More

    ಆಟಕ್ಕುಂಟು ಲೆಕ್ಕಕ್ಕಿಲ್ಲದ ಅಭ್ಯರ್ಥಿಗಳು, ನೋಟಾಕ್ಕೆ ಹೆಚ್ಚು ಮತ

    -ಹೇಮನಾಥ್ ಪಡುಬಿದ್ರಿ

    ಕಾಪು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 5 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಎಸ್‌ಡಿಪಿಐ 5 ಸುತ್ತುಗಳಲ್ಲಿ ಮೂರಂಕಿ, ಎಎಪಿ 2 ಸುತ್ತುಗಳಲ್ಲಿ ಒಂದಂಕಿ ಗಳಿಸಿದರೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಎಲ್ಲ ಸುತ್ತುಗಳಲ್ಲಿ ಎರಡಂಕಿ ಮತಗಳನ್ನಷ್ಟೇ ಗಳಿಸಿದೆ.

    ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ನೇರ ಸ್ಪರ್ಧೆಯಲ್ಲಿ ಜೆಡಿಎಸ್, ಎಸ್‌ಡಿಪಿಐ ಹಾಗೂ ಎಎಪಿ ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ಅದರಲ್ಲೂ ಜೆಡಿಎಸ್ ಹಾಗೂ ಎಎಪಿ ಅಭ್ಯರ್ಥಿ ಕ್ಷೇತ್ರದಲ್ಲಿ ಚಲಾವಣೆಯಾಗಿರುವ ನೋಟಕ್ಕಿಂತಲೂ ಕಡಿಮೆ ಗಳಿಸಿರುವುದು ಆ ಪಕ್ಷದ ಅಸ್ತಿತ್ವವೇ ಇಲ್ಲ ಎಂಬುದನ್ನು ಸಾಬೀತು ಮಾಡಿದೆ.

    22 ಗ್ರಾಪಂನಲ್ಲಿ ಬಿಜೆಪಿ ಮುಂದೆ

    ಕ್ಷೇತ್ರದಲ್ಲಿ ಬಿಜೆಪಿ ಇವಿಎಂನಲ್ಲೂ, ಅಂಚೆ ಮತದಲ್ಲೂ ಕಾಂಗ್ರೆಸ್‌ಗಿಂತ ಮುನ್ನಡೆ ಕಾಯ್ದುಕೊಂಡಿರುವುದು ವಿಶೇಷವಾಗಿದೆ. ಕುಕ್ಕೆಹಳ್ಳಿ, ಪೆರ್ಡೂರು, ಬೈರಂಪಳ್ಳಿ, ಬೊಮ್ಮರಬೆಟ್ಟು, ಕೊಡಿಬೆಟ್ಟು, ಆತ್ರಾಡಿ, ಬಡಗಬೆಟ್ಟು, ಕುರ್ಕಾಲು, ಕೋಟೆ, ಅಲೆವೂರು, ಉದ್ಯಾವರ, ಇನ್ನಂಜೆ, ಉಳಿಯಾರಗೋಳಿ, ಕಾಪು, ಮಜೂರು, ಕುತ್ಯಾರು, ಎಲ್ಲೂರು, ಉಚ್ಚಿಲ, ಪಡುಬಿದ್ರಿ, ಪಲಿಮಾರು, ಹೆಜಮಾಡಿ, ತೆಂಕ ಗ್ರಾಪಂ ವ್ಯಾಪ್ತಿಯಲ್ಲಿ ಬಿಜೆಪಿ ಮತಗಳಿಕೆಯಲ್ಲಿ ಕಾಂಗ್ರೆಸ್‌ಗಿಂತ ಮುನ್ನಡೆ ಗಳಿಸಿದೆ. ಅಲ್ಪಸಂಖ್ಯಾತರು ಹೆಚ್ಚಿರುವ ಮುದರಂಗಡಿ, ಬೆಳಪು, ಕಟಪಾಡಿ, ಶಿರ್ವ, ಬೆಳ್ಳೆ, ಮಣಿಪುರ, ಮೂಳೂರು. ಮಲ್ಲಾರು ಗ್ರಾಪಂ ವ್ಯಾಪ್ತಿಯಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಅನುಭವಿಸಿದೆ. ಜೆಡಿಎಸ್, ಎಸ್‌ಡಿಪಿಐ ಹಾಗೂ ಎಎಪಿ ಕೆಲ ಮತಗಟ್ಟೆಗಳಲ್ಲಿ ಶೂನ್ಯ ಸಂಪಾದನೆ ಮಾಡಿದೆ.

    2018ರ ಚುನಾವಣೆಯಲ್ಲಿ 183004 ಮತದಾರನ್ನೊಂದಿದ್ದ ಕ್ಷೇತ್ರದಲ್ಲಿ 5 ಜನ ಕಣದಲ್ಲಿದ್ದರು. ಬಿಜೆಪಿ 11917 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಬಾರಿ ಒಟ್ಟು 188952 ಮತದಾರರಿದ್ದು, 1,50,101 ಮಂದಿ ಹಕ್ಕು ಚಲಾಯಿಸಿದ್ದಾರೆ. ಮಹಿಳಾ ಮತದಾರರೇ ಅಧಿಕವಾಗಿರುವ ಕ್ಷೇತ್ರದಲ್ಲಿ 80107 ಮಂದಿ ಮತದಾನ ಮಾಡಿ, ಪುರುಷರಿಗಿಂತ ಮುಂದು ಎಂಬುದನ್ನು ಸಾಬೀತು ಮಾಡಿದ್ದರು. 5 ಜನ ತೃತೀಯ ಲಿಂಗಿ ಮತದಾರರಲ್ಲಿ 3 ಮಂದಿ ಮತ ಚಲಾಯಿಸಿದ್ದರು. ತುಸು ಪ್ರಮಾಣದಲ್ಲಿ ಈ ಬಾರಿ ಮತದಾನ ಹೆಚ್ಚಳವಾಗಿದ್ದು, 5 ಜನ ಕಣದಲ್ಲಿದ್ದರೂ, ಬಿಜೆಪಿ ಗೆಲುವಿನ ಅಂತರ 13,004ಕ್ಕೆ ಏರಿಕೆ ಕಂಡಿದೆ.

    ಅಂಚೆ ಮತದಲ್ಲಿ ನೋಟಾ ಹೆಚ್ಚಳ

    ಈ ಬಾರಿಯ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ ಅಂಚೆಯಲ್ಲಿ 7 ಹಾಗೂ ಮತಗಟ್ಟೆಯಲ್ಲಿ 798 ಸೇರಿ 805 ನೋಟಾ ಚಲಾವಣೆಯಾಗಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ನೋಟಾ ಚಲಾವಣೆ ಕಡಿಮೆಯಾದರೆ ಅಂಚೆ ಮತದಲ್ಲಿ ನೋಟಾ ಹೆಚ್ಚಳ ಕಂಡಿದೆ. ಕಳೆದ ಬಾರಿ ಅಂಚೆಯಲ್ಲಿ ಎರಡು ಹಾಗೂ ಮತಗಟ್ಟೆಯಲ್ಲಿ 837 ಸೇರಿ 839 ನೋಟಾ ಚಲಾವಣೆಯಾಗಿತ್ತು. ಮತಗಟ್ಟೆಗಳಲ್ಲಿ 6, ಮತಗಟ್ಟೆ ಹೊರತುಪಡಿಸಿ 201ರಲ್ಲಿ ನೋಟಾ ಚಲಾವಣೆಯಾಗಿದ್ದು, ಈ ಬಾರಿ ಹೆಚ್ಚಿನ ಕಡೆ ಒಂದಂಕಿಗೆ ಸೀಮಿತವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts