More

    ಹತ್ಯೆ ಘಟನೆ ರಾಜ್ಯ ಸರ್ಕಾರದ ಜೀವಂತಿಕೆ ಪ್ರಶ್ನಿಸುವಂತಿದೆ

    ಸಿಂದಗಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ಮಂಡಲ, ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ನೂರಾರು ಕಾರ್ಯಕರ್ತರು ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಶನಿವಾರ ಟಯರ್‌ಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ ರಾಜ್ಯ ಸರ್ಕಾರದ ಜೀವಂತಿಕೆ ಪ್ರಶ್ನಿಸುವಂತಾಗಿದೆ. ಕಾಲೇಜು ಆವರಣದಲ್ಲಿಯೇ ಯುವತಿಗೆ ಹತ್ತಾರು ಬಾರಿ ಚೂರಿಯಿಂದ ಇರಿದು ಕೊಂದಿರುವ ಘಟನೆ ಬಗ್ಗೆ ಗೃಹಮಂತ್ರಿ ನೀಡಿರುವ ಹೇಳಿಕೆ ಅವರ ಮನೆಯಲ್ಲಿ ಮಹಿಳೆಯರಿದ್ದಾರೆಯೋ ? ಇಲ್ಲವೆಂದು ಚಿಂತಿಸುವಂತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ನಿರ್ಲಕ್ಷೃದ ನಡೆಯನ್ನು ಕ್ಷಮಿಸಲಾಗಲ್ಲ. ಆರೋಪಿಯನ್ನು ತಕ್ಷಣವೇ ಜೀವಾವಧಿ ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಿದರು.

    ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ, ಶಂಕರಯ್ಯ ಹಿರೇಮಠ, ಗುರು ತಳವಾರ, ಸಿದ್ರಾಮ ಆನಗೊಂಡ, ನೀಲಮ್ಮ ಯಡ್ರಾಮಿ, ಶಿಲ್ಪಾ ಕುದರಗೊಂಡ, ಬಸನಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಎಸ್.ಆರ್.ಪಾಟೀಲ, ಅಶೋಕ ನಾರಾಯಣಕರ ಸೇರಿದಂತೆ ಮತ್ತಿತರರು ಮಾತನಾಡಿ, ಆರೋಪಿ ಫಯಾಜ್‌ನನ್ನು ಗಲ್ಲಿಗೇರಿಸಬೇಕು ಎಂದು ತಹಸೀಲ್ದಾರ್ ಡಾ.ಪ್ರವೀಣಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

    ಮಲಕಾಜಯ್ಯ ಹಿರೇಮಠ, ಶಿವು ಹಳೇಮನಿ, ಖಾಜು ಬಂಕಲಗಿ, ಚೇತನ ರಾಂಪುರ, ವಿಠ್ಠಲ ನಾಯ್ಕೋಡಿ, ಜಯಶ್ರೀ ನಾಟಿಕಾರ, ಅನ್ನಪೂರ್ಣ ದೇವರಡ್ಡಿ, ಲಕ್ಷ್ಮೀ ಕಲಾಲ, ಶೈಲಾ ಮಂದೇವಾಲಿ, ಅನುಸೂಯಾ ಪಾರಗೊಂಡ ಇತರರಿದ್ದರು.

    ಎಬಿವಿಪಿಯಿಂದಲೂ ಪ್ರತಿಭಟನೆ
    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಜೆ.ಎನ್.ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.
    ವಿದ್ಯಾರ್ಥಿ ಮುಖಂಡರು ಮಾತನಾಡಿ, ಇಂತಹ ಹೀನ ಕೃತ್ಯಗಳು ದಿನೇ ದಿನೆ ಮರುಕಳಿಸುತ್ತಿವೆ. ಜನರ ನಂಬಿಕೆ ಕಳೆದುಕೊಳ್ಳುತ್ತಿರುವ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಹೆಣವಾಗಿ ಬರುತ್ತಾರೆ ಎಂಬ ಆತಂಕ ತಂದೊಡ್ಡಿದ ಈ ಘಟನೆ ನಡೆದಿದ್ದು ನೋವಿನ ಸಂಗತಿಯಾಗಿದೆ. ಇಂತಹ ಕೃತ್ಯಗಳು ನಡೆಯದಂತೆ ಸರ್ಕಾರ ಎಚ್ಚರಗೊಳ್ಳಬೇಕು ಎಂದರು. ಕಾರ್ಯಕರ್ತರಾದ ಭೀಮಾಶಂಕರ ಮಠ, ಆಕಾಶ ಬಿರಾದಾರ, ಭಾಗೇಶ ಭೀಮನಹಳ್ಳಿ, ಅನೀಲ ಕುಂಬಾರ, ಪ್ರಕಾಶ ಸೇರಿ ಪರಿಷತ್ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts