More

    RRR ಪ್ರಭಾವ: ಸ್ಕ್ರೀನ್​ಗಳು ಸಿಗದೆ ಕನ್ನಡ ಸಿನಿಮಾಗಳ ರಿಲೀಸ್ ಡೇಟ್​ ಮುಂದೂಡಿಕೆ

    ಒಂದು ಕಡೆ 5 ವರ್ಷಗಳ ನಂತರ ರಿಲೀಸ್ ಆದ ಎಸ್.ಎಸ್.ರಾಜಮೌಳಿ ಅವರ ಸಿನಿಮಾ ‘RRR’. ಮತ್ತೊಂದು ಕಡೆ ಹಿಂದಿ ಚಿತ್ರ ದಿ ಕಾಶ್ಮೀರ್ ಫೈಲ್ಸ್ನ ಅಬ್ಬರ ಆರ್ಭಟ. ಇವುಗಳ ನಡುವೆ ಅಪ್ಪು ಅವರು ಕೊನೆಯ ಬಾರಿ ಹೀರೋ ಆಗಿ ನಟಿಸಿರುವ ಜೇಮ್ಸ್ಸಿನಿಮಾ. ರಾಜ್ಯದಲ್ಲಿ ಬಹುತೇಕ ಎಲ್ಲಾ ಥಿಯೇಟರ್​ಗಳಲ್ಲಿ ‘RRR’ ಮತ್ತು ದಿ ಕಾಶ್ಮೀರ್ ಫೈಲ್ಸ್ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಇನ್ನು, ಈ ಸಿನಿಮಾಗಳ ಜತೆಗೆ ಅಪ್ಪು ಅವರು ಕೊನೆಯ ಬಾರಿ ಹೀರೋ ಆಗಿ ನಟಿಸಿರುವ ಕಾರಣ ಜೇಮ್ಸ್ಚಿತ್ರಕ್ಕೆ ಚೂರು ಆಧ್ಯತೆ ನೀಡಲಾಗಿದೆ. ಆದರೆ, ಈ ಸಿನಿಮಾಗಳ ನಡುವೆ ನಮ್ಮ ಬೇರೆ ಕನ್ನಡ ಸಿನಿಮಾಗಳಿಗೆ ಸ್ಕ್ರೀನ್​ಗಳೇ ಇಲ್ಲದಂತಾಗಿದೆ.
    ಹೌದು, ಸಿನಿಮಾ ಹಾಲ್​ಗಳಲ್ಲಿ ದೊಡ್ಡ ಬಜೆಟ್ ಸಿನಿಮಾಗಳದ್ದೇ ಆಳ್ವಿಕೆ ಎಂದರೆ ತಪ್ಪಾಗುವುದಿಲ್ಲ. ಈಗಾಗಲೇ, ಕನ್ನಡದ ಹರೀಶ್ ವಯಸ್ಸು 36′ ಸಿನಿಮಾಗೆ ಸ್ಕ್ರೀನ್​ಗಳು ಇಲ್ಲ ಎಂಬ ಮಾತನ್ನು ಸ್ವತಃ ಆ ಸಿನಿಮಾದ ನಿರ್ದೇಶಕರ ಬಾಯಿಂದ ಇಡೀ ರಾಜ್ಯದ ಜನತೆ ಕೇಳಿದ್ದಾರೆ. ಇದೀಗ, ಏಪ್ರಿಲ್ 1 ರಂದು ಬಿಡುಗಡೆಯಾಗಬೇಕಿದ್ದ ಕನ್ನಡ ಚಿತ್ರ ತ್ರಿಕೋನಚಿತ್ರ ಬಿಡುಗಡೆಯನ್ನು, ಚಿತ್ರಮಂದಿರಗಳು ಲಭ್ಯವಿಲ್ಲದ ಕಾರಣ ಏಪ್ರಿಲ್ 8 ಕ್ಕೆ ಮುಂದೂಡಲಾಗಿದೆ. ಇದಿಷ್ಟೇ ಅಲ್ಲ, ಏಪ್ರಿಲ್ 1 ಕ್ಕೆ ರಿಲೀಸ್ ಆಗಲಿರುವ ದಿವಂಗತ ನಟ ಸಂಚಾರಿ ವಿಜಯ್ ಅವರ ಕೊನೆಯ ತಲೆದಂಡಸಿನಿಮಾದ ಬಿಡುಗಡೆಯನ್ನು ಕೂಡಾ ಮುಂದೂಡುವ ಯೋಚನೆಯನ್ನು ಈ ಚಿತ್ರತಂಡ ಮಾಡುತ್ತಿದೆ ಎಂಬ ಮಾಹಿತಿ ಇದೆ.
    ಹೆಚ್ಚು ಕಡಿಮೆ 500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘RRR’ ಪ್ರದರ್ಶನ ನಡೆಯುತ್ತಿದೆ. 300 ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಜೇಮ್ಸ್ಅಬ್ಬರವಿದೆ. ಇನ್ನು, 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ಸಿನಿಮಾಗೆ ಆಧ್ಯತೆ ನೀಡಲಾಗಿದೆ. ಹೀಗಿರುವಾಗ, ಬೇರೆ ಸಣ್ಣ ಮತ್ತು ಕನ್ನಡದ ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆ ಸಹಜ ಎಂದೇ ಹೇಳಬೇಕು. ಈ ಸಮಸ್ಯೆಗೆ ಪರಿಹಾರವೇ ಇಲ್ಲದಂತೆ ಆಗಿದೆ. ದೊಡ್ಡ ಬಜೆಟ್​ನ ಯಾವ ಸಿನಿಮಾ ರಿಲೀಸ್ ಆದರೂ, ಅದರಿಂದ ಹೊಡೆತ ಬೀಳುವುದು ಮಾತ್ರ ಸಣ್ಣ ಬಜೆಟ್​ನ ಸಿನಿಮಾಗಳಿಗೆ

    ನನ್ನ ಪತಿಯ ಸಿನಿಮಾ ಅಂತ ಹೊಗಳ್ತಿಲ್ಲ… ರಿಲೀಸ್​ಗೂ ಮುನ್ನ ‘ಕೆಜಿಎಫ್ 2’ ನೋಡಿದ ರಾಧಿಕಾ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts