More

    ಜಗದ ಪ್ರೇಕ್ಷಕರಿಗೆ ನಾಟಿತು ‘ನಾಟು ನಾಟು’; ಆಸ್ಕರ್​ನಲ್ಲಿ ಎಲ್ರೂ ಎದ್ದು ನಿಂತು ಚಪ್ಪಾಳೆ ಹೊಡೆದ್ರು!

    ನವದೆಹಲಿ: ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಅವರ RRR “ನಾಟು ನಾಟು” ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್ ಅಲ್ಲಿ ಪ್ಲೇ ಮಾಡಲಾಗಿತ್ತು. ಈ ಸಂದರ್ಭ ಅದು ಜನರನ್ನು ಎದ್ದು ನಿಂತು ಚಪ್ಪಾಳೆ ಹೊಡೆಯುವಂತೆ ಮಾಡಿದೆ. ಅಂದರೆ ಅದು ಜನರನ್ನು ನಾಟಿದೆ ಎಂದರ್ಥ!

    ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ ಈ ನೃತ್ಯವನ್ನು ದೀಪಿಕಾ ಪಡುಕೋಣೆ ಆಸ್ಕರ್​ ವೇದಿಕೆಯಲ್ಲಿ ಪರಿಚಯಿಸಿದರು. ಜನಪ್ರಿಯ ತೆಲುಗು ಹಾಡಿಗೆ ಅಮೇರಿಕನ್ ನಟ-ನರ್ತಕಿ ಲಾರೆನ್ ಗಾಟ್ಲೀಬ್ ನೃತ್ಯ ಮಾಡಿದರು.

    ಹಾಡಿನ ಸಂಯೋಜಕ ಎಂಎಂ ಕೀರವಾಣಿ ಮತ್ತು ನಟರಾದ ರಾಮ್ ಚರಣ್ ಮತ್ತು ಎನ್ಟಿಆರ್ ಅವರು ಪ್ರೇಕ್ಷಕರ ನಡುವೆ ಕುಳಿತು ಗಾಯಕರನ್ನು ಹುರಿದುಂಬಿಸಿದರು. ಎಸ್‌ಎಸ್ ರಾಜಮೌಳಿ ನಿರ್ದೇಶನದ ಅದ್ಭುತ ಕೃತಿಯ ‘ನಾಟು ನಾಟು’ 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.

    ಡ್ಯಾನ್ಸ್ ರಿಯಾಲಿಟಿ ಶೋ ಝಲಕ್ ದಿಖ್​ಲಾಜಾ ಆರನೇ ಸೀಸನ್‌ನಲ್ಲಿ ಭಾಗವಹಿಸಿದ ನಂತರ ಭಾರತದಲ್ಲಿ ಮನೆಮಾತಾಗಿರುವ ಗಾಟ್ಲೀಬ್, ಆಸ್ಕರ್‌ನಲ್ಲಿ “ನಾಟು ನಾಟು” ಗೆ ನೃತ್ಯ ಮಾಡಿದರು. ಈ ಹಿಂದೆ, ಲಾರೆನ್ ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನ ನೀಡುವ ಬಗ್ಗೆ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದ್ದರು. ಅವರು ಇನ್‌ಸ್ಟಾಗ್ರಾಮ್‌ನಲ್ಲಿ “ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ನಾನು ಉತ್ಸುಕನಾಗಿದ್ದೇನೆ. ನನ್ನನ್ನು ಹಾರೈಸಿ” ಎಂದು ಬರೆದುಕೊಂಡಿದ್ದರು.

    ಕೀರವಾಣಿಯ ‘ನಾಟು ನಾಟು’ ಹಾಡು, ಲೇಡಿ ಗಾಗಾ, ರಿಯಾನಾ , ಮಿಟ್ಸ್ಕಿ ಮತ್ತು ಡೇವಿಡ್ ಬೈರ್ನ್ ಮತ್ತು ಡಯೇನ್ ವಾರೆನ್ ವಿರುದ್ಧ ಸ್ಪರ್ಧಿಸುತ್ತಿದೆ . ಹಾಡಿನ ಅಭಿಮಾನಿಗಳು ಈ ಹಾಡಿನಲ್ಲಿ ರಾಮ್ ಚರಣ್ ಮತ್ತು ಎನ್ಟಿಆರ್ ಜೂನಿಯರ್ ಹಾಡುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ, ಅವರಿಬ್ಬರಿಗೂ ಅಭ್ಯಾಸ ಮಾಡಲು ಸಮಯ ಸಿಕ್ಕಿರದ ಕಾರಣ ಹಾಗೆ ಮಾಡಲು ಮುಂದಾಗಿಲ್ಲ.

    ಆಸ್ಕರ್‌ಗೆ ಮುನ್ನ ಕೆಟಿಎಲ್‌ಎ ಜೊತೆ ಮಾತನಾಡಿದ ಜೂನಿಯರ್ ಎನ್‌ಟಿಆರ್, “ಹೀಗೆ ಆಗುತ್ತದೆ ಎಂದು ನನಗೆ ಗೊತ್ತಿತ್ತು. ಈ ಕ್ಷಣಕ್ಕಾಗಿ ನಾನು ಎದುರು ನೋಡುತ್ತಿದ್ದೆ. ಆದರೆ, ದುರದೃಷ್ಟವಶಾತ್, ನಮಗೆ ಪ್ರಾಕ್ಟೀಸ್​ ಮಾಡಲು ಸಮಯವಿರಲಿಲ್ಲ.

    ಭಾರತದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಚಿತ್ರಮಂದಿರಗಳಲ್ಲಿಯೂ ‘ನಾಟು ನಾಟು’ ಪ್ರದರ್ಶನಗೊಂಡಾಗ ಪ್ರೇಕ್ಷಕರನ್ನು ಉನ್ಮಾದಗೊಳಿಸಿತ್ತು. ಈ ಹಾಡಿಗೆ ಹಲವರು ಕುಣಿದು ಕುಪ್ಪಳಿಸಿದರು. ಯೂಟ್ಯೂಬ್‌ನಲ್ಲಿ, ಹಾಡು 124 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 80ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಎಂಎಂ ಕೀರವಾಣಿ ಅತ್ಯುತ್ತಮ ಮೂಲ ಗೀತೆ ಟ್ರೋಫಿಯನ್ನು ಪಡೆದುಕೊಂಡಿದ್ದರಿಂದ ಈ ಹಾಡಿನ ಅಭಿಮಾನಿಗಳು ಇನ್ನಷ್ಟು ಹೆಚ್ಚಾಗಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts