More

    ಸಂಸ್ಕಾರಯುತ ಶಿಕ್ಷಣ ನೀಡಲು ಬದ್ಧರಾಗಿ; ಶಾಸಕ ವೆಂಕಟರಾವ ನಾಡಗೌಡ ಸಲಹೆ


    ಸಿಂಧನೂರು: ತಾಲೂಕಿನ ಎಲ್ಲ ಮಕ್ಕಳಿಗೆ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಲು ಬದ್ಧರಾಗಬೇಕು ಎಂದು ಶಿಕ್ಷಕರಿಗೆ ಶಾಸಕ ವೆಂಕಟರಾವ ನಾಡಗೌಡ ಸಲಹೆ ನೀಡಿದರು.

    ತಾಲೂಕಿನ ಕಲ್ಲೂರಲ್ಲಿ ಆರೋಗ್ಯ ಇಲಾಖೆಯಿಂದ 12 ಕೋಟಿ ರೂ. ವೆಚ್ಚದ 60 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಮಾತನಾಡಿದರು. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು. ನಗರ ವ್ಯಾಪ್ತಿಯಲ್ಲಿ 2 ಎಕರೆ ಜಾಗ ಸಿಗದ ಕಾರಣ ಹೊರವಲಯದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದರು.

    ಸಂಸದ ಸಂಗಣ್ಣ ಕರಡಿ, ಮುಖಂಡರಾದ ಧರ್ಮನಗೌಡ, ವೆಂಕೋಬಣ್ಣ, ವೆಂಕಟೇಶ ನಂಜಲದಿನ್ನಿ, ಶಂಕರಗೌಡ ಗದ್ರಟಗಿ, ಬಿಇಒ ಶರಣಪ್ಪ ವಟಗಲ್, ಪಿಡಬ್ಲುೃಡಿ ಎಇಇ ಸಿ.ಎಸ್.ಪಾಟೀಲ್, ಗುತ್ತಿಗೆದಾರ ಜಕರಾಯ, ಸಂಗಮೇಶ ಹತ್ತಿಗುಡ್ಡ ಇದ್ದರು.

    ಆಕ್ರೋಶ: ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿ ಚಾಲನೆ ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಆಹ್ವಾನಿಸಿಲ್ಲ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರೂಪಾಪುರ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts