More

    ಗೋಹತ್ಯೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ

    ಸಾಗರ: ಗೋಹತ್ಯೆ ಮತ್ತು ಗೋ ಕಳ್ಳಸಾಗಣೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಿಂದು ಜಾಗರಣ ವೇದಿಕೆ ಪದಾಧಿಕಾರಿಗಳು ನಗರ ಠಾಣೆಗೆ ಶನಿವಾರ ಮನವಿ ಸಲ್ಲಿಸಿದರು.
    ನಗರದ ಅಣಲೆಕೊಪ್ಪ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ದುಷ್ಕರ್ಮಿಗಳು ಗೋವಿನ ತಲೆ ಕಡಿದು ಹಿಂದು ಸಮುದಾಯದವರ ಮನೆ ಎದುರು ಎಸೆದು ಹೋಗಿದ್ದಾರೆ. ಇದೊಂದು ಸಮಾಜಘಾತುಕ ಕೃತ್ಯ. ಗೋಹಂತಕರ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕೃತ್ಯ ನಡೆಸಿದವರನ್ನು ಮತ್ತು ಬೆಂಬಲಕ್ಕೆ ನಿಂತವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
    ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ತಾಲೂಕಿನ ಗಡಿ ಭಾಗಗಳಲ್ಲಿ ಗೋಸಾಗಣೆ ಪ್ರಕರಣ ಹೆಚ್ಚುತ್ತಿದೆ. ಪೊಲೀಸ್ ಇಲಾಖೆ ತಕ್ಷಣ ಈ ಕುರಿತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವೇದಿಕೆಯಿಂದ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಂದು ಎಚ್ಚರಿಸಿದರು.

    ವೇದಿಕೆ ಜಿಲ್ಲಾ ಸಹ ಸಂಚಾಲಕ ಕೆ.ಎಚ್.ಸುಧೀಂದ್ರ, ಕೋಮಲ್ ರಾಘವೇಂದ್ರ, ಶ್ರೀಧರ್ ಸಾಗರ್, ರಾಘವೇಂದ್ರ ಕಾಮತ್, ಚೇತನ್, ಕೆ.ಆರ್.ಗಣೇಶಪ್ರಸಾದ್, ಸತೀಶ ಮೊಗವೀರ, ಸಂತೋಷ್, ಅರವಿಂದ ರಾಯ್ಕರ್, ಪ್ರೇಮಾ ಕಿರಣ್ ಸಿಂಗ್, ಪರಶುರಾಮ್, ಮಂಜು, ಬಸವರಾಜ್, ಪ್ರವೀಣ್, ಶ್ರೀನಿವಾಸ್, ಬಸವರಾಜ್ ಮಡಿವಾಳ್, ಅಣ್ಣಪ್ಪ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts