ಪ್ರೀತಿಸುವಂತೆ ಬೆದರಿಸಿದ್ದ ಯುವಕನಿಗೆ 3 ವರ್ಷ ಜೈಲು

ಬೆಂಗಳೂರು: ಪ್ರೀತಿಸುವಂತೆ ಬೆದರಿಕೆ ಒಡ್ಡಿ ಲೈಂಗಿಕವಾಗಿ ತೊಂದರೆ ನೀಡಿದ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ 1ನೇ ಎಫ್ ಟಿಎಸ್ ಸಿ ನ್ಯಾಯಾಲಯ ತೀರ್ಪು ನೀಡಿದೆ. ಕೃಷ್ಣ ಲೇಔಟ್ ಬಿ.ಜಿ. ರಸ್ತೆ ನಿವಾಸಿ ಶಿವ ಅಲಿಯಾಸ್ ಶಿವು (26) ಅಪರಾಧಿ. ಪೋಕ್ಸೋ ಕಾಯ್ದೆಗೆ 3 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಕೆ.ಎನ್. ರೂಪಾ ಶಿಕ್ಷೆ ಪ್ರಕಟಿಸಿದ್ದಾರೆ. ಜತೆಗೆ ಬಾಲಕಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಡಿಎಲ್‌ಎಸ್‌ಎಗೆ ಸೂಚಿಸಿದ್ದಾರೆ. … Continue reading ಪ್ರೀತಿಸುವಂತೆ ಬೆದರಿಸಿದ್ದ ಯುವಕನಿಗೆ 3 ವರ್ಷ ಜೈಲು