ಕೊಳೆಗೇರಿಯವರ ಬಳಿ ನಡೆಯಲಿಲ್ಲ ಕರೊನಾ ಆಟ; ಹೌಸಿಂಗ್​ ಸೊಸೈಟಿಯವರು ದೂರವೇ ಇಟ್ಟರು…!

blank

ಮುಂಬೈ: ಕರೊನಾ ಸೋಂಕಿನ ವಿವರ ಅರಿಯಲು ಬೃಹನ್​ ಮುಂಬೈ ಮಹಾಣಗರ ಪಾಲಿಕೆ ನಡೆಸಿದ ರಕ್ತ ಮಾದರಿ ಪರೀಕ್ಷೆಯಲ್ಲಿ ಹಲವು ಅಚ್ಚರಿದಾಯಕ ಅಂಶಗಳು ಬೆಳಕಿಗೆ ಬಂದಿವೆ.

ಕೊಳೆಗೇರಿಗಳಲ್ಲಿ ವಾಸಿಸುವವರ ಪೈಕಿ ಶೇ.57 ಜನರು ಸೋಂಕಿಗೆ ಒಳಗಾಗಿದ್ದರೆ, ಹೌಸಿಂಗ್​ ಸೊಸೈಟಿ ಅಥವಾ ಅಪಾರ್ಟ್​ಮೆಂಟ್​ಗಳಲ್ಲಿ ವಾಸಿಸುವವರ ಪೈಕಿ ಶೇ.17 ಜನರು ಸೋಂಕಿಗೆ ಒಳಗಾಗಿದ್ದಾರೆ. ಅವರ ರಕ್ತ ಮಾದರಿಯಲ್ಲಿ ವೈರಸ್​ ಕುರುಹು ಹಾಗೂ ರೋಗ ನೀರೋಧಕ ಶಕ್ತಿ ಬೆಳೆಸಿಕೊಂಡಿರುವುದು ಗೊತ್ತಾಗಿದೆ. ಆದರೆ, ಯಾರೂ ಪಾಸಿಟಿವ್​ ಆಗಿಲ್ಲ. ಅಥವಾ ಬಾಹ್ಯವಾಗಿ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ; ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ 

ಕೊಳೆಗೇರಿಯವರು ಕರೊನಾ ಸೋಂಕಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ತೆರೆದುಕೊಂಡಿದ್ದರೂ ಅವರಲ್ಲಿ ಪ್ರಾಣಹಾನಿ ಉಂಟಾಗಿಲ್ಲ. ಸಾರ್ವಜನಿಕ ಶೌಚ ವ್ಯವಸ್ಥೆ ಬಳಕೆ, ಜನದಟ್ಟಣೆ ಹಾಗೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳದಿರುವುದು ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿವುದಕ್ಕೆ ಕಾರಣವಾಗಿದೆ.

ಅದೇ, ಹೌಸಿಂಗ್ ಸೊಸೈಟಿಗಳಲ್ಲಿ ನೆಲೆಸಿರುವವರು ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದರಿಂದ ಕಡಿಮೆ ಜನರು ಕರೊನಾಗೆ ತೆರೆದುಕೊಂಡಿದ್ದಾರೆ ಎಂದು ಟಾಟಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ; ಮುಂಬೈನಲ್ಲಿ ಮಾಯವಾಗುತ್ತಿದೆ ಕರೊನಾ…! ಮೂರು ತಿಂಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಕುಸಿತ 

ದಹಿಸರ್​, ಚೆಂಬೂರ್​, ಮಾತುಂಗಾದ ಕೋವಿಡ್​ ಪ್ರಕರಣಗಳು ಹೆಚ್ಚಿರುವ ಹಾಗೂ ವಿರಳವಾಘಿರುವ ಸ್ಥಳಗಳಲ್ಲಿ ಎಲ್ಲ ವಯಸ್ಸಿನ ಅಂದಾಜು 7,000 ಪುರುಷ ಹಾಗೂ ಮಹಿಳೆಯರಲ್ಲಿ ರಕ್ತದ ಮಾದರಿಯ ಪರೀಕ್ಷೆ ನಡೆಸಲಾಗಿತ್ತು. ಕರೊನಾ ಸೋಂಕಿಗೆ ತೆರೆದುಕೊಂಡಿದ್ದರೂ ಯಾರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಷ್ಟು ತೀವ್ರತೆ ಕಂಡು ಬಂದಿರಲಿಲ್ಲ ಎಂದು ಸಮೀಕ್ಷೆ ತಿಳಿಸಿದೆ. ಈ ಮೂಲಕ ತಿಳಿದು ಬಂದಿದ್ದೇನೆಂದರೆ ಗುಣ ಲಕ್ಷಣವಿಲ್ಲದ ರೋಗಿಗಳ ಸಂಖ್ಯೆ ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಾಗಿತ್ತು ಎಂದು ಪಾಲಿಕೆ ಹೆಚ್ಚುವರಿ ಆಯುಕ್ತ ಸುರೇಶ್​ ಕಾಕಣಿ ತಿಳಿಸಿದ್ದಾರೆ.

ಈ ಬ್ಯಾಂಕ್​ಗೆ ಚೀನಾ ಸಾರಥ್ಯ, ಭಾರತವಿಲ್ಲಿ ಭಾರಿ ಸಾಲಗಾರ…! ಎಲ್ಲಿದೆ ಬ್ಯಾಂಕ್​?ಎಷ್ಟು ಸಾಲ?

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…