More

    RCB ಸೇರಿದ ಸ್ಮೃತಿ ಎದುರು ಬಾಬರ್​​ಗೆ​ ಅವಮಾನ: ದೀಪ್ತಿ ಶರ್ಮಾ ಮುಂದೆಯೂ ಸೋತ ಪಾಕ್​ ನಾಯಕ

    ನವದೆಹಲಿ: ಫೆಬ್ರವರಿ 13ರಂದು ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​)ನ ಮೊದಲ ಹರಾಜು ಪ್ರಕ್ರಿಯೆಯಲ್ಲಿ 3.4 ಕೋಟಿ ರೂ.ಗಳ ದಾಖಲೆಯ ಮೊತ್ತಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಪಾಲಾಗುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಅವರು ದುಬಾರಿ ಕ್ರಿಕೆಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರ್​ಸಿಬಿ ತಂಡ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್ ಪೆರ್ರಿ ಅವರನ್ನು ಸಹ 1.7 ಕೋಟಿ ರೂ.ಗೆ ಖರೀದಿ ಮಾಡಿದೆ.

    ಸೆಲೆಬ್ರಿಟಿಗಳು ಮತ್ತು ತಂಡದ ಸಹ ಆಟಗಾರರಿಂದ ಹಿಡಿದು ಅನೇಕರು ಸ್ಮೃತಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಇದೀಗ ಸ್ಮೃತಿ ಅವರು ಡಬ್ಲ್ಯುಪಿಎಲ್​ಗೆ ಪಡೆದಿರುವ ಭಾರೀ ಸಂಭಾವನೆಯು ಪಾಕಿಸ್ತಾನ ನಾಯಕ ಬಾಬರ್​ ಅಜಾಮ್​ ವಿರುದ್ಧದ ಮೀಮ್ಸ್​ ಮತ್ತು ಟ್ರೋಲ್ಸ್​ಗೆ ಕಾರಣವಾಗಿದೆ. ಬಾಬರ್​ ಮತ್ತು ಸ್ಮೃತಿ ಅವರನ್ನು ಹೋಲಿಕೆ ಮಾಡಿ ಬಾಬರ್​ ಅವರನ್ನು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

    ಬಾಬರ್​ ಪಾಕಿಸ್ತಾನ ತಂಡದ ನಾಯಕ ಮಾತ್ರವಲ್ಲದೆ, ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಪಾಕಿಸ್ತಾನ ಸೂಪರ್​ ಲೀಗ್​ (ಪಿಎಸ್​ಎಲ್​)ನಲ್ಲಿ 2.30 ಕೋಟಿ ರೂ.ಗೆ ಬಿಕರಿಯಾಗುವ ಮೂಲಕ ಪಿಎಸ್​ಎಲ್​ನ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ, ಬಾಬರ್​ಗಿಂತ ನಮ್ಮ ಸ್ಮೃತಿ ಮಂದನಾಗೆ ಹೆಚ್ಚು ಸಂಭಾವನೆ ಸಿಕ್ಕಿದೆ. ಹಣದ ಮೊತ್ತದ ವಿಚಾರದಲ್ಲಿ ಸ್ಮೃತಿ ಹತ್ತಿರಕ್ಕೂ ಬಾಬರ್​ ಸುಳಿದಿಲ್ಲ. ಹೀಗಾಗಿ ಮಹಿಳಾ ಪ್ರೀಮಿಯರ್​ ಲೀಗ್​ನನ್ನು ಸಹ ಪಿಎಸ್​ಎಲ್​ ಮೀರಿಸುತ್ತಿಲ್ಲ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ನೀಡುವ ಸಂಭಾವನೆಯನ್ನೂ ಕೂಡ ಪಾಕ್​ ಕ್ರಿಕೆಟಿಗರಿ ಸಿಗುತ್ತಿಲ್ಲವಲ್ಲ ಎಂದು ಕಿಚಾಯಿಸಿದ್ದಾರೆ.

    ಸ್ಮೃತಿ ಮಂದನಾ ಮಾತ್ರವಲ್ಲ ದೀಪ್ತಿ ಶರ್ಮಾ ಅವರಿಂದಲೂ ಬಾಬರ್ ಸೋತಿದ್ದಾರೆ. ದೀಪ್ತಿ ಅವರು 2. 60 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ. ಹೀಗಾಗಿ ಪಿಎಸ್​ಎಲ್​ ಮತ್ತು ಚೊಚ್ಚಲ ಡಬ್ಲುಪಿಎಲ್​ ಎರಡನ್ನೂ ಹೋಲಿಸಿ ಸಿಕ್ಕಾಪಟ್ಟೆ ಮೀಮ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಅಂದಹಾಗೆ ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ ಮಾರ್ಚ್​ 4ರಿಂದ 26ರವರೆಗೆ ನಡೆಯಲಿದೆ. (ಏಜೆನ್ಸೀಸ್​)

    ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​: ಆರ್​ಬಿಸಿ ತಂಡ ಸೇರಿದ್ದಕ್ಕೆ ಸ್ಮೃತಿ ಮಂದನಾ ಸಂಭ್ರಮಿಸಿದ ವಿಡಿಯೋ ವೈರಲ್​

    ‘ಬಾಂಧವ್ಯ’, ‘ಬಕ್ಲರ್’ ಏಡಿ ಪ್ರಭೇದ ಪತ್ತೆ

    ದುಬೈನಲ್ಲಿ 2026ಕ್ಕೆ ಹಾರುವ ಟ್ಯಾಕ್ಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts