More

    ಧರೆಗುರುಳಿದ ಸ್ಮಾರ್ಟ್ ವಿದ್ಯುತ್ ಕಂಬ

    ಹುಬ್ಬಳ್ಳಿ : ಸ್ಮಾರ್ಟ್​ಸಿಟಿ ಯೋಜನೆಯಡಿ ಹುಬ್ಬಳ್ಳಿಯಲ್ಲಿ ನಿರ್ವಿುಸುತ್ತಿರುವ ಹಲವಾರು ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿದ್ದಾವೆ ಎಂಬ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಆರೋಪಗಳ ಮಧ್ಯೆಯೇ, ಈ ಯೋಜನೆಯಡಿ ನಿರ್ವಿುಸಿರುವ ವಿದ್ಯುತ್ ಕಂಬಗಳು ಬಿದ್ದಿರುವುದು ಈ ಆರೋಪಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.

    ಗೋಕುಲ ರಸ್ತೆ ಡಾಲರ್ಸ್ ಕಾಲನಿಯಲ್ಲಿ ಸ್ಮಾರ್ಟ್​ಸಿಟಿ ಯೋಜನೆಯಡಿ ವಿದ್ಯುತ್ ಕಂಬಗಳನ್ನು ನಿಲ್ಲಿಸಲಾಗಿತ್ತು. ಕಳೆದ ನಾಲ್ಕೈದು ದಿನಗಳ ಹಿಂದೆ ಇಲ್ಲಿನ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಸ್ಮಾರ್ಟ್​ಸಿಟಿ ಯೋಜನೆಯಡಿ ನಿರ್ವಿುಸಿರುವ ಹಲವಾರು ಸೌಲಭ್ಯಗಳನ್ನು ಪಾಲಿಕೆಗೆ ಹಸ್ತಾಂತರಿಸಿಕೊಳ್ಳಲು ಈ ಹಿಂದಿನ ಮೇಯರ್ ಈರೇಶ ಅಂಚಟಗೇರಿ ನಿರಾಕರಿಸಿದ್ದರು. ಸೌಲಭ್ಯಗಳು ಕಳಪೆ ಮಟ್ಟದ್ದಾಗಿವೆ ಎಂದು ಅವರು ಬಹಿರಂಗ ಆರೋಪವನ್ನೂ ಮಾಡಿದ್ದರು.

    ಇದೆಲ್ಲದರ ಮಧ್ಯೆ ಈ ಯೋಜನೆಯಡಿ ನಿರ್ವಿುಸಿರುವ ಹಲವಾರು ಸೌಲಭ್ಯಗಳು ಮೇಲಿಂದ ಮೇಲೆ ಹದಗೆಡುತ್ತಿರುವುದು ಕಾಮಗಾರಿಗಳ ಗುಣಮಟ್ಟದ ಮೇಲೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸುವಂತಾಗಿದೆ.

    ಇದೇ ಯೋಜನೆಯಡಿ ಹುಬ್ಬಳ್ಳಿಯ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಪೆವರ್ಸ್​ಗಳನ್ನು ಹಾಕಿದ್ದು, ಅವು ಸಹ ಕಿತ್ತು ಹೋಗುತ್ತಿವೆ.

    ಸ್ಮಾರ್ಟ್ ವಿದ್ಯುತ್ ಕಂಬಗಳು ಧರೆಗುರುಳಿರುವುದರಿಂದ ರಾತ್ರಿ ಸಮಯದಲ್ಲಿ ಡಾಲರ್ಸ್ ಕಾಲನಿಯ ಪ್ರಮುಖ ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ. ಎಲ್ಲೆಡೆ ಗುಣಮಟ್ಟದ ವಿದ್ಯುತ್ ಕಂಬಗಳನ್ನು ಅಳವಡಿಸುವ ಜತೆಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಕಂಪನಿ ಅಧಿಕಾರಿಗಳಿಗೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts