More

    ಶಾಲೆಯ ನಲಿ-ಕಲಿ ಕ್ಲಾಸ್​​ನಲ್ಲಿ ಹಾವು; ಗೊತ್ತಾಗದೆ ನಡೆದ ತರಗತಿ, ಬಳಿಕ ಹೊರಗೆ ಓಡಿದ ವಿದ್ಯಾರ್ಥಿಗಳು..

    ಗದಗ: ಶಾಲೆಯೊಂದರ ನಲಿ-ಕಲಿ ಕ್ಲಾಸ್​ರೂಮ್​ನಲ್ಲಿ ಹಾವೊಂದು ಕಾಣಿಸಿಕೊಂಡಿದ್ದು, ಮಕ್ಕಳು ಭಯಭೀತರಾಗಿ ಹೊರಗೆ ಓಡಿ ಹೋದ ಪ್ರಸಂಗವೂ ನಡೆಯಿತು. ಗದಗ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

    ಗದಗ ಜಿಲ್ಲೆ ನರಗುಂದ ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ನಲಿ-ಕಲಿ ತರಗತಿ ಕೋಣೆಯಲ್ಲಿ ಈ ಹಾವು ಇತ್ತು. ಕೆಳಗೆ ಮಕ್ಕಳು ಕುಳಿತಿದ್ದು, ಮೇಲೆ ಗೋಡೆಯಲ್ಲಿ ಹಾವಿದ್ದರೂ ಅದನ್ನು ಗಮನಿಸದೆ ಕೆಲಕಾಲ ತರಗತಿಯೂ ನಡೆಯಿತು.

    ಕೆಲವು ಸಮಯದ ನಂತರ ಹಾವನ್ನು ಕಂಡು ಭಯಗೊಂಡ ಶಾಲಾ ಮಕ್ಕಳು, ತರಗತಿಯಿಂದ ಹೊರಗೆ ಓಡಿಹೋಗಿದ್ದಾರೆ. ಉರಗ ರಕ್ಷಕ ಬುಡ್ಡಾ ಸುರೇಬಾನ ಎಂಬವರನ್ನು ಕರೆಸಿ, ಐದು ಅಡಿ ಉದ್ದದ ಈ ಹಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡಲಾಗಿದೆ.

    ಒಕ್ಕಲಿಗ ಅಭಿವೃದ್ಧಿ ನಿಗಮ ಕಾರ್ಯಾರಂಭ; ಗಂಗಾಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ

    ಮೇಘಸ್ಫೋಟದ ಹಿಂದೆ ವಿದೇಶಿ ಕೈವಾಡ!; ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts