More

    ಲಿಫ್ಟ್​ ಕೊಡೋ ನೆಪದಲ್ಲಿ ಆ ವಿದ್ಯಾರ್ಥಿನಿ ಬಳಿ ಕೇಳಬಾರದ್ದನ್ನು ಕೇಳಿದ ಟೆಕ್ಕಿ!

    ಈ ಮಧ್ಯವಯಸ್ಕ ಟೆಕ್ಕಿ,  ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಬಳಿ ದಾರಿ ಕೇಳುವ ನೆಪದಲ್ಲಿ ಕಾರು ನಿಲ್ಲಿಸಿ ಲಿಫ್ಟ್​ ಬೇಕಾ ಎಂದು ಕೇಳಿದ್ದಾನೆ. ಆಗ ಅದೇ ಪ್ರದೇಶದಲ್ಲಿ ಅಲ್ವಾ ನನ್​ ಕಾಲೇಜು ಇರುವುದು ಎಂದು ವಿದ್ಯಾರ್ಥನಿ ಕಾರು ಹತ್ತಿದ್ದಾಳೆ. ಆಗ ಓತಿಕ್ಯಾತದಂತೆ ಬಣ್ಣ ಬದಲಾಯಿಸಿದ ಟೆಕ್ಕಿ ಕೇಳಬಾರದ್ದನ್ನು ಕೇಳಿ ಬಿಟ್ಟಿದ್ದಾನೆ!

    ಮುಂಬೈ: 22ರ ಹರೆಯದ ಇಂಜಿನಿಯರಿಂಗ್ ಪದವೀಧರ ಮಹಿಳೆಗೆ ಭಾನುವಾರ ಬೆಳಗ್ಗೆ ತರಗತಿಗಳಿಗೆ ಹಾಜರಾಗಲು ಹೋಗುತ್ತಿದ್ದಾಗ ಲಿಫ್ಟ್ ಕೊಡಿಸುವುದಾಗಿ ಹೇಳಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಜಸ್ಪಾಲ್ ಇಕ್ಬಾಲ್ ಸಿಂಗ್ (47) ಎಂದು ಗುರುತಿಸಲಾಗಿದ್ದು, ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಐಟಿ ಸಂಬಂಧಿತ ಕೋಚಿಂಗ್ ಸೆಷನ್‌ಗಳಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.

    ಬೆಳಿಗ್ಗೆ 9.45 ರ ಸುಮಾರಿಗೆ, ಆರೋಪಿ ದೂರುದಾರರ ಬಳಿಗೆ ಬಂದು ದಾರಿ ಕೇಳಿದ್ದಾನೆ. ಅದೇ ದಾರಿಯಲ್ಲಿ ಹೋಗುತ್ತಿದ್ದರೆ ಲಿಫ್ಟ್ ಕೊಡಬಹುದೆಂದು ಹೇಳಿದ. ಆಕೆಯ ತರಗತಿಗಳು ಅದೇ ಪ್ರದೇಶದಲ್ಲಿದ್ದ ಕಾರಣ ದೂರುದಾರರು ಕಾರು ಹತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ವಲ್ಪ ಸಮಯದ ಪ್ರಯಾಣದ ನಂತರ, ವ್ಯಕ್ತಿ ದೂರುದಾರರಿಗೆ ಲೈಂಗಿಕವಾಗಿ ಸಹಾಯ ಮಾಡಿದರೆ ಹಣ ನೀಡುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಲ್ಲದೇ ಆಕೆಗೆ ಅಸಭ್ಯವಾಗಿ ಸನ್ನೆ ಕೂಡ ಮಾಡಿದ್ದಾನೆ ಎನ್ನಲಾಗಿದೆ. ಆಕೆ ಆತನನ್ನು ನಿಲ್ಲಿಸಲು ಹೇಳಿ ಕಾರಿನಿಂದ ಇಳಿಯಲು ಪ್ರಯತ್ನಿಸಿದಾಗ, ಶಂಕಿತನು ಅವಳನ್ನು ಎಳೆದುಕೊಂಡು ಅನುಚಿತವಾಗಿ ಸ್ಪರ್ಶಿಸಿರುವ ಬಗ್ಗೆ ಯುವತಿ ಆರೋಪಿಸಿದ್ದಾಳೆ.

    ಇದಾದ ಮೇಲೆ ಕಾರಿನಿಂದ ತಪ್ಪಿಸಿಕೊಂಡ ಯುವತಿ ಪೊಲೀಸರನ್ನು ಸಂಪರ್ಕಿಸಿದರು. ಆಗ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354A (ಲೈಂಗಿಕ ಕಿರುಕುಳ) ಮತ್ತು 509 (ಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts