More

    3 ದಿನಗಳ ಕರಡಿ ಕುಣಿತಕ್ಕೆ ಬ್ರೇಕ್​, ಮತ್ತೆ ಗುಳಿಯ ಗುಟುರು: ಷೇರು ಮಾರುಕಟ್ಟೆ ಚೇತರಿಕೆ ಏಕೆ?

    ಮುಂಬೈ: ಈ ವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕರಡಿಯ ಕುಣಿತ ಜೋರಾಗಿತ್ತು. ಷೇರು ಮಾರುಕಟ್ಟೆ ಕುಸಿತ ಕಂಡಿತ್ತು. ಆದರೆ, ಶುಕ್ರವಾರ ಇದಕ್ಕೆ ಬ್ರೇಕ್​ ಬಿದ್ದಿದೆ. ಗುಳಿ ಮತ್ತೆ ಗುಟುರು ಹಾಕುವುದರೊಂದಿಗೆ ಮಾರುಕಟ್ಟೆ ಮತ್ತೆ ಚೇತರಿಕೆ ಕಂಡಿದೆ.

    ಶುಕ್ರವಾರ ಬಿಎಸ್​ಇ ಬೆಂಚ್‌ಮಾರ್ಕ್ ಸೂಚ್ಯಂಕ 496 ಅಂಕಗಳ ಏರಿಕೆಯಾದರೆ, ನಿಫ್ಟಿ ಸೂಚ್ಯಂಕವು 21,600 ಮಟ್ಟಕ್ಕಿಂತ ಮೇಲೇರಿತು.

    ಷೇರುಗಳಲ್ಲಿನ ಮೌಲ್ಯ ಖರೀದಿ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ದೃಢವಾದ ಪ್ರವೃತ್ತಿಯು ಸೂಚ್ಯಂಕಗಳು ಏರಲು ಕಾರಣವಾಯಿತು.

    30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 496.37 ಅಂಕಗಳು ಅಥವಾ ಶೇಕಡಾ 0.70 ಏರಿಕೆ ಕಂಡು 71,683.23 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು 708.78 ಅಂಕಗಳ ಹೆಚ್ಚಳದೊಂದಿಗೆ 71,895.64 ಕ್ಕೆ ತಲುಪಿತ್ತು.

    ನಿಫ್ಟಿ ಸೂಚ್ಯಂಕವು 160.15 ಅಂಕಗಳಷ್ಟು ಏರಿಕೆಯಾಗಿ 21,622.40 ಕ್ಕೆ ತಲುಪಿತು, 43 ಷೇರುಗಳು ಏರಿದರೆ, ಏಳು ಷೇರುಗಳು ನಷ್ಟ ಅನುಭವಿಸಿದವು.

    ಕಳೆದ ಮೂರು ದಿನಗಳಲ್ಲಿ, ಬಿಎಸ್‌ಇ ಮಾನದಂಡವು ಶೇಕಡಾ 2.91 ರಷ್ಟು ಕುಸಿದಿದ್ದರೆ ನಿಫ್ಟಿ ಶೇಕಡಾ 2.87 ರಷ್ಟು ಹಿನ್ನಡೆ ಅನುಭವಿಸಿತ್ತು.

    ಶುಕ್ರವಾರ ಭಾರ್ತಿ ಏರ್‌ಟೆಲ್ ಷೇರು ಶೇ.3.52ರಷ್ಟು ಏರಿಕೆ ಕಂಡಿದೆ. ಎನ್​ಟಿಪಿಸಿ ಷೇರು ಶೇ.3.04 ಮತ್ತು ಟೆಕ್ ಮಹೀಂದ್ರ ಷೇರು ಶೇ.2.56ರಷ್ಟು ಹೆಚ್ಚಳ ದಾಖಲಿಸಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟಾಟಾ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಟೈಟಾನ್, ಆಕ್ಸಿಸ್ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್ ಐಸಿಐಸಿಐ ಬ್ಯಾಂಕ್ ಮತ್ತು ಲಾರ್ಸೆನ್ ಆ್ಯಂಡ್ ಟೂಬ್ರೊ ಷೇರುಗಳು ಲಾಭ ಗಳಿಸಿದವು. ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ನಷ್ಟ ಅನುಭವಿಸಿದವು.

    ಎಚ್​ಡಿಎಫ್​ ಬ್ಯಾಂಕ್ ತನ್ನ ನಷ್ಟವನ್ನು ಸತತ ನಾಲ್ಕನೇ ದಿನದಲ್ಲೂ ಮುಂದುವರಿಸಿತು. ಶುಕ್ರವಾರ ಇದು ಶೇಕಡಾ 1.08 ಕುಸಿದಿದೆ. ಇದರ ಮೂರನೇ ತ್ರೈಮಾಸಿಕ ಹಣಕಾಸು ಫಲಿತಾಂಶಗಳ ಬಿಡುಗಡೆಯ ನಂತರ ನಾಲ್ಕು ದಿನಗಳಲ್ಲಿ ಈ ಷೇರು ಅಂದಾಜು ಶೇಕಡಾ 10 ರಷ್ಟು ಕುಸಿದಿದೆ.

    ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 1.69 ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 1.06 ರಷ್ಟು ಏರಿಕೆಯನ್ನು ಶುಕ್ರವಾರ ಕಂಡಿವೆ. ತೈಲ ಮತ್ತು ಅನಿಲ ಶೇ.2.17, ಲೋಹ ಶೇ.1.69, ಕೈಗಾರಿಕೆಗಳು ಶೇ.1.62, ಇಂಧನ ಶೇ.1.58, ಸರಕುಗಳು ಶೇ.1.44, ಟೆಕ್ (1.29) ಮತ್ತು ಐಟಿ (ಶೇ 1.06) ವಲಯದ ಷೇರುಗಳು ಏರಿಕೆ ಕಂಡಿವೆ.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್ ಮತ್ತು ಟೋಕಿಯೊ ಲಾಭ ಕಂಡರೆ, ಶಾಂಘೈ ಮತ್ತು ಹಾಂಗ್ ಕಾಂಗ್ ಹಿನ್ನಡೆ ಅನುಭವಿಸಿದವು. ಐರೋಪ್ಯ ಮಾರುಕಟ್ಟೆಗಳು ಹೆಚ್ಚಿನ ವಹಿವಾಟು ನಡೆಸಿದವು. ಗುರುವಾರದಂದು ಅಮೆರಿಕದ ಮಾರುಕಟ್ಟೆಗಳು ಲಾಭ ಕಂಡವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 9,901.56 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಮಧ್ಯಂತರ ಬಜೆಟ್ 2024: ತೆರಿಗೆದಾರರು ಬಯಸುವುದೇನು? ನಿಮಗೆ ದೊರೆಯಬಹುದಾದದ ಅನುಕೂಲಗಳೇನು?

    ಈ ರೈಲ್ವೆ ಸ್ಟಾಕ್​ ನಿಮ್ಮ ಬಳಿ ಇದ್ದರೆ ನೀವು ಕುಬೇರರು: ಗರಿಷ್ಠ ಬೆಲೆ ಮುಟ್ಟಿದ ಷೇರಿಗೆ ಏಕೆ ಇಷ್ಟೊಂದು ಡಿಮ್ಯಾಂಡು?

    580% ಮಧ್ಯಂತರ ಲಾಭಾಂಶ ನೀಡಲು ಸಜ್ಜಾಗಿದೆ ಈ ಕಂಪನಿ: ಈ ಸಂಸ್ಥೆಯ ಷೇರಿಗೆ ಈಗ ಕುದುರಿದೆ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts