More

    2023ರಲ್ಲಿ ಭಾರತದಲ್ಲಿ ಸ್ಮಾರ್ಟ್​ಫೋನ್​ ಮಾರಾಟ: ಯಾವ ಕಂಪನಿಗೆ ನಂಬರ್​ 1 ಸ್ಥಾನ?

    ನವದೆಹಲಿ: ಐಫೋನ್ ತಯಾರಕ ಆಪಲ್ 2023 ರಲ್ಲಿ ಮೊದಲ ಬಾರಿಗೆ ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಮೊಬೈಲ್​ ಫೋನ್​ ಉತ್ಪಾದಕ ಕಂಪನಿಯಾಗಿದೆ. ಆದರೆ, ಮಾರಾಟದ ಪ್ರಮಾಣದಲ್ಲಿ ಸ್ಯಾಮ್‌ಸಂಗ್ ಅಗ್ರಸ್ಥಾನದಲ್ಲಿದೆ. ಅಂದರೆ, 2023ರಲ್ಲಿ ದೇಶದಲ್ಲಿ ಸ್ಯಾಮ್​ಸಂಗ್​ ಕಂಪನಿಯ ಅತಿಹೆಚ್ಚು ಫೋನ್​ಗಳನ್ನು ಮಾರಾಟವಾಗಿವೆ.

    ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್ ಪಾಯಿಂಟ್ ರಿಸರ್ಚ್ ಬುಧವಾರ ಈ ವಿವರಗಳನ್ನು ಬಹಿರಂಗಪಡಿಸಿದೆ.

    ಕೌಂಟರ್‌ಪಾಯಿಂಟ್‌ನ ಮಾಸಿಕ ಇಂಡಿಯಾ ಸ್ಮಾರ್ಟ್‌ಫೋನ್ ಟ್ರ್ಯಾಕರ್ ವರದಿಯ ಪ್ರಕಾರ, ಭಾರತದ ಸ್ಮಾರ್ಟ್‌ಫೋನ್ ಸಾಗಣೆಗಳು 2023 ರಲ್ಲಿ 15.2 ಕೋಟಿ ಯುನಿಟ್‌ಗಳಲ್ಲಿ ಸಮತಟ್ಟಾಗಿವೆ. ಅಂದರೆ, 15.2 ಕೋಟಿ ಫೋನ್​ಗಳನ್ನು ಮಾರಾಟ ಮಾಡಿದ್ದು, ಇದು ಹಿಂದಿನ ವರ್ಷಕ್ಕೆ ಸಮನಾಗಿದೆ. ಸ್ಯಾಮ್‌ಸಂಗ್ ಮತ್ತು ಚೀನಾದ ಮೊಬೈಲ್ ಫೋನ್ ತಯಾರಕ ಕಂಪನಿಗಳಾದ ವಿವೋ ಮತ್ತು ಒಪ್ಪೋ ತಮ್ಮ ಮಾರಾಟ ಪಾಲನ್ನು ಹೆಚ್ಚಿಸಿಕೊಂಡಿವೆ.

    “ಭಾರತದ ಮೇಲೆ ಆಪಲ್‌ನ ಗಮನವು ಮಾರುಕಟ್ಟೆ ಬೆಳವಣಿಗೆಗೆ ಸಹಾಯ ಮಾಡುತ್ತಿದೆ, ಈ ಬ್ರ್ಯಾಂಡ್ ಮಾರಾಟ 1 ಕೋಟಿ ಯೂನಿಟ್ ಮಟ್ಟವನ್ನು ಮೀರಿದೆ. ಅಲ್ಲದೆ, 2023ನೇ ವರ್ಷದಲ್ಲಿ ಮೊದಲ ಬಾರಿಗೆ ಆದಾಯದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ,

    “ಆ್ಯಪಲ್​ ಸ್ವಂತ ಚಿಲ್ಲರೆ ಅಂಗಡಿಗಳನ್ನು ತೆರೆಯುವುದು ಮತ್ತು ನಿಯಮಿತ ಪ್ರಚಾರಗಳ ಮೂಲಕ ದೊಡ್ಡ-ಸ್ವರೂಪದ ಚಿಲ್ಲರೆ ವ್ಯಾಪಾರದ ಮೇಲೆ ಹೆಚ್ಚುತ್ತಿರುವ ಗಮನವು ಆಫ್‌ಲೈನ್ ಸಾಗಣೆಯನ್ನು ಹೆಚ್ಚಿಸಲು ಕೊಡುಗೆ ನೀಡಿದೆ” ಎಂದು ಕೌಂಟರ್‌ಪಾಯಿಂಟ್ ರಿಸರ್ಚ್‌ನ ಸಂಶೋಧನಾ ವಿಶ್ಲೇಷಕ ಶುಭಂ ಸಿಂಗ್ ಹೇಳಿದ್ದಾರೆ.

    ವಿವೋ ಕಂಪನಿಯು ಶೇಕಡಾ 17 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ದೇಶದಲ್ಲಿ ಅತಿಹೆಚ್ಚು ಫೋನ್​ ಮಾರಾಟದಲ್ಲಿ ಸ್ಯಾಮ್​ಸಂಗ್​ ನಂತರದ ಸ್ಥಾನದಲ್ಲಿದೆ.

    “2023 ವರ್ಷದ ಮೊದಲಾರ್ಧವು ನಡೆಯುತ್ತಿರುವ ಬೃಹತ್ ಆರ್ಥಿಕ ಪ್ರಕ್ಷುಬ್ಧತೆಯಿಂದಾಗಿ ಕಡಿಮೆ ಬೇಡಿಕೆ ಮತ್ತು ದಾಸ್ತಾನಿಗೆ ಕಾರಣವಾಯಿತು. ಮಾರುಕಟ್ಟೆಯು ವರ್ಷದ ದ್ವಿತೀಯಾರ್ಧದಲ್ಲಿ 5G ಅಪ್‌ಗ್ರೇಡ್‌ಗಳು ಮತ್ತು ನಿರೀಕ್ಷಿತಕ್ಕಿಂತ ಉತ್ತಮವಾದ ಹಬ್ಬದ ಮಾರಾಟದಿಂದ ಚೇತರಿಸಿಕೊಳ್ಳಲು ಪ್ರಾರಂಭಿಸಿತು.” ವರದಿ ಹೇಳಿದೆ.

    ಚೀನಾ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳ ಪೈಕಿ ಕ್ಸಿಯೊಮಿ ಮಾರುಕಟ್ಟೆ ಪಾಲಿನಲ್ಲಿ ಅಗ್ರ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಂಪನಿಯ ಮಾರುಕಟ್ಟೆ ಪಾಲು ಒಂದು ವರ್ಷದ ಹಿಂದೆ ಶೇಕಡಾ 20.3 ಇತ್ತು. 2023 ರಲ್ಲಿ ಇದು ಶೇಕಡಾ 16.5ಕ್ಕೆ ಕುಸಿದಿದೆ.

    ಡಿಸೆಂಬರ್ 2023 ತ್ರೈಮಾಸಿಕದಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯು, ಪ್ರೀಮಿಯಂ ವಿಭಾಗದಲ್ಲಿನ ಖಾತೆ ಬೆಳವಣಿಗೆ ಮತ್ತು 5G ಅಪ್‌ಗ್ರೇಡ್‌ಗಳ ಆಧಾರದ ಮೇಲೆ ವರ್ಷದಿಂದ ವರ್ಷಕ್ಕೆ 25 ಪ್ರತಿಶತದಷ್ಟು ಬೆಳೆದಿದೆ.

    “ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಒಂದು ವರ್ಷದವರೆಗೆ ಕುಸಿದ ನಂತರ 2023ರ ನಾಲ್ಕನೇ ತ್ರೈಮಾಸಿಕದಲ್ಲಿ ಬೆಳೆಯಿತು. ಹಬ್ಬದ ಋತುವು ಈ ಬೆಳವಣಿಗೆಗೆ ಮತ್ತಷ್ಟು ನೆರವಾಯಿತು, ಏಕೆಂದರೆ ಕಡಿದಾದ ರಿಯಾಯಿತಿಗಳು, ಸುಲಭ ಹಣಕಾಸು ಯೋಜನೆಗಳು ಮತ್ತು ಲಾಭದಾಯಕ ಪ್ರಚಾರಗಳು ಬೇಡಿಕೆಯನ್ನು ಹೆಚ್ಚಿಸಿದವು” ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ಹಿರಿಯ ಸಂಶೋಧನಾ ವಿಶ್ಲೇಷಕ ಶಿಲ್ಪಿ ಜೈನ್ ಹೇಳಿದ್ದಾರೆ.

    2023 ರಲ್ಲಿ 5G ಸ್ಮಾರ್ಟ್‌ಫೋನ್ ಮಾರಾಟ ಪಾಲು 52 ಪ್ರತಿಶತವನ್ನು ದಾಟಿದ್ದು, ವರ್ಷದಿಂದ ವರ್ಷದ ಆಧಾರದ ಮೇಲೆ ಶೇಕಡಾ 66ರಷ್ಟು ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

    2023ರ ಡಿಸೆಂಬರ್ ತ್ರೈಮಾಸಿಕದಲ್ಲಿ, Xiaomi ಶೇಕಡಾ 18.3 ಪಾಲನ್ನು ಹೊಂದಿದ್ದು ಸದ್ಯ ಮೊದಲ ಸ್ಥಾನದಲ್ಲಿದೆ. Vivo ಶೇಕಡಾ 17.3 ಪಾಲನ್ನು ಹೊಂದಿ ಎರಡನೇ ಸ್ಥಾನದಲ್ಲಿದೆ ಎಂದು ಅಂದಾಜಿಸಲಾಗಿದೆ. ಸ್ಯಾಮ್‌ಸಂಗ್ ಶೇಕಡಾ 16.8 ಪಾಲನ್ನು, Realme ಶೇಕಡಾ 11.5 ಮತ್ತು Oppo ಶೇಕಡಾ 9.5 ಪಾಲನ್ನು ಹೊಂದಿದೆ.

    ಸ್ಮಾರ್ಟ್‌ಫೋನ್ ತಯಾರಕರು ಪ್ರೀಮಿಯಂ ಸಾಧನಗಳ ಮೇಲೆ ಹೆಚ್ಚಿನ ಗಮನವನ್ನು ನೀಡಿದ್ದಾರೆ, ಇದು ಅವರ ವ್ಯವಹಾರದಲ್ಲಿ ಬೆಳವಣಿಗೆಯನ್ನು ಹೆಚ್ಚಿಸುತ್ತಿದೆ. ಪ್ರೀಮಿಯಂ ವಿಭಾಗ, ರೂ 30,000 ಕ್ಕಿಂತ ಹೆಚ್ಚಿನ ಬೆಲೆಯ ಸಾಧನಗಳು, ಸುಲಭ ಹಣಕಾಸು ಯೋಜನೆಗಳಿಂದ 2023 ರಲ್ಲಿ ಶೇಕಡಾ 64 ರಷ್ಟು ವರ್ಷದಿಂದ ವರ್ಷಕ್ಕೆ ಬೆಳವಣಿಗೆಗೆ ಸಾಕ್ಷಿಯಾಗಿದೆ. “ಪ್ರತಿ ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ ಒಂದನ್ನು 2023 ರಲ್ಲಿ ಹಣಕಾಸಿನ ನೆರವಿನ ಮೂಲಕ ಖರೀದಿಸಲಾಗಿದೆ” ಎಂದು ವರದಿ ಹೇಳಿದೆ.

    ಹೆಚ್ಚಿನ ಕಂಪನಿಗಳು ಫೋಲ್ಡಬಲ್ ಸಾಧನಗಳೊಂದಿಗೆ ಬರುವುದರಿಂದ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಪ್ರೀಮಿಯಂ ವಿಭಾಗದಲ್ಲಿ ಹೆಚ್ಚು ಜನಪ್ರಿಯವಾಗುತ್ತವೆ ಎಂದು ಕೌಂಟರ್‌ಪಾಯಿಂಟ್ ನಿರೀಕ್ಷಿಸುತ್ತದೆ.
    “2024 ರಲ್ಲಿ ಮಡಿಸಬಹುದಾದ ಮೊಬೈಲ್​ಫೋನ್​ಗಳು 10 ಲಕ್ಷ ಮೈಲಿಗಲ್ಲನ್ನು ದಾಟುತ್ತದೆ ಎಂದು ನಾವು ನಂಬುತ್ತೇವೆ” ಎಂದು ವರದಿ ಹೇಳಿದೆ.

    ಏಕೈಕ ಸ್ವದೇಶಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಲಾವಾ ಕಂಪನಿಯು ಶೇಕಡಾ 36 ರಷ್ಟು ಬೆಳೆದಿದೆ. ಗೂಗಲ್ ಮತ್ತು ಮೊಟೊರೊಲಾ ಕ್ರಮವಾಗಿ ಶೇ.111 ಮತ್ತು ಶೇ.13ರಷ್ಟು ಪ್ರಗತಿ ಸಾಧಿಸಿವೆ.

    ಒಂದೇ ದಿನದಲ್ಲಿ ಷೇರು ಹೂಡಿಕೆದಾರರ ಸಂಪತ್ತು ರೂ 4.58 ಲಕ್ಷ ಕೋಟಿ ಹೆಚ್ಚಳ; ರೂ. 379 ಲಕ್ಷ ಕೋಟಿ ತಲುಪಿದ ಬಿಎಸ್​ಇ ಬಂಡವಾಳ

    ಒಂದೇ ದಿನದಲ್ಲಿ ಶೇ. 20 ಹೆಚ್ಚಳ ಕಂಡ ಷೇರು: ಇನ್ನಷ್ಟು ಏರಿಕೆಗೆ ತಡೆ ಹಾಕಿದ್ದೇಕೆ? ಅಪ್ಪರ್​ ಸರ್ಕ್ಯೂಟ್ ಎಂದರೇನು?

    ಬಜೆಟ್​ ಮುನ್ನಾದಿನ ಷೇರು ಮಾರುಕಟ್ಟೆಯಲ್ಲಿ ಗೂಳಿಯ ಗುಟುರು; 612 ಅಂಕ ಸೂಚ್ಯಂಕ ಏರಿಕೆ; ಹೂಡಿಕೆದಾರರು ಕಣ್ಣಿಟ್ಟಿರುವ ಎರಡು ಸಂಗತಿಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts