More

    ಮೂರೇ ತಿಂಗಳಲ್ಲಿ ಮಲ್ಟಿಬ್ಯಾಗರ್ ಸ್ಟಾಕ್​ಗಳಾದ ಸ್ಮಾಲ್​ ಕ್ಯಾಪ್​ಗಳು: ಇವುಗಳಲ್ಲಿ ನೀವು ಹೂಡಿಕೆ ಮಾಡಿದರೆ ಲಾಭ ಸಿಗುವುದೇ?

    ಮುಂಬೈ: ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ (ಅಂದರೆ, 2023ರ ಅಕ್ಟೋಬರ್​ನಿಂದ ಡಿಸೆಂಬರ್​ವೆರೆಗೆ ಷೇರು ಮಾರುಕಟ್ಟೆ ಸಾಕಷ್ಟು ಏರಿಕೆ ಪ್ರವೃತ್ತಿ ತೋರಿದ್ದರಿಂ ಕನಿಷ್ಠ 20 ಸ್ಮಾಲ್‌ಕ್ಯಾಪ್ ಷೇರುಗಳು ಕೇವಲ ಮೂರು ತಿಂಗಳಲ್ಲಿ ಮಲ್ಟಿಬ್ಯಾಗರ್‌ ಷೇರುಗಳಾಗಿವೆ ಹೊರಹೊಮ್ಮಿವೆ.

    ಒಂದು ಷೇರಿನ ಬೆಲೆಯು ಹಲವು ಪಟ್ಟು ಆದರೆ, ಅವುಗಳನ್ನು ಮಲ್ಟಿಬ್ಯಾಗರ್​ ಸ್ಟಾಕ್​ ಎಂದು ಗುರುತಿಸುತ್ತಾರೆ. ಉದಾಹರಣೆಗೆ 100 ರೂಪಾಯಿ ಬೆಲೆ ಇರುವ ಷೇರು 200 ಅಥವಾ 300 ಇಲ್ಲವೇ 500 ರೂಪಾಯಿಗೆ ಏರಿ ಹಲವು ಪಟ್ಟು ಹೆಚ್ಚಳವಾಗುವುದು.

    ಕೆಲವು ಮ್ಯೂಚುವಲ್ ಫಂಡ್‌ಗಳು ಮತ್ತು ವಿದೇಶಿ ಹೂಡಿಕೆದಾರರು ಮಾರಾಟ ಮಾಡಿದರೂ ಸಹ ಕೆಲವು ಸ್ಮಾಲ್​ ಕ್ಯಾಪ್​ ಷೇರುಗಳು ತಮ್ಮ ಬೆಲೆಯನ್ನು ಹೆಚ್ಚಿಸಿಕೊಂಡಿರುವುದು ವಿಶೇಷವಾಗಿದೆ.

    ಈ ಪೈಕಿ ನಾಲ್ಕು ಸ್ಮಾಲ್‌ಕ್ಯಾಪ್ ಸ್ಟಾಕ್‌ಗಳು ಮೌಲ್ಯವು ಹಲವು ಪಟ್ಟು ಆಗುವ ಮೂಲಕ ಮೂರೇ ತಿಂಗಳಲ್ಲಿ ಮಲ್ಟಿಬ್ಯಾಗರ್​ ಸ್ಟಾಕ್​ಗಳಾಗಿವೆ ಹೊರಹೊಮ್ಮಿವೆ.

    ಆಲ್​ ಕಾರ್ಗೋ ಟರ್ಮಿನಲ್ಸ್ (Allcargo Terminals):

    ಇದು ಸರಕು ಸಾಗಣೆ ಕಂಪನಿಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಮ್ಯೂಚುವಲ್ ಫಂಡ್‌ಗಳು ಮತ್ತು ವಿದೇಶಿ ಹೂಡಿಕೆದಾರರು ತಮ್ಮ ಪಾಲನ್ನು ಕಡಿಮೆ ಮಾಡಿದರೂ ಈ ಕಂಪನಿಯ ಷೇರುಗಳು 102% ಆದಾಯವನ್ನು ನೀಡಿವೆ. ಈ ಷೇರು ಬೆಲೆ 67.70 ರೂಪಾಯಿಗೆ ತಲುಪಿದೆ.

    ಪಿಸಿ ಜ್ಯುವೆಲರ್ (PC Jeweller):

    ಈ ಆಭರಣ ತಯಾರಕ ಕಂಪನಿಯ ಷೇರುಗಳು ಕಳೆದ ತ್ರೈಮಾಸಿಕದಲ್ಲಿ ಹೂಡಿಕೆದಾರರಿಗೆ 123% ಆದಾಯವನ್ನು ನೀಡಿವೆ. ಈ ಕಂಪನಿಯ ಷೇರು ಮೌಲ್ಯ ಈಗ 57.30 ರೂಪಾಯಿಗೆ ತಲುಪಿದೆ.

    ಎಂಎಸ್​ಟಿಸಿ (MSTC):

    ಎಂಎಸ್​ಟಿಸಿ (Metal Scrap Trade Corporation Limited) ಸರ್ಕಾರಿ ಕಂಪನಿಯಾಗಿದೆ. ಈ ಮಿನಿ-ರತ್ನ ಕಂಪನಿಯ ಷೇರುಗಳು ಕಳೆದ ಮೂರು ತಿಂಗಳಲ್ಲಿ ಹೂಡಿಕೆದಾರರಿಗೆ 113% ನಷ್ಟು ಉತ್ತಮ ಆದಾಯವನ್ನು ನೀಡಿವೆ. ಈ ಷೇರು 992.10 ರೂಪಾಯಿ ತಲುಪಿದೆ.

    ಹೂಡಿಕೆದಾರರು ಏನು ಮಾಡಬೇಕು?:

    ಲಾರ್ಜ್‌ ಕ್ಯಾಪ್‌ಗಳಿಗೆ ಹೋಲಿಸಿದರೆ ಸ್ಮಾಲ್‌ ಕ್ಯಾಪ್ ಸ್ಟಾಕ್‌ಗಳಲ್ಲಿನ ಹೆಚ್ಚಿನ ಬೆಲೆ ಏರಿಕೆ ಹೆಚ್ಚಾಗಿದೆ. ಆದರೂ, ಹಲವಾರು ಸ್ಟಾಕ್‌ಗಳ ಮೌಲ್ಯಮಾಪನಗಳು ಆರಾಮ ವಲಯದಿಂದ ಹೊರಬಿದ್ದಿವೆ, ಹೀಗಾಗಿ, ಕೆಲವು ಎಚ್ಚರಿಕೆಯ ಅಗತ್ಯವಿದೆ.

    ಮುಂದಿನ ಕೆಲವು ತಿಂಗಳುಗಳು ಬಜೆಟ್ ಮತ್ತು ಸಾರ್ವತ್ರಿಕ ಚುನಾವಣೆಗಳ ಮಧ್ಯೆ ಮಾರುಕಟ್ಟೆಯಲ್ಲಿ ಸಾಕಷ್ಟು ಚಂಚಲತೆ ಉಂಟಾಗುವ ನಿರೀಕ್ಷೆಯಿದೆ. ಇಂತಹ ಸನ್ನಿವೇಶದಲ್ಲಿ ಹೂಡಿಕೆ ಪರಿಣತರು, ವಿಶ್ಲೇಷಕರು ಬಂಡವಾಳಗಳನ್ನು ಮರುಹೊಂದಿಸಲು ಮತ್ತು ಲಾರ್ಜ್‌ ಕ್ಯಾಪ್‌ಗಳಲ್ಲಿ ಬೆಟ್ಟಿಂಗ್​ ಬದಲಾಯಿಸಲು ಶಿಫಾರಸು ಮಾಡುತ್ತಾರೆ.

    “ಮಿಡ್ ಮತ್ತು ಸ್ಮಾಲ್ ಕ್ಯಾಪ್‌ಗಳ ಮೇಲಿನ ಮೌಲ್ಯಮಾಪನವು ಸ್ವಲ್ಪಮಟ್ಟಿಗೆ ಹೆಚ್ಚಾಗಿರುವುದರಿಂದ ಮತ್ತು ದೊಡ್ಡ ಕ್ಯಾಪ್​ಗಳತ್ತ ಸಾಗುವುದು ಗ್ರಾಹಕರಿಗೆ ನಮ್ಮ ಆಂತರಿಕ ಶಿಫಾರಸು” ಎಂದು ನಿರ್ದೇಶಕ, ನಿಧಿ ವ್ಯವಸ್ಥಾಪಕ ಹೇಮಾಂಗ್ ಕಪಾಸಿ ಹೇಳುತ್ತಾರೆ.

    3 ದಿನಗಳ ಕರಡಿ ಕುಣಿತಕ್ಕೆ ಬ್ರೇಕ್​, ಮತ್ತೆ ಗುಳಿಯ ಗುಟುರು: ಷೇರು ಮಾರುಕಟ್ಟೆ ಚೇತರಿಕೆ ಏಕೆ?

    ಈ ರೈಲ್ವೆ ಸ್ಟಾಕ್​ ನಿಮ್ಮ ಬಳಿ ಇದ್ದರೆ ನೀವು ಕುಬೇರರು: ಗರಿಷ್ಠ ಬೆಲೆ ಮುಟ್ಟಿದ ಷೇರಿಗೆ ಏಕೆ ಇಷ್ಟೊಂದು ಡಿಮ್ಯಾಂಡು?

    580% ಮಧ್ಯಂತರ ಲಾಭಾಂಶ ನೀಡಲು ಸಜ್ಜಾಗಿದೆ ಈ ಕಂಪನಿ: ಈ ಸಂಸ್ಥೆಯ ಷೇರಿಗೆ ಈಗ ಕುದುರಿದೆ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts