More

    ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

    ಸಿಂದಗಿ: ಪ್ರತಿ ಗ್ರಾಮಕ್ಕೂ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಾಗಿದ್ದು, ಜನಸೇವೆ ನನ್ನ ಗುರಿಯಾಗಿದೆ ಎಂದು ಶಾಸಕ ಎಂ.ಸಿ. ಮನಗೂಳಿ ಹೇಳಿದರು.
    ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಗ್ರಾಮದ ಅಲ್ಪಸಂಖ್ಯಾತರ ಕಾಲನಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಈದ್ಗಾ ಮೈದಾನದ ಬಳಿ 4 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
    ಸರ್ವ ಜನಾಂಗದ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ರಸ್ತೆ, ಶುದ್ಧ ಕುಡಿಯುವ ನೀರು, ಶಾಲೆ ಕೋಣೆ, ಸಮುದಾಯ ಭವನ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ತಾಲೂಕಿನಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಕ್ಷೇತ್ರದಲ್ಲಿ ಯಾವುದೇ ತೊಂದರೆಯಿದ್ದರೂ ಸ್ಪಂದಿಸುತ್ತೇನೆ. ನನ್ನ ಜನತೆ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಎಂಥದ್ದೆ ತೊಂದರೆ ಎದುರಾದರೂ ಅದನ್ನು ನಿಭಾಯಿಸಲು ನಾನು ಸಿದ್ಧ ಎಂದರು.
    ಜೆಡಿಎಸ್ ಮುಖಂಡರಾದ ರವಿರಾಜ್ ದೇವರಮನಿ, ಗೊಲ್ಲಾಳಪ್ಪಗೌಡ ಪಾಟೀಲ, ರುದ್ರಣ್ಣಸಾಹು ಮಾನಶೆಟ್ಟಿ, ಮಹೇಶ ಮನಗೂಳಿ, ಪ್ರಭಾಕರ ಪತ್ತಾರ, ಯಂಕನಗೌಡ ಪಾಟೀಲ, ಅಮದು ಅಗಸಿಮನಿ, ಲಾಳೇಮಶ್ಯಾಕ ಅರ್ಜುಣಗಿ, ಕೆ.ಕೆ.ಸೀತನೂರ, ಶ್ರೀಶೈಲ ಜಾಲವಾದಿ, ಲಾಲಸಾ ರಾಜಕೋಳ, ಮಲ್ಲಿಕಾರ್ಜುನ ಮನಗೂಳಿ, ರಾಚನಗೌಡ ಪಾಟೀಲ, ಹಣಮಂತ ಯಂಟಮಾನ, ಭೀಮಾಜಿ ಕುಲಕರ್ಣಿ, ಮೈಬೂಬ ಜೋಗೂರ, ಅಮೀನಸಾಬ ಶಾಬಾದಿ, ಅಮೀನಸಾಬ ಹೊಸಮನಿ, ಪುಂಡಲೀಕ ರಾಠೋಡ, ಜಿಪಂ ಸಹಾಯಕ ಇಂಜಿನಿಯರ್ ಮುಪ್ಪಯ್ಯನವರ ಎಂ.ಎನ್. ಇತರರು ಇದ್ದರು.
    ಬ್ರಹ್ಮದೇವನಮಡು ಗ್ರಾಮದಲ್ಲಿ ದಲಿತ ಸಂಘಟನೆ ಪದಾಧಿಕಾರಿಗಳು ಶಾಸಕ ಎಂ.ಸಿ.ಮನಗೂಳಿ ಅವರಿಗೆ ಮನವಿ ಮಾಡಿದ ಹಿನ್ನೆಲೆ ಗ್ರಾಮದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಮೂರ್ತಿ ನಿರ್ಮಾಣಕ್ಕೆ 1 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದರು. ಡಿಎಸ್‌ಎಸ್ ತಾಲೂಕು ಸಂಚಾಲಕ ಶ್ರೀಶೈಲ ಜಾಲವಾದಿ, ಗೊಲ್ಲಾಳಪ್ಪ ಕೆಂಭಾವಿ, ಭೀಮರಾಯ ಕೆಂಭಾವಿ, ಮನೋಹರ ಗುಡಿಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts