More

    ಸಿಂಧನೂರಿಗೆ ಚುಕುಬುಕು ಆರಂಭಕ್ಕೆ ಗ್ರೀನ್ ಸಿಗ್ನಲ್

    ಸಿಂಧನೂರು: ಮುನಿರಾಬಾದ್-ಮಹಿಬೂಬ ನಗರ ಸಂಪರ್ಕ ಕಲ್ಪಿಸುವ ಮಹತ್ವಕಾಂಕ್ಷೆಯ ರೈಲು ಯೋಜನೆ ಸಿಂಧನೂರಿಗೆ ಬಂದು ತಲುಪಿದ್ದು, ಶೀಘ್ರದಲ್ಲಿಯೇ ರೈಲು ಓಡಾಟ ಆರಂಭಗೊಳ್ಳಲಿದೆ. ಪರೀಕ್ಷಾರ್ಥವಾಗಿ ರೈಲು ಓಡಾಡಿರುವುದು, ರೈಲು ನಿಲ್ದಾಣ ಉದ್ಘಾಟನೆಗೆ ಸಿಂಗಾರಗೊಂಡಿರುವುದು ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನವೇ ಉದ್ಘಾಟನೆಗೊಳ್ಳವ ಸಾಧ್ಯತೆ ನಿಚ್ಚಳವಾಗಿದೆ.

    ಇದನ್ನೂ ಓದಿ: ಈತನ ಹೆಸರು ಸಚಿನ್, ಇಷ್ಟದ ಕ್ರಿಕೆಟಿಗ ವಿರಾಟ್ ಕೊಹ್ಲಿ!: ಭಾರತ ಕಿರಿಯರ ತಂಡದ ಗೆಲುವಿನ ರೂವಾರಿ 

    ಯೋಜನೆಯನ್ನು 1999 ರಲ್ಲಿಯೇ ಆರಂಭಿಸಲಾಗಿತ್ತು. ಇಲ್ಲಿಯವರೆಗೆ ಕಾರಟಗಿಯಿಂದ ಮಾತ್ರ ರೈಲು ಓಡಿಸಲು ಸಾಧ್ಯವಾಗಿತ್ತು. ಸಿಂಧನೂರಿಗೆ ರೈಲು ಬರುವುದ್ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಕೂಡ ಸಿಕ್ಕಿರಲಿಲ್ಲ. ಒಟ್ಟು 274 ಕಿಮೀ ಉದ್ದದ ಯೋಜನೆ ಇದಾಗಿದೆ. ಸದ್ಯ ಸಿಂಧನೂರುವರೆಗೆ ಮಾತ್ರ ರೈಲ್ವೆ ಯೋಜನೆ ಪೂರ್ಣಗೊಳಿಸಲಾಗಿದ್ದು, ಇನ್ನೂ ಸಿಂಧನೂರಿನಿಂದ ರಾಯಚೂರುವರೆಗೆ ಯೋಜನೆ ಪೂರ್ಣಗೊಳ್ಳಬೇಕಿದೆ.

    ಹಲವು ವರ್ಷಗಳಿಂದ ಕಾಮಗಾರಿ ಪೂರ್ಣಗೊಳಿಸಲು ಮೀನಮೇಷ ಏಣಿಸಲಾಗುತ್ತಿತ್ತು. ಕೊನೆಗೂ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಅವಧಿ ಮುಗಿಯುವ ಹೊತ್ತಿಗೆ ಸಿಂಧನೂರಿಗೆ ರೈಲು ತರಲೇಬೇಕೆಂದು ಪಣ ತೊಟ್ಟಿದ್ದರು. 2023 ರಲ್ಲಿಯೇ ರೈಲ್ವೆ ಯೋಜನೆಯಡಿ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಆರಂಭದಲ್ಲಿ ಗೊರೇಬಾಳವರೆಗೆ ಪ್ರಾಯೋಗಿಕ ರೈಲು ಓಡಿಸಲಾಗಿತ್ತು. ಸಿಂಧನೂರು ಹತ್ತಿರ ಬಾಕಿ ಇದ್ದ ಸೇತುವೆ ನಿರ್ಮಾಣ ಮಾಡಲಾಗಿತ್ತು. ತಾಲೂಕು ವ್ಯಾಪ್ತಿಯ 14 ಕಿಮೀ ವ್ಯಾಪ್ತಿಯಲ್ಲಿ ಹಳಿ ಅಳವಡಿಸುವ ಕಾರ್ಯವು ಡಿಸೆಂಬರ್‌ನಲ್ಲಿಯೇ ಮುಗಿಸಲಾಗಿತ್ತು. ರೈಲ್ವೆ ನಿಲ್ದಾಣಕ್ಕೂ ಸುಣ್ಣಬಣ್ಣ, ಸಿಗ್ನಲ್, ಎಲೆಕ್ಟ್ರಿಕಲ್ ಕೆಲಸ ಪೂರ್ಣಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts