More

    ತಾಯಮ್ಮದೇವಿ ಮೆರವಣಿಗೆ ಅದ್ದೂರಿ

    ಸಿಂಧನೂರು: ನಗರದ ವಾರ್ಡ್ ನಂ.15 ಖದರಿಯಾ ಕಾಲನಿಯಲ್ಲಿರುವ ತಾಯಮ್ಮದೇವಿಯ ಜಾತ್ರಾ ಮಹೋತ್ಸವ ಬುಧವಾರ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ ನಗರದ ಎಪಿಎಂಸಿ ಗಣೇಶ ದೇವಸ್ಥಾನದ ಹತ್ತಿರ ಗಂಗೆಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿ, ನಂತರ ಅಲ್ಲಿಂದ ನೂರಾರು ಸುಮಂಗಲೆಯರು ಕುಂಭ ಕಳಸ ಹಿಡಿದು ಭಾಜಾ ಭಜಂತ್ರಿಯೊಂದಿಗೆ ವಿವಿಧ ರಸ್ತೆಗಳ ಮೂಲಕ ದೇವಸ್ಥಾನವರೆಗೆ ಮೆರವಣಿಗೆ ನಡೆಸಿದರು. ವೀರಗಾಸೆ ಹಾಗೂ ಯುವತಿಯರು ದೇವಿ ಕುಣಿತ ನೃತ್ಯ ನೋಡುಗರನ್ನು ಆಕರ್ಷಿಸಿತು. ಇದೇ ಸಂದರ್ಭದಲ್ಲಿ ಶಸ್ತ್ರ ಹಾಕಲಾಯಿತು. ಮೆರವಣಿಗೆ ದೇವಸ್ಥಾನಕ್ಕೆ ಬಂದು ಕಳಸಾರೋಹಣ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಮುಖರಾದ ಕಂಠಯ್ಯಸ್ವಾಮಿ, ವೀರಯ್ಯಸ್ವಾಮಿ, ಮಹಾಂತಪ್ಪ, ಬಸವರಾಜ ಮನ್ನಾಪುರ, ವೀರಭದ್ರಪ್ಪ ವಕೀಲ, ಭದ್ರಿಗೌಡ, ಶರಣಪ್ಪ ಅಗದಾಳ, ದೇವರೆಡ್ಡಿ ಇದ್ದರು.

    ಸಾಸಲಮರಿಕ್ಯಾಂಪ್: ತಾಲೂಕಿನ ಸಾಸಲಮರಿ ಕ್ಯಾಂಪಿನಲ್ಲಿ ವಿಜಯದಶಮಿ ಹಬ್ಬದ ಅಂಗವಾಗಿ ತಾಯಮ್ಮದೇವಿ ಜಾತ್ರೆ ಹಾಗೂ ಉಚ್ಚಾಯ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ದೇವಿ ಮೂರ್ತಿಗೆ ಅಭಿಷೇಕ, ಅಲಂಕಾರ, ಪೂಜಾ ಕೈಂಕರ್ಯಗಳು ನಡೆದವು. ಸಂಜೆ ಉತ್ಸವ ಮೂರ್ತಿಯನ್ನು ಸಿಂಗಾರಗೊಂಡ ಉಚ್ಚಾಯದಲ್ಲಿಟ್ಟು ಎಳೆಯಲಾಯಿತು. ಪ್ರಮುಖರಾದ ವೀರೇಶ ಮೂರ್ತಿ ದಢೇಸುಗೂರು, ಅಮರೇಶ್ವರ ಸಾಲಿಮಠ ಮಾನ್ವಿ, ಚಂದ್ರಶೇಖರಯ್ಯಸ್ವಾಮಿ, ಮುಖಂಡರಾದ ಭವಾನೆಪ್ಪ, ಸಣ್ಣ ಮರಿಯಪ್ಪ ಭೋವಿ, ಗಿಡ್ಡ ಹನುಮಂತಪ್ಪ ಇಂಗಳದಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts