More

    ಇನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ತಿಂಡಿ ತಿನಿಸಿನಲ್ಲಿ ಸಿರಿಧಾನ್ಯ! ಕೃಷಿ ಇಲಾಖೆಯಿಂದ ಅಧಿಕೃತ ಆದೇಶ ಪ್ರಕಟ

    ಬೆಂಗಳೂರು: ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023ನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಇಲಾಖೆಗಳ ಸಭೆ/ಸಮಾರಂಭಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು/ಪಾನೀಯ ಬಳಸುವಂತೆ ಕೃಷಿ ಇಲಾಖೆ ಆದೇಶ ಹೊರಡಿಸಿದೆ.

    ಸಿರಿಧಾನ್ಯ ಆಧಾರಿತ ತಿಂಡಿ ತಿನಿಸುಗಳು ಕೆಎಂಎ್ ಸಂಸ್ಥೆಯ ನಂದಿನಿ ಮಳಿಗೆಗಳಲ್ಲಿ, ರಾಜ್ಯದ ಎಲ್ಲ ಕೃಷಿ ಸಂಬಂಧಿತ ವಿವಿಗಳ ಆಹಾರ/ಪೌಷ್ಟಿಕಾಂಶಗಳ ವಿಭಾಗ, ಸ್ವಸಹಾಯ ಸಂಘಗಳು ಹಾಗೂ ರಾಜ್ಯದ 7 ಸಾವಯವ ರೈತರ ಪ್ರಾಂತೀಯ ಒಕ್ಕೂಟಗಳು, ಪ್ರಮುಖ ಪಟ್ಟಣಗಳ ಸೂಪರ್ ಮಾರ್ಕೆಟ್‌ಗಳಲ್ಲಿ ಲಭ್ಯವಿರುತ್ತವೆ. ಹೀಗಾಗಿ ಎಲ್ಲ ಇಲಾಖೆಗಳು ಹಾಗೂ ಎಲ್ಲ ಅಧೀನ ಕಚೇರಿಗಳಲ್ಲಿ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಅಡಿಯಲ್ಲಿ ಬರುವ ಗ್ರಾಮ ಪಂಚಾಯತ್ ಸಭೆ, ಸಮಾರಂಭಗಳಲ್ಲಿಯೂ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು, ಪಾನೀಯ ಬಳಸುವಂತೆ ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts