More

    ಕಲಿಕೆ ವೇಳೆಯೇ ಸೇವಾಗುಣ ಬೆಳೆಸಿಕೊಳ್ಳಿ

    ಚಿಕ್ಕಮಗಳೂರು: ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಕಲಿಕೆ ಹಂತದಲ್ಲಿಯೇ ತ್ಯಾಗ, ಸಹನೆ ಹಾಗೂ ಸೇವಾಗುಣಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಸೇವಾ ಅವಧಿಯಲ್ಲಿ ರೋಗಿಗಳಿಗೆ ಉತ್ತಮವಾಗಿ ಆರೈಕೆ ಮಾಡಲು ಸಾಧ್ಯ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹೇಳಿದರು.
    ನಗರದ ಟಿಎಂಎಸ್ ರೋಟರಿ ಸಭಾಂಗಣದಲ್ಲಿ ಆಶ್ರಯ ಇನ್ಸಿಟ್ಯೂಟ್ ಅಂಡ್ ಕಾಲೇಜ್ ಆಫ್ ನರ್ಸಿಂಗ್‌ನಿಂದ ಏರ್ಪಡಿಸಿದ್ದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನರ್ಸಿಂಗ್ ವೃತ್ತಿ ಅತ್ಯಂತ ಜವಾಬ್ದಾರಿಯುತವಾದ ವೃತ್ತಿಯಾಗಿದೆ. ದೇಶದಲ್ಲಿ ತುರ್ತು ಅಥವಾ ಅಪಘಾತಗಳು ಸಂಭವಿಸಿದರೆ ಗಾಯಾಳುಗಳಿಗೆ ವೈದ್ಯರ ಮುಂಚೆಯೇ ಆರೈಕೆಯಲ್ಲಿ ತೊಡಗುವುದು ನರ್ಸ್‌ಗಳು. ಹೀಗಾಗಿ ವೃತ್ತಿಯನ್ನು ಪ್ರೀತಿಸುವ ವಿದ್ಯಾರ್ಥಿಗಳು ನರ್ಸಿಂಗ್‌ನಲ್ಲಿ ಸಾಧನೆಗೈದ ಪ್ಲಾರೆನ್ ನೈಟಿಂಗೇನ್, ಮದರ್ ತೆರೆಸಾ ಜೀವನ ಚರಿತ್ರೆ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
    ಚಿಕ್ಕಮಗಳೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸದ ಕೊರತೆ ನೀಗಿಸಲು ಆಶ್ರಯ ಇನ್ಸ್‌ಟಿಟ್ಯೂಟ್ ಸಕಲ ಸೌಕರ್ಯಗಳನ್ನು ಹೊಂದಿರುವ ಕಾಲೇಜು ಸ್ಥಾಪಿಸಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಅನುಕೂಲ ಕಲ್ಪಿಸಿದೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕ ನರ್ಸಿಂಗ್ ವಿದ್ಯಾರ್ಥಿಗಳು ದೇಶ- ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts