More

    ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಕೈಜೋಡಿಸಿ

    ಅಳವಂಡಿ: ಹೆಣ್ಣು ಅಬಲೆಯಲ್ಲ ಸಬಲೆಯೆಂದು ಎಲ್ಲ ರಂಗದಲ್ಲೂ ಸಾಧನೆ ಗೈದು ಸಾಬೀತುಪಡೆಸಿದ್ದಾಳೆ. ಈಗಾಗಿ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಸರ್ವರು ಕೈಜೋಡಿಸಬೇಕು ಎಂದು ಪಿಡಿಓ ಶೇಖರಪ್ಪ ತಿಳಿಸಿದರು.

    ಇದನ್ನೂ ಓದಿ: ಅಸಮಾನತೆಯನ್ನು ತಿದ್ದಿದ ನುಲಿಯ ಚಂದಯ್ಯ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

    ಸಮೀಪದ ನಿಲೋಗಿಪುರ ಗ್ರಾಮದಲ್ಲಿ ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಟಾನ ಸಂಸ್ಥೆ (ಕೆಎಚ್‌ಪಿಟಿ), ಗ್ರಾಮ ಪಂಚಾಯತ ಬೋಚನಹಳ್ಳಿ, ಅಂಗನವಾಡಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಲ್ಲಿ ಬುಧವಾರ ಮಾತನಾಡಿದರು.

    ಹೆಣ್ಣು ಮಗುವನ್ನು ಗೌರವಿಸುವ ಜತೆಗೆ ಶಿಕ್ಷಣ, ಆರೋಗ್ಯ, ಪೋಷಣೆ, ಸಮಾನತೆಯ ಮಹತ್ವವನ್ನು ತಿಳಿಸಬೇಕು. ಸಮಾಜದಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ಅನ್ಯಾಯಕ್ಕೆ ಮುಕ್ತಿ ಕೊಡಿಸಬೇಕು ಎಂದರು.

    ಮುಖ್ಯ ಶಿಕ್ಷಕ ಗುರುರಾಜ ಪಾಟೀಲ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ಎಲ್ಲ ತಾರತಮ್ಯ ತೊಡೆದು ಹಾಕಬೇಕಾಗಿದೆ. ಗೌರವ, ಮೌಲ್ಯಗಳನ್ನು ಖಾತ್ರಿಗೊಳಿಸುವುದು, ಹಕ್ಕುಗಳ ಬಗ್ಗೆ ಅರಿವು, ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಹಾಗೂ ಜನರಲ್ಲಿ ಲಿಂಗ ಸಮಾನತೆಯ ಜಾಗೃತಿ ಮೂಡಿಸಬೇಕಾಗಿದೆ ಎಂದರು.

    ಅಂಗನವಾಡಿ ಮೇಲ್ವಿಚಾರಕಿ ಬಸಮ್ಮ ಹಡಪದ, ಪ್ರಮುಖರಾದ ಪರಮೇಶ್ವರಯ್ಯ, ಹನುಮೇಶ ಆವೋಜಿ, ಅಂದಪ್ಪ ಮಂಡಲಗೇರಿ, ಕೃಷ್ಣಪ್ಪ ಚೌಟಗಿ, ಹೊಳಿಯಪ್ಪ.

    ಶಿಕ್ಷಕರಾದ ಮುತ್ತು ಬನ್ನಿಕೊಪ್ಪ, ಸಂಗಪ್ಪ ರಾಟಿ, ಬಸಪ್ಪ ಜೀರ, ವೆಂಕರಡ್ಡಿ, ಕೆಎಚ್‌ಪಿಟಿ ಸಮುದಾಯ ಸಂಘಟಕರಾದ ಗಾಯತ್ರಿ ಅಂಬಿಗೇರ, ಯಲ್ಲಪ್ಪ ಮೆಣೇಗಾರ, ಅಂಗನವಾಡಿ ಕಾರ್ಯಕರ್ತೆಯರಾದ ದೇವಮ್ಮ, ಲಲಿತಾ, ಗೀತಾ, ಶರಣಮ್ಮ, ಗವಿಸಿದ್ದಮ್ಮ, ಹನುಮವ್ವ, ರೇಣುಕಾ, ಹುಲಿಗೆಮ್ಮ, ಕೊಟ್ರಮ್ಮ, ಲಕ್ಷ್ಮವ್ವ, ಸರೋಜಾ, ರುಕ್ಮಿಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts