More

    ‘ಬಾಂಧವ್ಯ’, ‘ಬಕ್ಲರ್’ ಏಡಿ ಪ್ರಭೇದ ಪತ್ತೆ

    ಕಾರವಾರ: ಜಿಲ್ಲೆಯ ವನ್ಯಜೀವಿ ತಜ್ಞರು ಒಂದು ಸಮುದ್ರ ಏಡಿ ಹಾಗೂ ಇನ್ನೊಂದು ಸಿಹಿ ನೀರಿನ ಏಡಿ ಪ್ರಭೇದವನ್ನು ಗುರುತಿಸಿ ಇತ್ತೀಚೆಗೆ ದಾಖಲಿಸಿದ್ದಾರೆ. ಅರಣ್ಯ ಗಾರ್ಡ್ ಪರಶುರಾಮ ಪ್ರಭು ಭಜಂತ್ರಿ, ವನ್ಯಜೀವಿ ತಜ್ಞ ಗೋಪಾಲಕೃಷ್ಣ ದತ್ತಾತ್ರೆಯ ಹೆಗಡೆ, ಸಮೀರಕುಮಾರ ಪತಿ ಅವರು ಜಂಟಿಯಾಗಿ ‘ವೇಲಾ ಬಾಂಧವ್ಯ’ ಎಂಬ ಏಡಿಯನ್ನು ಗುರುತಿಸಿದ್ದಾರೆ.

    ಇದುವರೆಗೆ ಭಾರತದ ಪಶ್ಚಿಮ ಘಟ್ಟದಲ್ಲಿ 75 ಜಾತಿಯ ಸಿಹಿ ನೀರಿನ ಏಡಿಗಳು ಪತ್ತೆಯಾಗಿದ್ದು, ಇದು 76ನೇ ಜಾತಿಯದು. ವೇಲಾ ಪ್ರಭೇದದಲ್ಲಿ ಈವರೆಗೆ 3 ರೀತಿಯ ಏಡಿಗಳನ್ನು ಗುರುತಿಸಲಾಗಿದ್ದು, ಇದು ನಾಲ್ಕನೇಯದು. ಈ ಬಗ್ಗೆ ಮಂಗೋಲಿಯಾದಿಂದ ಪ್ರಕಟವಾಗುವ ಜೀವ ಪ್ರಭೇದಗಳ ಕುರಿತಾದ ಜರ್ನಲ್ ‘ಝುೂಟಾಕ್ಸಾ’ದಲ್ಲಿ ಪ್ರಕಟಿಸಲಾಗಿದೆ. ಇತ್ತೀಚೆಗೆ ಇದೇ ತಜ್ಞರ ತಂಡ ಘಾಟಿಯಾನಾ ಪ್ರಭೇದದ 14ನೇ ಜಾತಿಯ ಏಡಿಯನ್ನು ಪತ್ತೆ ಮಾಡಿತ್ತು.

    ಸಮುದ್ರ ಏಡಿ: ಕಾರವಾರದ ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಾಗರ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿ ಕಿರಣ ವಾಸುದೇವ ಮೂರ್ತಿ ಅಪರೂಪದ ‘ಬಕ್ಲರ್’ ಎಂಬ ಸಮುದ್ರ ಏಡಿಯನ್ನು ಗುರುತಿಸಿದ್ದಾರೆ. ಮಾಜಾಳಿ ಕಡಲ ತೀರದಲ್ಲಿ ಅವುಗಳನ್ನು ಗುರುತಿಸಿದ್ದು, ಕಂದು ಮಿಶ್ರಿತ ಗುಲಾಬಿ ಬಣ್ಣದ ಈ ಏಡಿಯ ದೇಹ ರಚನೆಯೂ ಭಿನ್ನವಾಗಿದೆ. ಉದ್ದ ಕಾಲುಗಳಿದ್ದು, ದೇಹದ ಮೇಲೆ ಮುಳ್ಳಿನ ರೂಪವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts