More

  ಪ್ರತಿಯೊಬ್ಬರೂ ತಪ್ಪದೆ ಹಕ್ಕು ಚಲಾಯಿಸಿ

  ಸಿಂದಗಿ: ನಗರದ ಬಸವೇಶ್ವರ ವೃತ್ತದಲ್ಲಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಮತ್ತು ತಾಪಂ ಹಾಗೂ ಶಿಕ್ಷಣ ಇಲಾಖೆ, ಪುರಸಭೆ, ಸಿಡಿಪಿಒ ಕಚೇರಿ ಸಿಬ್ಬಂದಿ ಸಹಯೋಗದಲ್ಲಿ ಗುರುವಾರ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.

  ಪ್ರತಿಜ್ಞಾವಿಧಿ ಸ್ವೀಕಾರದ ನಂತರ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನಕ್ಕೆ ತಾಪಂ ಇಒ ಸುಬ್ರಮಣ್ಯ ಶರ್ಮಾ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, 2024 ರ ಲೋಕಸಭಾ ಚುನಾವಣೆ ಮೇ 7 ರಂದು ನಡೆಯಲಿದ್ದು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತ್ತು ಮುಕ್ತ, ನ್ಯಾಯಸಮ್ಮತವಾಗಿ ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿದರು.

  ಮತದಾನ ಜಾಗೃಥಿ ಅಭಿಯಾನ ಬಸವೇಶ್ವರ, ಕನಕದಾಸ, ಅಂಬಿಗರ ಚೌಡಯ್ಯ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತದ ಮಾರ್ಗವಾಗಿ ತಾಲೂಕು ಪಂಚಾಯಿತಿ ಕಚೇರಿ ತಲುಪಿತು.

  ಆಲಮೇಲ ಇಒ ಫರೀದಾ ಪಠಾಣ, ಬಿಇಒ ಆರ್ಿ ಬಿರಾದಾರ, ಸಿಡಿಪಿಒ ಶಂಭುಲಿಂಗ ಹಿರೇಮಠ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ನರೇಗಾ ನೌಕರರು, ಗ್ರಾಮ ಕಾಯಕ ಮಿತ್ರರು, ಮಹಿಳಾ ಒಕ್ಕೂಟದ ಸದಸ್ಯರು, ಆಶಾ- ಅಂಗನವಾಡಿ ಕಾರ್ಯಕರ್ತೆಯರು, ವಿಕಲಚೇತನರ ಒಕ್ಕೂಟ ಹಾಗೂ ವಿದ್ಯಾರ್ಥಿಗಳು ಮತ್ತು ತಾಲೂಕು ಮಟ್ಟದ ಸಿಬ್ಬಂದಿ ಇದ್ದರು.

  See also  ಮಹಿಳೆಯರು ಆರೋಗ್ಯವಾಗಿದ್ದರೆ ಸಮಾಜದ ಆರೋಗ್ಯವಂತ ಸ್ಥಿರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts