ದು, ದಾರಿದೀಪ ಅಸಮರ್ಪಕ ನಿರ್ವಹಣೆ, ಅವೈಜ್ಞಾನಿಕ ಡಿವೈಡರ್, ಚರಂಡಿ ಹೀಗೆ ಸಾಕಷ್ಟು ಸಮಸ್ಯೆ ಹಾಗೇ ಉಳಿದು ಜನರಿಗೆ ಸಂಕಷ್ಟ ತಂದೊಡ್ಡುತ್ತಿದೆ.

    ಹೆದ್ದಾರಿ ಜಾಗೃತಿ ಸಮಿತಿ ಎಚ್ಚರಿಕೆ, ಸ್ಥಳೀಯರ ಆಕ್ರೋಶ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕದ ತಟ್ಟಿದೆ. ಈ ದಿಸೆಯಲ್ಲಿ ಇತ್ತೀಚೆಗೆ ಕೋಟ ಅಮೃತೇಶ್ವರಿ ಸರ್ಕಲ್ ಬಳಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯಾಡಳಿತದ ಉಸ್ತುವಾರಿಯಲ್ಲಿ ಸಭೆ ಸೇರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

    ವೇಗತಡೆ ನಿರ್ಮಾಣ

    ಸಾಕಷ್ಟು ಅಪಘಾತದ ನಡುವೆ ಕೋಟ ಅಮೃತೇಶ್ವರಿ ಸರ್ಕಲ್, ಸಾಲಿಗ್ರಾಮದ ಶ್ರೀ ಗುರುನರಸಿಂಹ ಸರ್ಕಲ್ ಬಳಿ ವೇಗಕ್ಕೆ ಕಡಿವಾಣ ಹಾಕುವ ದಿಸೆಯಲ್ಲಿ ಥರ್ಮಾಪ್ಲಾಸ್ಟಿಂಗ್ ಅಳವಡಿಸಲಾಗಿದೆ. ಆಯಾ ಭಾಗಗಳ ಸರ್ವೀಸ್ ರಸ್ತೆಗಳಲ್ಲಿ ಹಂಪ್ ಅಳವಡಿಸಿ ಅಪಘಾತಕ್ಕೆ ಕಡಿವಾಣ ಹಾಕಲಾಗಿದೆ. ಅಲ್ಲಲ್ಲಿ ದಾನಿಗಳ ನೇರವಿನೊಂದಿಗೆ ಕೋಟ ಆರಕ್ಷಕ ಠಾಣೆ ಬ್ಯಾರಿಕೇಡ್ ಅಳವಡಿಸಿದೆ. ಇನ್ನುಳಿದಂತೆ ಬಹು ಬೇಡಿಕೆ ಹೈಮಾಸ್ಟ್ ದೀಪ ಕೋಟ ಮತ್ತು ತೆಕ್ಕಟ್ಟೆ ಸರ್ಕಲ್ ಪ್ರದೇಶದಲ್ಲಿ ಅಳವಡಿಸಲು ಅಣಿಯಾಗಿದೆ. ಹೀಗೆ ಸಾಕಷ್ಟು ಸಮಸ್ಯೆಗಳಿಗೆ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ ವಿಶೇಷ ಮುತುವರ್ಜಿಯಲ್ಲಿ ಎಲ್ಲಾ ಕಾರ್ಯ ನಡೆಯುತ್ತಿದೆ.

    ಉಳಿದುಕೊಂಡ ಒತ್ತುವರಿ ಸ್ಥಳ

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಕ ಕಾಲಘಟ್ಟದಲ್ಲಿ ಆಯಾ ಭಾಗಗಳಲ್ಲಿ ಒತ್ತುವರಿಪಡಿಸಿಕೊಂಡ ಸ್ಥಳ ಪೂರ್ಣಪ್ರಮಾಣದಲ್ಲಿ ತೆರವುಗೊಳಿಸಲು ನಿರಾಸಕ್ತಿ ವಹಿಸಿದೆ. ತೆಕ್ಕಟ್ಟೆ ಹಾಗೂ ಸಾಸ್ತಾನ ಭಾಗಗಳಲ್ಲಿ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಿದ್ದರೂ ಕೋಟ ಹಾಗೂ ಸಾಲಿಗ್ರಾಮ ಭಾಗಗಳಲ್ಲಿ ತೆರವು ಕಾರ್ಯ ಅಪೂರ್ಣವಾಗಿದೆ. ಈ ದಿಸೆಯಲ್ಲಿ ಜನರಿಗೆ ಸಂಚರಿಸಲು ಸ್ಥಳದ ಸಮಸ್ಯೆ ಎದ್ದು ಕಾಣುತ್ತಿದೆ. ಅಲ್ಲದೆ ಅಲ್ಲಲ್ಲಿ ನಿರ್ಮಾಣಗೊಂಡ ಚರಂಡಿಗಳು ಬಾಯ್ತೆರೆದು ಜನರ ಜೀವಕ್ಕೆ ಅಪಾಯ ಉಂಟು ಮಾಡುತ್ತಿದೆ.

    ಇತ್ತೀಚೆಗೆ ಕೋಟದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವಾರು ಕಡೆ ಹೈಮಾಸ್ಟ್ ದೀಪ ಮತ್ತು ದಾರಿದೀಪ ಅಳವಡಿಸಿದ್ದು ಜೀಬ್ರಾ ಕ್ರಾಸ್ ಮತ್ತು ರಸ್ತೆ ಪಟ್ಟಿ ಅಳವಡಿಸಿ ಒಂದಿಷ್ಟು ಕಾಮಗಾರಿ ತುರ್ತಾಗಿ ನೆರವೇರಿಸಲಾಗಿದೆ. ಕೋಟದ ಅಪಘಾತ ವಲಯದ ತಿರುವು ಕಾಮಗಾರಿ ಬಾಕಿಯಿದೆ. ಆಡಳಿತ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಪಘಾತ ತಪ್ಪಿಸುವಂತೆ ಮತ್ತು ಸಾಲಿಗ್ರಾಮದ ತಿರುವಿನ ಅಗಲವನ್ನು ಕಿರಿದುಗೊಳಿಸುವಂತೆ ಹಲವಾರು ದಿನಗಳಿಂದ ಸಾರ್ವಜನಿಕರು ಬೇಡಿಕೆ ಮಂಡಿಸುತ್ತಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಲ್ಲಿ ವಿನಂತಿಸುತ್ತೇನೆ.

    -ನಾಗರಾಜ್ ಗಾಣಿಗ, ಸಾಮಾಜಿ ಕಾರ್ಯಕರ್ತರು ಸಾಲಿಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts