More

    ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​: ಆರ್​ಬಿಸಿ ತಂಡ ಸೇರಿದ್ದಕ್ಕೆ ಸ್ಮೃತಿ ಮಂದನಾ ಸಂಭ್ರಮಿಸಿದ ವಿಡಿಯೋ ವೈರಲ್​

    ನವದೆಹಲಿ: ನಿನ್ನೆ (ಫೆ.13) ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​)ನ ಚೊಚ್ಚಲ ಹರಾಜು ಪ್ರಕ್ರಿಯೆಯಲ್ಲಿ 3.4 ಕೋಟಿ ರೂ.ಗಳ ದಾಖಲೆಯ ಮೊತ್ತಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಪಾಲಾಗುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಅವರು ದುಬಾರಿ ಕ್ರಿಕೆಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಸ್ಮೃತಿ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್​ ಮತ್ತು ಅರ್​ಸಿಬಿ ನಡುವೆ ತೀವ್ರ ಪೈಪೋಟಿ ನಡೆಯಿತು. ಕೊನೆಗೂ ಸ್ಮೃತಿ ಅವರನ್ನು ಆರ್​ಸಿಬಿ ತಮ್ಮ ತೆಕ್ಕೆಗೆ ಹಾಕಿಕೊಂಡಿತು.

    ಜಿಯೋ ಸ್ಪೋರ್ಟ್ಸ್​ ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಹರಾಜು ಪ್ರಕ್ರಿಯೆಲ್ಲಿ ದಾಖಲೆಯ ಮೊತ್ತಕ್ಕೆ ಆರ್​ಸಿಬಿ ಪಾಲಾಗುತ್ತಿದ್ದಂತೆ ಸ್ಮೃತಿ ಮಂದನಾ ಅವರು ಸಂಭ್ರಮಿಸುತ್ತಿರುವುದು ಮತ್ತು ಟೀಂ ಇಂಡಿಯಾದ ಇತರೆ ಸಹ ಆಟಗಾರರು ಕೂಗಾಡುತ್ತಾ ಸಂಭ್ರಮಿಸುವ ಮೂಲಕ ಸ್ಮೃತಿ ಅವರನ್ನು ಅಭಿನಂದಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೆ, ಎಲ್ಲರೂ ಆರ್​ಸಿಬಿ… ಆರ್​ಸಿಬಿ ಅಂತಲೂ ಘೋಷಣೆ ಕೂಗಿದ್ದಾರೆ.

    ವಿಡಿಯೋ ವೈರಲ್​ ಆಗಿದ್ದು, ಸ್ಮೃತಿ ಅವರು ಆರ್​ಸಿಬಿ ತಂಡ ಸೇರಿರುವುದನ್ನು ನೋಡಿ ಆರ್​ಸಿಬಿ ಅಭಿಮಾನಿಗಳು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಅನೇಕ ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಕ್ರಶ್​ ಆಗಿರುವ ಸ್ಮೃತಿ, ಇದೀಗ ಕನ್ನಡದ ತಂಡ ಸೇರಿರುವುದು ಎಲ್ಲಿಲ್ಲದ ಸಂತೋಷ ವ್ಯಕ್ತವಾಗಿದೆ. ಎಂದಿನಂತೆ ಈ ಬಾರಿ ಕಪ್​ ನಮ್ಮದೆ ಎಂಬ ಭರವಸೆಯೊಂದಿಗೆ ಸ್ಮೃತಿ ಅವರನ್ನು ಅದ್ಧೂರಿಯಾಗಿ ಸ್ವಾಗಿತಿಸಿದ್ದಾರೆ.

    ಟೀಮ್​ ಇಂಡಿಯಾದ ಕ್ಯಾಪ್ಟನ್​ ಹರ್ಮನ್​ಪ್ರೀತ್​ ಕೌರ್​ 1.8 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್​ ಪಾಲಾಗಿದ್ದಾರೆ. ದೀಪ್ತಿ ಶರ್ಮಾ ಅವರು 2.6 ಕೋಟಿ ರೂ.ಗೆ ಯುಪಿ ವಾರಿಯರ್ಸ್​ ತಂಡ ಸೇರಿದರೆ, ಆಸ್ಟ್ರೇಲಿಯಾದ ಆಲ್‌ರೌಂಡರ್ ಆಶ್ಲೀಗ್ ಗಾರ್ಡ್ನರ್ ಅವರು 3.2 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್‌ ಪಾಲಾದರು. ಈ ಮೂಲಕ ಹೆಚ್ಚು ಸಂಭಾವನೆ ಪಡೆಯುವ ವಿದೇಶಿ ಆಟಗಾರ್ತಿಯಾಗಿದ್ದಾರೆ.

    ಅಂದಹಾಗೆ ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ ಮಾರ್ಚ್​ 4ರಿಂದ 26ರವರೆಗೆ ನಡೆಯಲಿದೆ. (ಏಜೆನ್ಸೀಸ್​)

    ಜೋಡಿಹಕ್ಕಿಗಳಿಗೆ ಮೇರೆಯುಂಟೇ?! ಮನದಾಳದ ನಿವೇದನೆಗೆ ಸುಮುಹೂರ್ತ | ರಾಜಧಾನಿಯಲ್ಲಿ ಭರ್ಜರಿ ವ್ಯಾಪಾರ

    ಬಂಜಾರ ಜನಾಂಗದ ದಾರ್ಶನಿಕ ಸಂತ ಸೇವಾಲಾಲ್

    ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ: ಸ್ಪರ್ಮ್ ಬ್ಯಾಂಕ್​ಗಳಿಂದ ಹೀಗೊಂದು ಮನವಿ; ಎಲ್ಲಿ, ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts