More

    545 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಕಲ್ಯಾಣ ಗ್ರಹಣ

    | ಗೋವಿಂದರಾಜು ಚಿನ್ನಕುರ್ಚಿ

    ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಮರುಪರೀಕ್ಷೆ ಬಳಿಕ ಆಯ್ಕೆಪಟ್ಟಿ ಪ್ರಕಟಿಸುವ ಮೊದಲೇ ‘ಕಲ್ಯಾಣ’ ಕರ್ನಾಟಕ ಪ್ರದೇಶದ 371-ಜೆ ಮೀಸಲಾತಿ’ ಗೊಂದಲ ಕಗ್ಗಂಟಾಗಿ ಕಾಡಲಾರಂಭಿಸಿದೆ.

    371-ಜೆ ಮೀಸಲಾತಿ ಆಯ್ಕೆ ಮಾಡಿಕೊಂಡಿರುವ ಮೆರಿಟ್ ಅಭ್ಯರ್ಥಿಗಳನ್ನು ಕಲ್ಯಾಣ ಕರ್ನಾಟಕೇತರ ವೃಂದಕ್ಕೆ ಸೇರಿಸಬೇಕೆಂಬ 2023ರ ಹೊಸ ವಿರುದ್ಧ ಸುತ್ತೋಲೆ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳೇ ಸಿಡಿದೆದ್ದಿದ್ದಾರೆ. ಇನ್ನು ಕಲ್ಯಾಣ ಕರ್ನಾಟಕದ ಮೆರಿಟ್ ಅಭ್ಯರ್ಥಿಗಳು ಸಾಮಾನ್ಯ ವರ್ಗಕ್ಕೆ ಸೇರ್ಪಡೆಯಾದರೆ ನಮ್ಮ ಅವಕಾಶ ತಪ್ಪಲಿದೆ ಎಂದು ಇತರ ವರ್ಗದ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಸುಪ್ರೀಂ ಆದೇಶದ ಪ್ರಕಾರ 2020ರ ರಾಜ್ಯಪಾಲರ ಗೆಜೆಟ್ ಅಧಿ ಸೂಚನೆಯಂತೆ ಆಯ್ಕೆ ಪಟ್ಟಿ ಬಿಡ ಬೇಕಾ? ಅಥವಾ 2023ರ ಸರ್ಕಾರದ ಸುತ್ತೋಲೆ ಪ್ರಕಾರ ಪಟ್ಟಿ ಬಿಡುಗಡೆ ಮಾಡಬೇಕಾ? ಎಂಬ ಗೊಂದಲದಲ್ಲಿ ಪರೀಕ್ಷಾ ಪ್ರಾಧಿಕಾರವಿದೆ.

    ಆಕ್ರೋಶಕ್ಕೇನು ಕಾರಣ?: ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಈಗಾಗಲೇ ವೃಂದ ನಮೂದಿಸಿದ್ದಾರೆ. ಆದರೂ ಮೆರಿಟ್ ಅಭ್ಯರ್ಥಿಗಳನ್ನು ಮಿಕ್ಕುಳಿದ ವೃಂದದ ಪಟ್ಟಿಯಲ್ಲಿ ಸೇರಿಸಬೇಕೆಂಬ ವಾದ ನಡೆಯುತ್ತಿದೆ. ಇದಕ್ಕೆ ಬೆಂಬಲ ವಾಗಿ ಗ್ರಾಮೀಣಾಭಿವೃದ್ಧಿ ಸಚಿವರು, 2023ರ ಸುತ್ತೋಲೆ ಅಳವಡಿಸುವಂತೆ ಕೆಇಎಗೆ ಪತ್ರ ಬರೆದಿರುವುದು ಮಿಕ್ಕುಳಿದ ವೃಂದದ (24 ಜಿಲ್ಲೆಗಳ) ಪರೀಕ್ಷಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಏನಿದು ಗೊಂದಲ?: 2021ರ ಜನವರಿಯಲ್ಲಿ ಪೊಲೀಸ್ ನೇಮಕಾತಿ ವಿಭಾಗ ಕಲ್ಯಾಣ ಕರ್ನಾಟಕಕ್ಕೆ 107 ಹುದ್ದೆ ಮೀಸಲಾತಿ ಕಲ್ಪಿಸಿ ಅಧಿಸೂಚನೆ ಹೊರಡಿಸಿತ್ತು. ಈ ಮಧ್ಯೆ ರಾಜ್ಯ ಸರ್ಕಾರ 2023ರ ಫೆ.1ರಂದು ಸುತ್ತೋಲೆ ಹೊರಡಿಸಿ, 2020ರ ಜೂ.6ರ ಸುತ್ತೋಲೆ ಅನ್ವಯ ಅಂತಿಮ ಆಯ್ಕೆಪಟ್ಟಿ ಪ್ರಕಟಿಸದೇ ಇದ್ದಲ್ಲಿ ಅಂತಹ ನೇಮಕಾತಿ ವೇಳೆ ಮೆರಿಟ್ ಅಭ್ಯರ್ಥಿ ಗಳನ್ನೂ ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಪರಿಗಣಿಸಬೇಕೆಂದು ಸೂಚಿಸಲಾಗಿತ್ತು.

    ಮತ್ತೆ ಹೈಕೋರ್ಟ್ ಅಂಗಳಕ್ಕೆ? ಮೂಲ ಅಧಿಸೂಚನೆ ಬದಲು ಕೆಲ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು 2023ರ ಸುತ್ತೋಲೆಯಂತೆ ಆಯ್ಕೆಪಟ್ಟಿ ಬಿಡುಗಡೆ ಮಾಡಿದರೆ ಪ್ರಕರಣ ಮತ್ತೆ ಹೈಕೋರ್ಟ್ ಮೆಟ್ಟಿಲೇರುವ ಲಕ್ಷಣ ಕಾಣುತ್ತಿದೆ. ನೇಮಕಾತಿ ಹಗರಣ ಕುರಿತು ಸುದೀರ್ಘ ವಾದ-ಪ್ರತಿವಾದ ಅಲಿಸಿದ ಬಳಿಕವೇ ಹೈಕೋರ್ಟ್ ಮರು ಪರೀಕ್ಷೆಗೆ ಆದೇಶಿಸಿತ್ತು. ಇದೀಗ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದರೆ ತಾರ್ಕಿಕ ಅಂತ್ಯ ಕಾಣಿಸಲು ವಿಳಂಬವಾಗಲಿದೆ. ಜತೆಗೆ ಬಾಕಿ ಇರುವ 402 ಎಸ್‌ಐ ಹುದ್ದೆಗಳ ಮತ್ತು ಇತರ ನೇಮಕಾತಿಗೂ ಅಡ್ಡಿ ಉಂಟಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ

    ಕಾನೂನು ಸಚಿವರ ವಿರೋಧ
    ಕಾನೂನು ಸಚಿವರು ಕೆಪಿಎಸ್‌ಸಿ, ಕೆಇಎ ಮತ್ತು ಕೇಂದ್ರೀಕೃತ ದಾಖಲಾತಿ ಘಟಕ ನಡೆಸುವ ನೇಮಕಾತಿಗಳು ಅಂತಿಮ ಹಂತದಲ್ಲಿದ್ದರೆ ಅಂತಹ ವೇಳೆ 2023ರ ಫೆ.1ರ ಸರ್ಕಾರದ ಸುತ್ತೋಲೆ ಪರಿಗಣಿಸುವುದು ಬೇಡ. ಇದು ರಾಜ್ಯಪಾಲರು ಹೊರಡಿಸಿರುವ ಮೂಲ ಗೆಜೆಟ್ ಕಾಯ್ದೆ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಈ ಸಂಬಂಧ ಕೆಎಟಿ ಆದೇಶ ಮತ್ತು ದೂರುಗಳನ್ನು ಪರಿಶೀಲಿಸಿ 24 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದಿದ್ದಾರೆ.

    Police 1

    ತವರು ಕ್ಷೇತ್ರದಿಂದ ಕಂಗನಾ ಕಣಕ್ಕೆ: ಬಿಜೆಪಿ ಟಿಕೆಟ್ ಗಿಟ್ಟಿಸಿದ ಬೆನ್ನಲ್ಲೇ ಬಾಲಿವುಡ್​ ಫೈರ್ ಬ್ರಾಂಡ್ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts