More

    ಆಧಾರ್​ ತಿದ್ದುಪಡಿ ಮಾಡಿಸಿ ಹಿಂದಿರುಗುವಾಗ ಅಪಘಾತ: ಕಲಬುರಗಿಯಲ್ಲಿ ಒಂದೇ ಕುಟುಂಬದ 6 ಮಂದಿ ದುರ್ಮರಣ

    ಕಲಬುರಗಿ: ಟ್ಯಾಂಕರ್​ ಮತ್ತು ಟಂಟಂ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಟಂಟಂನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಬಳಿ ಇಂದು (ನ.09) ನಡೆದಿದೆ.

    ಮೃತರನ್ನು ನಜ್ಮಾ ಬೇಗಂ (28), ಬಿಬಿ ಫಾತೀಮಾ (12), ಅಬುಬಕರ್ (4) ಬಿಬಿ ಮರಿಯಮ್ಮ (5 ತಿಂಗಳು), ಮಹ್ಮದ್ ಪಾಷಾ (20) ಮತ್ತು ಆಟೋ ಚಾಲಕ ಬಾಬಾ (35) ಎಂದು ಗುರುತಿಸಲಾಗಿದೆ. ಮಹಮದ್ ಹುಸೇನ್ ಎಂಬ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೃತರೆಲ್ಲರು ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದ ನಿವಾಸಿಗಳು. ಆಧಾರ್​ ಕಾರ್ಡ್ ತಿದ್ದುಪಡಿಗೆಂದು ಟಂಟಂನಲ್ಲಿ ಚಿತ್ತಾಪುರಕ್ಕೆ ಹೋಗಿ, ತಿದ್ದುಪಡಿ ಮಾಡಿಸಿಕೊಂಡು ವಾಪಸ್​ ಬರುವಾಗ ದುರ್ಘಟನೆ ಸಂಭವಿಸಿದೆ. ಬೂದಿ ತುಂಬಿದ ಟ್ಯಾಂಕರ್ ಟಂಟಂಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದಾರೆ. ‘

    ಅಪಘಾತದ ಬೆನ್ನಲ್ಲೇ ಟ್ಯಾಂಕರ್ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ವಾಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಕ್ಯಾಂಟರ್​ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನೊಂದೆಡೆ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಮನೆಗಳಲ್ಲಿ ಶೋಕ ಮಡುಗಟ್ಟಿದೆ.

    ಪಾಕ್​ ಮುಂದಿರೋದು ಅಂತಿಂಥ ಸವಾಲಲ್ಲ ತಿಪ್ಪರಲಾಗ ಹಾಕಿದ್ರೂ ಆಗಲ್ಲ! ಈ ನಾಲ್ವರ ನಡುವೆ ಸೆಮೀಸ್ ಕದನ ಫಿಕ್ಸ್

    ಪ್ರೀತಿಸುವಂತೆ ಬೆದರಿಸಿದ್ದ ಯುವಕನಿಗೆ 3 ವರ್ಷ ಜೈಲು

    ಬೇಕರಿ ಮುಂದೆಯೇ ರೌಡಿ ಹತ್ಯೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts