More

    ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ

    ಚಿಕ್ಕಮಗಳೂರು: ಸ್ಪರ್ಧಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಯುವಜನೋತ್ಸವಕ್ಕೆ ಅರ್ಥ ಬರುತ್ತದೆ ಎಂದು ಉಪಸಭಾಪತಿ ಎಸ್.ಎಲ್.ಧಮೇಗೌಡ ಹೇಳಿದರು.

    ಶತಮಾನೋತ್ಸವ ಕ್ರೀಡಾಂಗಣದಲ್ಲಿ ಸೋಮವಾರ ಮಲ್ಟಿ ಜಿಮ್ ಉದ್ಘಾಟಿಸಿದ ನಂತರ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶತಮಾನೋತ್ಸವ ಕ್ರೀಡಾಂಗಣದಲ್ಲಿ 84 ಲಕ್ಷ ರೂ. ವೆಚ್ಚದ ಆತ್ಯಾಧುನಿಕ ಮಲ್ಟಿ ಜಿಮ್ ಪ್ರಾರಂಭಿಸಿದ್ದು, ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಯುವಜನೋತ್ಸವದಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಈ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸಿ ಅವರ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಬೇಕು ಎಂದು ಹೇಳಿದರು.

    ನಮ್ಮ ಪೂರ್ವಜರು ಜನಪದ ಗೀತೆ ಮತ್ತು ಜನಪದ ನೃತ್ಯದ ಮೂಲಕ ಶಾಂತಿ ಮತ್ತು ನೆಮ್ಮದಿಯ ಬದುಕು ಕಾಣುತ್ತಿದ್ದರು. ಇಂದು ಇಂತಹ ಕಲೆಗಳು ಜನಮಾನಸದಿಂದ ದೂರ ಉಳಿದಿವೆ. ರೈತರ ಮನೆಯಲ್ಲಿ ವಿಶೇಷವಾಗಿ ತಾಯಂದಿರು ರಾಗಿ ಬೀಸುವಾಗ ಮತ್ತು ಭತ್ತ ಕುಟ್ಟುವಾಗ ಜನಪದ ಗೀತೆಗಳನ್ನು ಹಾಡುತ್ತಿದ್ದರು. ಇಂದು ಆ ಹಾಡುಗಳು ಮಾಯವಾಗಿವೆ ಎಂದು ವಿಷಾದಿಸಿದರು.

    ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಜೆ.ಸೋಮಶೇಖರಪ್ಪ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶಶಿಕಲಾ ಅವಿನಾಶ್, ಜಿಪಂ ಸದಸ್ಯರಾದ ರವೀಂದ್ರ ಬೆಳವಾಡಿ, ಜಸಂತಾ ಅನಿಲ್​ಕುಮಾರ್, ಪ್ರೇಮಾ ಕೆ.ವಿ.ಮಂಜುನಾಥ್, ಸಿಡಿಎ ಅಧ್ಯಕ್ಷ ಆನಂದ್, ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೆಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts