ತವರು ಕ್ಷೇತ್ರದಿಂದ ಕಂಗನಾ ಕಣಕ್ಕೆ: ಬಿಜೆಪಿ ಟಿಕೆಟ್ ಗಿಟ್ಟಿಸಿದ ಬೆನ್ನಲ್ಲೇ ಬಾಲಿವುಡ್​ ಫೈರ್ ಬ್ರಾಂಡ್ ಹೇಳಿದ್ದಿಷ್ಟು…

ನವದೆಹಲಿ: ಲೋಕಸಭಾ ಚುನಾವಣೆಗಾಗಿ ಬಿಜೆಪಿ ಇಂದು (ಮಾರ್ಚ್​ 24) ಬಿಡುಗಡೆ ಮಾಡಿರುವ 5ನೇ ಪಟ್ಟಿಯಲ್ಲಿ ನಟಿ ಕಂಗನಾ ರಣಾವತ್​ಗೆ ಸ್ಥಾನ ನೀಡಲಾಗಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಕಣಕ್ಕಿಳಿಯಲಿರುವ ಬಾಲಿವುಡ್​ ಬ್ಯೂಟಿ ಕಂಗನಾ, ಟಿಕೆಟ್​ ಸಿಕ್ಕ ಖುಷಿಯಲ್ಲಿ ಬಿಜೆಪಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕಂಗನಾ ತಮ್ಮ ಎಕ್ಸ್​ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪ್ರೀತಿಯ ಭಾರತ ಮತ್ತು ಭಾರತೀಯ ಜನತೆಯ ಪಕ್ಷ ಬಿಜೆಪಿ, ಯಾವಾಗಲು ನನ್ನ ಬೇಷರತ್​ ಬೆಂಬಲವನ್ನು … Continue reading ತವರು ಕ್ಷೇತ್ರದಿಂದ ಕಂಗನಾ ಕಣಕ್ಕೆ: ಬಿಜೆಪಿ ಟಿಕೆಟ್ ಗಿಟ್ಟಿಸಿದ ಬೆನ್ನಲ್ಲೇ ಬಾಲಿವುಡ್​ ಫೈರ್ ಬ್ರಾಂಡ್ ಹೇಳಿದ್ದಿಷ್ಟು…