More

    25 ಕ್ಯಾಂಪ್‌ಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ; ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಹೇಳಿಕೆ

    ಸಿಂಧನೂರು: ಆಂಧ್ರಮೂಲದವರೇ ಹೆಚ್ಚು ವಾಸಿಸುವ ತಾಲೂಕಿನ ಸುಮಾರು 25 ಕ್ಯಾಂಪ್‌ಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಶೀಘ್ರ ಈ ಕುರಿತ ಆದೇಶವನ್ನು ಪ್ರಕಟ ಮಾಡಲಿದೆ ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಹೇಳಿದರು.

    ನಗರದಲ್ಲಿ ಕಮ್ಮವಾರಿ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕ ವನಭೋಜನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. 25 ಕ್ಯಾಂಪ್‌ಗಳ ಪೈಕಿ 21ರಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ಇನ್ನೂ 4 ಕ್ಯಾಂಪ್‌ಗಳ ಸರ್ವೇ ಪ್ರಗತಿ ಹಂತದಲ್ಲಿದೆ. ಶ್ರೀಕೃಷ್ಣದೇವರಾಯನ ಕಾಲದಿಂದಲೂ ಕರ್ನಾಟಕ-ಆಂಧ್ರದವರು ಸಹೋದರರಂತೆ ಸಹಬಾಳ್ವೆ ಸಾಗಿಸುತ್ತಿದ್ದೇವೆ. ನಾವು ಬೆಳೆಯಬೇಕು. ನಮ್ಮೊಂದಿಗಿರುವವರನ್ನು ಬೆಳೆಸುವುದೇ ಮಾನವೀಯತೆ ಎಂದರು.

    ಬೆಂಗಳೂರಿನ ಅಮೃತಾ ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಪಿ.ವಿ.ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಕರ್ನಾಟಕ ಕಮ್ಮವಾರಿ ಸಂಘದ ಅಧ್ಯಕ್ಷ ಗಾರಪಾಟಿ ರಾಮಕೃಷ್ಣ, ತಾಲೂಕು ಅಧ್ಯಕ್ಷ ಪಿನ್ನಮನೇನಿ ಮುರಳಿಕೃಷ್ಣ, ಪ್ರಧಾನ ಕಾರ್ಯದರ್ಶಿ ನಲ್ಲಾ ವೆಂಕಟೇಶ್ವರ ರಾವ್, ಆಂಧ್ರಪ್ರದೇಶದ ಕಾಕತೀಯ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವೆಂಕಟರಾವ, ತಮಿಳುನಾಡು ಕಮ್ಮವಾರಿ ಸಂಘದ ಉಪಾಧ್ಯಕ್ಷ ರವಿಶಂಕರ, ತಮಿಳುನಾಡು ಕಮ್ಮನಾಯ್ಡು ಮಹಾಜನಸಂಘದ ಕಾರ್ಯದರ್ಶಿ ಧನಶೇಖರ ನಾಯ್ಡು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts