More

    ಭಾರತದ ಟಾಪ್​ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ಪೈಕಿ ಸರ್​ ಎಚ್​ಎನ್​ ರಿಲಯನ್ಸ್ ಫೌಂಡೇಷನ್​ ಹಾಸ್ಪಿಟಲ್ ನಂಬರ್ ಒನ್​..

    ಮುಂಬೈ: ರಿಲಯನ್ಸ್​ ಫೌಂಡೇಷನ್​​ನಿಂದ ನಡೆಸಲ್ಪಡುತ್ತಿರುವ ಸರ್​ ಎಚ್​ಎನ್​ ರಿಲಯನ್ಸ್​ ಫೌಂಡೇಷನ್​ ಹಾಸ್ಪಿಟಲ್​ ಈಗ ಭಾರತದ ಟಾಪ್​ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲೇ ನಂಬರ್ ಒನ್ ಎಂದೆನಿಸಿಕೊಂಡಿದೆ. ಟೈಮ್ಸ್​ ಆಫ್​ ಇಂಡಿಯಾ ಹೆಲ್ತ್ ಸರ್ವೇಯ ಭಾಗವಾದ ಆಲ್​ ಇಂಡಿಯಾ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ಸ್​ ರ‌್ಯಾಂಕಿಂಗ್ ಸರ್ವೇ-2021ರಲ್ಲಿ ಈ ಮನ್ನಣೆಗೆ ಪಾತ್ರವಾಗಿದೆ.

    2020-21ನೇ ಸಾಲಿನಲ್ಲಿ ಭಾರತದ ಟಾಪ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ಗುರುತಿಸುವ ಉದ್ದೇಶದಿಂದ ಈ ಸರ್ವೇಯನ್ನು ನಡೆಸಲಾಗಿತ್ತು. ಕನಿಷ್ಠ ಮೂರು ಅಥವಾ ಅಧಿಕ ಕ್ರಿಟಿಕಲ್​ ಕೇರ್ ಸ್ಪೆಷಾಲಿಟಿ ಡಿಪಾರ್ಟ್​ಮೆಂಟ್ ಹೊಂದಿರುವ ಆಸ್ಪತ್ರೆಗಳನ್ನಷ್ಟೇ ಈ ಸರ್ವೇಯಲ್ಲಿ ಪರಿಗಣಿಸಲಾಗಿದೆ.

    ಅಂದರೆ ಆಂಕಾಲಜಿ, ನೆಫ್ರಾಲಜಿ, ಯುರಾಲಜಿ, ಕಾರ್ಡಿಯಾಲಜಿ, ಪೀಡಿಯಾಟ್ರಿಕ್ಸ್, ಗೈನಕಾಲಜಿ/ಅಬ್​ಸ್ಟೆಟ್ರಿಕ್ಸ್​, ನ್ಯೂರಾಲಜಿ, ಎಮರ್ಜೆನ್ಸಿ ಆ್ಯಂಡ್ ಟ್ರಾಮಾ ಮತ್ತು ಗ್ಯಾಸ್ಟ್ರೊಎಂಟೆರಾಲಜಿ/ಹೆಪಟಾಲಜಿಗಳಲ್ಲಿ ಯಾವುದಾದರೂ ಮೂರು ಅಥವಾ ಅದಕ್ಕಿಂತಲೂ ಹೆಚ್ಚಿನ ವಿಭಾಗಗಳನ್ನು ಹೊಂದಿರುವ ಆಸ್ಪತ್ರೆಗಳನ್ನಷ್ಟೇ ಪರಿಗಣಿಸಿ ಈ ಸರ್ವೇ ನಡೆಸಲಾಗಿದೆ.

    ಇದನ್ನೂ ಓದಿ: ರಿಲಯನ್ಸ್‌ನ ‘ಒನ್ ಸ್ಟಾಪ್ ಬ್ರೆಸ್ಟ್ ಕ್ಲಿನಿಕ್’ಗೆ ಚಾಲನೆ ನೀಡಿದ ನೀತಾ ಅಂಬಾನಿ

    ವೆಸ್ಟ್​ ರೀಜನ್​ ಮತ್ತು ಮುಂಬೈ ಎಂಬ ಎರಡು ವಿಭಾಗಗಳಲ್ಲಿ ಟಾಪ್​ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ಸ್ ಸರ್ವೇ ನಡೆಸಲಾಗಿದ್ದು, ಈ ಎರಡೂ ವಿಭಾಗಗಳಲ್ಲಿ ಸರ್​ ಎಚ್​ಎನ್​ ರಿಲಯನ್ಸ್​ ಫೌಂಡೇಷನ್​ ಹಾಸ್ಪಿಟಲ್​ ನಂಬರ್ ಒನ್​ ಎನಿಸಿಕೊಂಡಿದೆ. ಎಲ್ಲ ವೈದ್ಯರ ಹಾಗೂ ಸಿಬ್ಬಂದಿ ವರ್ಗದ ಅವಿರತ ಶ್ರಮ ಹಾಗೂ ನಿಸ್ವಾರ್ಥ ಮಾನವೀಯ ಸೇವೆಯಿಂದ ಇದು ಸಾಧ್ಯವಾಗಿದೆ ಎಂದು ರಿಲಯನ್ಸ್​ ಫೌಂಡೇಷನ್​ ಅಧ್ಯಕ್ಷೆ ನೀತಾ ಅಂಬಾನಿ ತಮ್ಮ ತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ಮಹಿಳಾ ಕ್ರಿಕೆಟ್​ ಅಭಿವೃದ್ಧಿಗೆ ನೀತಾ ಅಂಬಾನಿ ಬೆಂಬಲ; ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸುವ ಭರವಸೆ

    ‘ವಿಮೆನ್ಸ್​ ಟಿ-20 ಚಾಲೆಂಜ್​’ಗೆ ಜಿಯೋ ಬಲ; ಸಕಲ ಬೆಂಬಲ ಘೋಷಿಸಿದ ನೀತಾ ಅಂಬಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts