More

    ಪ್ರತಿಯೊಬ್ಬರಿಗೂ ಬೇಕು ಕಾನೂನಿನ ಸಾಮಾನ್ಯ ಜ್ಞಾನ: ಹಿರಿಯ ವಕೀಲ ಎನ್.ಅಬ್ದುಲ್‌ಸಾಬ್ ಅಭಿಪ್ರಾಯ

    ಸಿರಗುಪ್ಪ: ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿರುವ ಹಾಗೂ ಪ.ಜಾತಿ ಮತ್ತು ಪ.ಪಂಗಡದವರು ಕಾನೂನು ಹೋರಾಟಕ್ಕೆ ಆರ್ಥಿಕ ತೊಂದರೆ ಇದ್ದರೆ ಅಂತಹವರು ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಇದ್ದು, ಗಮನಕ್ಕೆ ತಂದರೆ ನಿಮ್ಮ ಪರವಾಗಿ ಉಚಿತವಾಗಿ ವಕಾಲತ್ತು ವಹಿಸಲು ವಕೀಲರನ್ನು ನೇಮಕ ಮಾಡಲಾಗುವುದು ಎಂದು ಹಿರಿಯ ವಕೀಲ ಎನ್.ಅಬ್ದುಲ್‌ಸಾಬ್ ಹೇಳಿದರು.

    ತೆಕ್ಕಲಕೋಟೆಯ ಪಪಂ ಸಭಾಂಗಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಿ ಬಳ್ಳಾರಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಮೂಡಿಸುವ ನಾಗರಿಕ ಸಬಲೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನ ಸಾಮಾನ್ಯರಿಗೆ ಇಂದು ಕಾನೂನಿನ ಅರಿವು ಅಗತ್ಯವಾಗಿದೆ. ಎಲ್ಲರಿಗೂ ಕಾನೂನಿನ ಸಾಮಾನ್ಯ ಜ್ಞಾನ ನೀಡುವ ಉದ್ದೇಶದಿಂದ ಪ್ರತಿ ಹಳ್ಳಿಗಳಿಗೂ ನ್ಯಾಯಾಧೀಶರೊಂದಿಗೆ ತೆರಳಿ ಕಾನೂನಿನ ಅರಿವು ಮೂಡಿಸಲಾಗುತ್ತಿದೆ ಎಂದರು.

    ಹಿರಿಯ ವಕೀಲ ಮಲ್ಲಿಗೌಡ ಮಹಿಳಾ ಕಾನೂನು ಮತ್ತು ವೆಂಕಟೇಶ ನಾಯಕ್‌ರಿಂದ ಜನನ ಮತ್ತು ಮರಣ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಪ.ಪಂ ಅಧ್ಯಕ್ಷೆ ಎಚ್.ನೀಲಮ್ಮ, ಉಪಾಧ್ಯಕ್ಷೆ ರುದ್ರಮ್ಮ, ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ವಕೀಲರ ಸಂಘದ ಅಧ್ಯಕ್ಷ ಎಸ್.ಮಂಜುನಾಥಗೌಡ, ಕಾರ್ಯದರ್ಶಿ ಕೆ.ರಾಘವೇಂದ್ರ, ಖಜಾಂಚಿ ಎನ್.ನಾಗರಾಜ, ವಕೀಲರಾದ ನೆಲಗುಂಟಯ್ಯ, ಸಣ್ಣಹುಸೇನಿ, ಎಚ್.ಶೇಖಣ್ಣ, ಎನ್.ಹನುಮಂತ, ಜಿ.ಗಾದಿಲಿಂಗ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts