More

    ಸೋಲಾರ್ ಪ್ಲಾಂಟ್ ಕಾವಲುಗಾರ ಸಾವು

    ಕಾನಹೊಸಹಳ್ಳಿ: ಪೂಜಾರಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಸೋಲಾರ್ ಪ್ಲಾಂಟ್ ನ ಕಾವಲುಗಾರ ಕರ್ತವ್ಯದ ವೇಳೆ ಮೃತಪಟ್ಟಿದ್ದು, ಕುಟುಂಬಸ್ಥರು ಕಾರ್ಖಾನೆ ಮುಂದೆ ಶವವಿಟ್ಟು ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದರು.

    ಪೂಜಾರಹಳ್ಳಿ ಗ್ರಾಮದ ತಾತಯ್ಯ(42) ಮೃತ. ಶನಿವಾರ ರಾತ್ರಿ ಪಾಳಯದಲ್ಲಿ ಕೆಲಸಕ್ಕೆ ಬಂದಿದ್ದು, ಬೆಳ್ಳಗೆಯಾದರೂ ಮನೆಗೆ ಬಂದಿಲ್ಲ. ಹೋಗಿ ನೋಡಿದಾಗ ಎಂಸಿಆರ್ ರೂಂನಲ್ಲಿ ಮೃತಪಟ್ಟಿದ್ದಾರೆ. ನನ್ನ ಗಂಡನ ಸಾವಿನ ಬಗ್ಗೆ ಅನುಮಾನವಿದೆ ಎಂದು ಮೃತನ ಪತ್ನಿ ವಿಶಾಲಾಕ್ಷಿ ನೀಡಿದ ದೂರಿನನ್ವಯ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಗ್ರಾಮದ ಹೊರವಲಯದ ಅವಾದ ಸೋಲಾರ್ ಪ್ಲಾಂಟ್ ಬಳಿ ಮೃತನ ಕುಟುಂಬದವರು, ಗ್ರಾಮಸ್ಥರು ಶವವಿಟ್ಟು ಪ್ರತಿಭಟನೆ ನಡೆಸಿದರು. ಸಾವಿನ ಬಗ್ಗೆ ಅನುಮಾನವಿದೆ. ಇಬ್ಬರು ಚಿಕ್ಕ ಹೆಣ್ಣು ಮಕ್ಕಳಿದ್ದು ತಾತಯ್ಯನ ಸಾವಿನಿಂದ ಕುಟುಂಬ ಬೀದಿಗೆ ಬಂದಿದೆ. ಅವರ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳಬೇಕಿದೆ. ಮುಂದೆ ಇದೇ ರೀತಿ ಬೇರೆ ಸಿಬ್ಬಂದಿಗೆ ಏನಾದರೂ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಕಂಪನಿಯವ ಮುಖ್ಯಸ್ಥರು ಸ್ಥಳಕ್ಕೆ ಬರಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    ಸ್ಥಳಕ್ಕೆ ಬಂದ ಮ್ಯಾನೇಜರ್ ಸತೀಶ್ ಮಾತನಾಡಿ, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ಕೊಟ್ಟೂರು ಸಿಪಿಐ ವೆಂಕಟಸ್ವಾಮಿ, ಕಾನಹೊಸಹಳ್ಳಿ ಪಿಎಸ್‌ಐಗಳಾದ ಎರಿಯಪ್ಪ ಅಂಗಡಿ, ನಾಗರತ್ನಮ್ಮ, ಕೂಡ್ಲಿಗಿಯ ಪಿಎಸ್‌ಐ ಧನುಂಜಯ್ಯ, ಸಿಬ್ಬಂದಿ ಜಗದೀಶ್, ಸಂದೀಪ್, ಹಾಲೇಶ್, ಅಂಜಿನಪ್ಪ, ಮಂಜುನಾಥ, ಹಂಪಣ್ಣ, ಬಸವರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts