More

    ಅ.17ರಿಂದ ಕಬ್ಬು ನುರಿಸುವ ಹಂಗಾಮು ಪ್ರಾರಂಭ

    ಖಾನಾಪುರ: ಸಮೀಪದ ಕುಪ್ಪಟಗಿರಿಯ ಲೈಲಾ ಶುಗರ್ಸ್ ಸಕ್ಕರೆ ಕಾರ್ಖಾನೆಯ ಈ ವರ್ಷದ ಕಬ್ಬು ನುರಿಸುವ ಹಂಗಾಮನ್ನು ಅಕ್ಟೋಬರ್ 17ರಂದು ಪ್ರಾರಂಭಿಸಲಾಗುವುದು ಎಂದು ತೋಪಿನಕಟ್ಟಿ ಮಹಾಲಕ್ಷ್ಮೀ ಗ್ರುಪ್ ಸಂಸ್ಥಾಪಕ ವಿಠ್ಠಲ ಹಲಗೇಕರ ಹೇಳಿದ್ದಾರೆ.

    ಗುರುವಾರ ಕಾರ್ಖಾನೆ ಸಭಾಂಗಣದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈ ವರ್ಷದ ಕಬ್ಬು ನುರಿಸುವ ಹಂಗಾಮಿನ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದೆ. ಈ ವರ್ಷದಿಂದ ಕಾರ್ಖಾನೆಯಲ್ಲಿ ಕಬ್ಬು ಕಟಾವು, ಕಬ್ಬು ಸಾಗಣೆ ಮತ್ತು ನುರಿಸುವಲ್ಲಿ ಸಂಪೂರ್ಣವಾಗಿ ಪಾರದರ್ಶಕ ಪದ್ಧತಿ ಅನುಸರಿಸಲಾಗುವುದು. ರೈತರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಖಾನೆಯ ವತಿಯಿಂದ 24*7 ಕಾರ್ಯನಿರ್ವಹಿಸುವ ಟೋಲ್ ಫ್ರೀ ಸಂಖ್ಯೆಗೆ ಚಾಲನೆನೀಡಲಾಗಿದೆ. ರೈತರು, ವಾಹನ ಮಾಲೀಕರು, ಚಾಲಕರು, ಕಬ್ಬು ಕಟಾವು ಮಾಡುವವರು, ಸಾರ್ವಜನಿಕರು ಸಲಹೆ, ಸೂಚನೆ ಹಾಗೂ ಮಾಹಿತಿಗಳ ವಿನಿಮಯಕ್ಕಾಗಿ ಟೋಲ್ ಫ್ರೀ ಸಂಖ್ಯೆ 8095406999ಗೆ ಸಂಪರ್ಕಿಸುವಂತೆ ಅವರು ಕೋರಿದರು.

    ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಮಾತನಾಡಿ, ಕಾರ್ಖಾನೆಗೆ ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರ ಬ್ಯಾಂಕ್ ಖಾತೆಗಳಿಗೆ ಎರಡನೇ ಕಂತಿನ ರೂಪದಲ್ಲಿ ಪ್ರತಿ ಟನ್ ಕಬ್ಬಿಗೆ 300 ರೂ. ಹಣ ಜಮೆ ಮಾಡಲಾಗಿದೆ. ಕಾರ್ಖಾನೆ ಮೊದಲೇ ಘೋಷಿಸಿದಂತೆ ರೈತರಿಗೆ 2,500 ರೂ. ದರ ನೀಡಿ ತನ್ನ ಮಾತು ಉಳಿಸಿಕೊಂಡಿದೆ. ಈ ಮೊದಲು 2,200 ರೂ. ಪಾವತಿಸಿದ್ದು, ಈಗ ಉಳಿದ ಬಿಲ್ಲನ್ನು ಆಯಾ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

    2018-19ರ ಹಂಗಾಮಿನ ಕಬ್ಬಿನ ಬಾಕಿ 159 ರೂ. ಬಿಲ್ ಅನ್ನು ಕಾರ್ಖಾನೆ ರೈತರಿಗೆ ನೀಡಬೇಕಿದೆ. ಈ ಬಿಲ್ ವಿಷಯವಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದಿಂದ ಕಬ್ಬಿನ ಸಬ್ಸಿಡಿ ಬಿಡುಗಡೆಗೊಂಡ ಬಳಿಕ ಬಾಕಿ ಬಿಲ್ ಪಾವತಿಸಲಾಗುವುದು ಎಂದು ತಿಳಿಸಿದರು. ತೋಪಿನಕಟ್ಟಿ ಮಹಾಲಕ್ಷ್ಮೀ ಗ್ರುಪ್‌ನ ವಿಠ್ಠಲ ಕರಂಬಳಕರ, ಚಾಂಗಪ್ಪ ನಿಲಜಕರ, ಯಲ್ಲಪ್ಪ ತಿರವೀರ, ತುಕಾರಾಮ ಹುಂದರೆ, ಸುರೇಶ ಕೋಲಕಾರ ಹಾಗೂ ಕಾರ್ಖಾನೆ ಸಿಬ್ಬಂದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts